WhatsApp Features: ಈ ಐದು ವಾಟ್ಸ್​​ಆ್ಯಪ್​ ಫೀಚರ್​ ಬಗ್ಗೆ ನೀವು ತಿಳಿದಿರಲೇಬೇಕು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 02, 2021 | 8:06 PM

ಪ್ರತಿ ಬಾರಿಯೂ ಹೊಸ ಹೊಸ ಅಪ್​ಡೇಟ್​ಗಳನ್ನು ಬಿಡುವ ಮೂಲಕ ತನ್ನ ಬಳಕೆದಾರರಿಗೆ ಸುಲಭವಾಗುವಂತೆ ಮಾಡುತ್ತಿದೆ ವಾಟ್ಸಾಪ್​. ಹಾಗಾದರೆ ವಾಟ್ಸ್​​​ಆ್ಯಪ್​​ನಲ್ಲಿರುವ ಹಿಡೆನ್​ ಫೀಚರ್​ಗಳು ಯಾವವು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

WhatsApp Features: ಈ ಐದು ವಾಟ್ಸ್​​ಆ್ಯಪ್​ ಫೀಚರ್​ ಬಗ್ಗೆ ನೀವು ತಿಳಿದಿರಲೇಬೇಕು
ಸಾಂದರ್ಭಿಕ ಚಿತ್ರ
Follow us on

ಗೌಪ್ಯತಾ ನೀತಿ ಬದಲಾವಣೆ ನಿರ್ಧಾರದಿಂದ ವಾಟ್ಸ್​​​ಆ್ಯಪ್​​ ಒಂದಷ್ಟು ಬಳಕೆದಾರರನ್ನು ಕಳೆದುಕೊಂಡಿದ್ದಂತೂ ಸತ್ಯ. ಆದರೆ, ಇದು ವಾಟ್ಸ್​ಆ್ಯಪ್​ಗೆ ದೊಡ್ಡ ಮಟ್ಟದಲ್ಲಿ ಹೊಡೆತ ನೀಡಿಲ್ಲ. ವಾಟ್ಸ್​ಆ್ಯಪ್​ ವಿಶ್ವಾದ್ಯಂತ ಬರೋಬ್ಬರಿ 200 ಕೋಟಿ ಬಳಕೆದಾರರನ್ನು ಹೊಂದಿದೆ. ಪ್ರತಿ ಬಾರಿಯೂ ಹೊಸ ಹೊಸ ಅಪ್​ಡೇಟ್​ಗಳನ್ನು ಬಿಡುವ ಮೂಲಕ ತನ್ನ ಬಳಕೆದಾರರಿಗೆ ಸುಲಭವಾಗುವಂತೆ ಮಾಡುತ್ತಿದೆ ವಾಟ್ಸ್​ಆ್ಯಪ್​​. ಹಾಗಾದರೆ ವಾಟ್ಸ್​​​ಆ್ಯಪ್​​ನಲ್ಲಿರುವ ಹಿಡೆನ್​ ಫೀಚರ್​ಗಳು ಯಾವವು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಬ್ಲ್ಯೂ ಟಿಕ್​ ಹೈಡ್​
ವಾಟ್ಸ್​​​ಆ್ಯಪ್​ನಲ್ಲಿ ನೀವು ಕಳುಹಿಸಿದ ಮೆಸೇಜ್​ ಅನ್ನು ಮತ್ತೊಂದು ಕಡೆಯಲ್ಲಿದ್ದವರು ಓದಿದರೆ ಬ್ಲ್ಯೂ ಟಿಕ್​ ಬರುತ್ತದೆ. ಕೆಲವೊಮ್ಮೆ ಕಳುಹಿಸಿದ ಮೆಸೇಜ್​ಗೆ ಬ್ಲ್ಯೂ ಟಿಕ್​ ಬಂದರೂ ರಿಪ್ಲೈ ಮಾಡುತ್ತಿಲ್ಲ ಎಂದು ಜಗಳ ಮಾಡಿದ ಉದಾಹರಣೆ ಇರಬಹುದು. ಹೀಗಾಗಿ ಬ್ಲ್ಯೂ ಟಿಕ್​ ತೆಗೆದು ಬಿಟ್ಟರೆ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಹಾಗಾದರೆ ಇದನ್ನು ತೆಗೆಯೋದು ಹೆಗೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
ವಾಟ್ಸ್​​ಆ್ಯಪ್​ ಸೆಟ್ಟಿಂಗ್​​ > ಅಕೌಂಟ್​​​ > ಪ್ರವೈಸಿ > ​Read Receipts ಅನ್ನು ಅನ್​ಟಿಕ್​ ಮಾಡಿ. (ಇದು ಗ್ರೂಪ್​ ಚ್ಯಾಟ್​ಗೆ ಅಪ್ಲೈ ಆಗುವುದಿಲ್ಲ)

ಪ್ರೊಫೈಲ್​ ಪಿಕ್ಚರ್​ ಹೈಡ್ ಮಾಡೋದು ಹೇಗೆ?
ನೀವು ಕೆಲವೊಮ್ಮೆ ಪ್ರೊಫೈಲ್​ ಪಿಕ್ಚರ್​ ತೆಗೆಯದೆಯೂ ಅದನ್ನು ಹೈಡ್​ ಮಾಡಬಹುದು. ಅದು ಹೇಗೆ ಎನ್ನುವುದಕ್ಕೆ ಇಲ್ಲಿದೆ ಉತ್ತರ. ಅದಕ್ಕೆ ನೀವು ಹೀಗೆ ಮಾಡಿ.
ಸೆಟ್ಟಿಂಗ್​ > ಅಕೌಂಟ್​ > ಪ್ರೈವೆಸಿ > ಪ್ರೊಫೈಲ್​ ಫೋಟೊಗೆ ಹೋಗಿ. ಈ ವೇಳೆ ನಿಮಗೆ ಎವರಿವನ್​, ಮೈ ಕಾಂಟ್ಯಾಕ್ಟ್ಸ್​​, ನೋಬಡಿ ಎನ್ನುವ ಆಯ್ಕೆ ಸಿಗುತ್ತದೆ. ಈ ವೇಳೆ ನೋಬಡಿ ಎನ್ನುವ ಆಯ್ಕೆ ಕ್ಲಿಕ್​ ಮಾಡಿದರೆ ಪ್ರೊಫೈಲ್​ ಪಿಕ್ಚರ್​ ಯಾರಿಗೂ ಕಾಣುವುದಿಲ್ಲ.

ಗ್ರೂಪ್​ ಮೆಸೇಜ್​ಗಳಿಗೆ ಪ್ರೈವೇಟ್​ ಆಗಿ ರಿಪ್ಲೈ ಮಾಡೋದು ಹೇಗೆ?
ಯಾರೋ ಏನನ್ನೋ ಗ್ರೂಪ್​ನಲ್ಲಿ ಹಾಕುತ್ತಾರೆ. ಅದರ ಬಗ್ಗೆ ನಿಮಗೆ ಗ್ರೂಪ್​ನಲ್ಲೇ ರಿಪ್ಲೈ ಮಾಡಲು ಇಷ್ಟವಿರುವುದಿಲ್ಲ. ಈ ವೇಳೆ ಸಹಾಯಕ್ಕೆ ಬರುವುದೇ ಖಾಸಗಿಯಾಗಿ ಉತ್ತರಿಸಿ (Reply Privately) ಎನ್ನುವ ಆಯ್ಕೆ. ಗ್ರೂಪ್​ನಲ್ಲಿ ಬಂದ ಚ್ಯಾಟ್​ ಮೇಲೆ ಕ್ಲಿಕ್​ ಮಾಡಿ. ಈ ವೇಳೆ ಅಲ್ಲಿ Reply Privately ಎನ್ನುವ ಆಯ್ಕೆ ಸಿಗುತ್ತದೆ.

ಆಟೋ ಡೌನ್​ಲೋಡ್​
ಕೆಲ ಗ್ರೂಪ್​ಗಳಲ್ಲಿ ನೀವು ಅನಿವಾರ್ಯವಾಗಿ ಇರಬೇಕಾಗುತ್ತದೆ. ಆದರೆ, ಮೀಡಿಯಾ ಆಟೋ ಡೌನ್​ಲೋಡ್​ ಆಯ್ಕೆಯಿಂದ ಈ ಗ್ರೂಪ್​ನ ಮೀಡಿಯಾ ಡೌನ್​ಲೋಡ್​ ಆಗುತ್ತದೆ. ಇದರಿಂದ ನಿಮ್ಮ ಸ್ಟೋರೇಜ್​ಗೆ ಸಮಸ್ಯೆ ಉಂಟಾಗಬಹುದು. ಈ ಆಟೋ ಡೌನ್​ಲೋಡ್​ ಆಯ್ಕೆಯನ್ನು ತೆಗೆದು ಹಾಕಬಹುದು.
ವಾಟ್ಸ್​​ಆ್ಯಪ್​ ಸೆಟ್ಟಿಂಗ್ > ಮೀಡಿಯಾ ಆಟೋ ಡೌನ್​ಲೋಡ್​ > ಆಟೋ ಡೌನ್​ಲೋಡ್​ ಡಿಸೇಬಲ್​

ಬ್ಲಾಕ್​ ಮಾಡುವುದು ಹೇಗೆ?
ನಿಮಗೆ ಸಂಬಂಧ ಇಲ್ಲದವರು ವಾಟ್ಸ್​​ ಆ್ಯಪ್​ನಲ್ಲಿ ನಿಮಗೆ ತೊಂದರೆ ಕೊಡುತ್ತಿದ್ದಾರೆ ಎಂದಾದರೆ ಆಗ ಸಿಗುವ ಆಯ್ಕೆಯೇ ಬ್ಲಾಕ್​. ನಿಮಗೆ ಯಾವ ಕಾಂಟ್ಯಾಕ್ಟ್​ ಬ್ಲಾಕ್​ ಮಾಡಬೇಕೋ ಅಲ್ಲಿಗೆ ತೆರಳಿ. ಅಲ್ಲಿ ಕಾಂಟ್ಯಾಕ್ಟ್​ ಬ್ಲಾಕ್​ ಆಯ್ಕೆಯನ್ನು ಒತ್ತಿ.

ಇದನ್ನೂ ಓದಿ: WhatsApp Privacy: ವಾಟ್ಸ್ಆ್ಯಪ್ ಗೌಪ್ಯತೆ ನೀತಿಯನ್ನು ಗ್ರಾಹಕರು ಪಾಲಿಸದೇ ಇದ್ದರೆ ಏನಾಗುತ್ತೆ?