ನೆಲಮಂಗಲ: ಕೆಲಸದಾಳಿನ ಜೊತೆ ಸೇರಿಕೊಂಡು ಪತಿಯನ್ನು ಕೊಲೆಗೈದಿದ್ದ ಪತ್ನಿ ಹಾಗೂ ಕೆಲಸದಾಳನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪತ್ನಿ ಶೋಭಾ(44), ಕೆಲಸದಾಳು ರಾಮ(45) ಬಂಧಿತ ಆರೋಪಿಗಳು.
ಘಟನೆ ಹಿನ್ನೆಲೆ:
1 ಜೂನ್ 2020ರಂದು ಬೆಂಗಳೂರು ಉತ್ತರ ತಾಲೂಕಿನ ತೋಟದಗುಡ್ಡದಹಳ್ಳಿಯಲ್ಲಿ ಭೀಕರ ಘಟನೆಯೊಂದು ನಡೆದಿತ್ತು. ಮದ್ಯದ ನಶೆಯಲ್ಲಿ ಗಂಡನಿಂದ ಮನೆಯಲ್ಲಿ ಗಲಾಟೆ ಶುರುವಾಗಿತ್ತು. ಗಲಾಟೆಯಲ್ಲಿ ಕೆಲಸದಾಳು ರಾಮನ ಜೊತೆ ಸೇರಿಕೊಂಡು ಶೋಭಾ ತನ್ನ ಪತಿ ಶಿವಲಿಂಗಯ್ಯ(46) ಯನ್ನೆ ಕೊಲೆ ಮಾಡಿದ್ದಳು. ಬಳಿಕ ಸಾಕ್ಷ್ಯ ನಾಶ ಪಡಿಸುವ ಉದ್ದೇಶದಿಂದ ಮೃತ ದೇಹವನ್ನ ಕಸದ ರಾಶಿಯಲ್ಲಿ ಎಸೆದು ಮುಚ್ಚಿದ್ರು.
ಬಳಿಕ ಮೃತ ಶಿವಲಿಂಗಯ್ಯನ ತಮ್ಮ ಪುಟ್ಟರಾಜು 12ನವೆಂಬರ್ 2020ರಂದು ಅಣ್ಣಾನ ನಾಪತ್ತೆ ಬಗ್ಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿ ಕೇಸ್ ದಾಖಲಿಸಿದ್ದ. ಈ ವೇಳೆ ಮೃತನ ಪೋಷಕರು ಶೋಭಾಗೆ ಅನೈತಿಕ ಸಂಬಂಧವಿದೆ. ಈ ಹಿನ್ನೆಲೆ ಆಕೆಯೇ ನನ್ನ ಮಗನನ್ನು ಕೊಲೆ ಮಾಡಿದ್ದಾಳೆ ಎಂದು ಆರೋಪ ಮಾಡಿದ್ದರು. ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಮುಂದುವರೆಸಿದ್ದರು. ತನಿಖೆ ವೇಳೆ ಪತ್ನಿ ಶೋಭ ಮತ್ತು ಕೆಲಸದಾಳು ರಾಮ ಕೊಲೆ ಮಾಹಿತಿ ಬಿಚ್ಚಿಟ್ಟಿದ್ದು ಇಬ್ಬರನ್ನೂ ಪೊಲೀಸರು ಬಂದಿಸಿದ್ದಾರೆ.
ಪ್ರೀತಿಸಿ ಮದುವೆಯಾದ ಪತ್ನಿಗೆ ವರದಕ್ಷಿಣೆ ಕಿರುಕುಳ.. 3ನೆ ಮಹಡಿಯಿಂದ ನೂಕಿ ಕೊಲೆಗೈದೇಬಿಟ್ಟ ಪಾಪಿ ಪತಿ
Published On - 3:37 pm, Mon, 11 January 21