ಪತಿಯ ಅಕ್ರಮ ಸಂಬಂಧಕ್ಕೆ ಮನನೊಂದು ಪತ್ನಿ ಆತ್ಮಹತ್ಯೆ, ಪತಿರಾಯ ಆಸ್ಪತ್ರೆ ಪಾಲು
ಚಿಕ್ಕಮಗಳೂರು: ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕೆಂಪನಹಳ್ಳಿ ಬಡಾವಣೆಯಲ್ಲಿ ನಡೆದಿದೆ. ರಂಜಿತಾ (23) ನೇಣಿಗೆ ಶರಣಾದ ಗೃಹಿಣಿ. ರಂಜಿತಾ ಆತ್ಮಹತ್ಯೆಗೂ ಮೊದಲು ತಾನು ಸಾಯುವುದಾಗಿ ಪತಿ ಅರುಣ್ ಕುಮಾರ್ ಬಳಿ ಹೇಳಿಕೊಂಡಿದ್ದಳು. ಅದಕ್ಕೆ ಸರಿ ನಾನೂ ವಿಷ ಕುಡಿಯುತ್ತೇನೆ, ನೀನೂ ಸಾಯಿ ಎಂದು ಪತಿ ಪ್ರಚೋದನೆ ನೀಡಿದ್ದ. ಈಗ ಪತಿಯ ಅಕ್ರಮ ಸಂಬಂಧಕ್ಕೆ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅರುಣ್ ಕುಮಾರ್ ವಿಷ ಕುಡಿದಿದ್ದೇನೆಂದು ಶಿವಮೊಗ್ಗ ಆಸ್ಪತ್ರೆಗೆ ಸೇರಿದ್ದಾನೆ. […]

ಚಿಕ್ಕಮಗಳೂರು: ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕೆಂಪನಹಳ್ಳಿ ಬಡಾವಣೆಯಲ್ಲಿ ನಡೆದಿದೆ. ರಂಜಿತಾ (23) ನೇಣಿಗೆ ಶರಣಾದ ಗೃಹಿಣಿ.
ರಂಜಿತಾ ಆತ್ಮಹತ್ಯೆಗೂ ಮೊದಲು ತಾನು ಸಾಯುವುದಾಗಿ ಪತಿ ಅರುಣ್ ಕುಮಾರ್ ಬಳಿ ಹೇಳಿಕೊಂಡಿದ್ದಳು. ಅದಕ್ಕೆ ಸರಿ ನಾನೂ ವಿಷ ಕುಡಿಯುತ್ತೇನೆ, ನೀನೂ ಸಾಯಿ ಎಂದು ಪತಿ ಪ್ರಚೋದನೆ ನೀಡಿದ್ದ. ಈಗ ಪತಿಯ ಅಕ್ರಮ ಸಂಬಂಧಕ್ಕೆ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಅರುಣ್ ಕುಮಾರ್ ವಿಷ ಕುಡಿದಿದ್ದೇನೆಂದು ಶಿವಮೊಗ್ಗ ಆಸ್ಪತ್ರೆಗೆ ಸೇರಿದ್ದಾನೆ. ಪತಿ ಕಿರುಕುಳದಿಂದ ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೋಷಕರು ಆರೋಪ ಮಾಡಿದ್ದಾರೆ. ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.