ಆನೆ ದಾಳಿ: ಅರಣ್ಯ ಇಲಾಖೆಯ ಗೂಡ್ಸ್ ಟೆಂಪೋ ಜಖಂ, ಡ್ರೇವರ್ ಬಚಾವ್!
ಮೈಸೂರು: ಅರಣ್ಯ ಇಲಾಖೆಗೆ ಸೇರಿದ ಗೂಡ್ಸ್ ಟೆಂಪೋ ಮೇಲೆ ಆನೆ ದಾಳಿ ಮಾಡಿರುವ ಘಟನೆ ಹಣಸೂರು ತಾಲೂಕಿನ ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ. ನಾಗರಹೊಳೆ ಅರಣ್ಯದ ವೀರನಹೊಸಳ್ಳಿ ರೇಂಜ್ನ ರಸ್ತೆಯಲ್ಲಿ ಆನೆ ದಾಳಿ ಮಾಡಿ ವಾಹನವನ್ನು ಜಖಂಗೊಳಿಸಿದೆ. ಆನೆ ಬರುತ್ತಿದ್ದಂತೆ ಚಾಲಕ ವಾಹನವನ್ನು ಹಿಂಬದಿಯಾಗಿ ಚಲಾಯಿಸಿದ್ದಾನೆ. ಆದ್ರೂ ಸಹ ವಾಹನದ ಮುಂಭಾಗ ನಜ್ಜುಗುಜ್ಜಾಗಿದೆ. ಆನೆಯ ಹಿಂಭಾಗದಲ್ಲಿ ಹೊಗೆ ಸಹ ಕಾಣಿಸಿಕೊಂಡಿದೆ. ಈ ಕಾರಣದಿಂದ ಆನೆ ದಾಳಿ ಮಾಡಿರಬಹುದು ಎನ್ನಲಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಆನೆ ದಾಳಿಯ ವಿಡಿಯೋ […]
ಮೈಸೂರು: ಅರಣ್ಯ ಇಲಾಖೆಗೆ ಸೇರಿದ ಗೂಡ್ಸ್ ಟೆಂಪೋ ಮೇಲೆ ಆನೆ ದಾಳಿ ಮಾಡಿರುವ ಘಟನೆ ಹಣಸೂರು ತಾಲೂಕಿನ ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ. ನಾಗರಹೊಳೆ ಅರಣ್ಯದ ವೀರನಹೊಸಳ್ಳಿ ರೇಂಜ್ನ ರಸ್ತೆಯಲ್ಲಿ ಆನೆ ದಾಳಿ ಮಾಡಿ ವಾಹನವನ್ನು ಜಖಂಗೊಳಿಸಿದೆ.
ಆನೆ ಬರುತ್ತಿದ್ದಂತೆ ಚಾಲಕ ವಾಹನವನ್ನು ಹಿಂಬದಿಯಾಗಿ ಚಲಾಯಿಸಿದ್ದಾನೆ. ಆದ್ರೂ ಸಹ ವಾಹನದ ಮುಂಭಾಗ ನಜ್ಜುಗುಜ್ಜಾಗಿದೆ. ಆನೆಯ ಹಿಂಭಾಗದಲ್ಲಿ ಹೊಗೆ ಸಹ ಕಾಣಿಸಿಕೊಂಡಿದೆ. ಈ ಕಾರಣದಿಂದ ಆನೆ ದಾಳಿ ಮಾಡಿರಬಹುದು ಎನ್ನಲಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಆನೆ ದಾಳಿಯ ವಿಡಿಯೋ ವೈರಲ್ ಆಗಿದೆ.
Published On - 9:44 am, Fri, 17 January 20