ಮಸ್ಕಿ ಉಪಚುನಾವಣೆಯಲ್ಲಿ ಗೆಲುವು ಖಂಡಿತ, ಗೆದ್ದ ನಂತರ ಸಚಿವನಾಗುವ ವಿಶ್ವಾಸವಿದೆ: ಅನರ್ಹ ಶಾಸಕ ಪ್ರತಾಪ್ ಗೌಡ

ಕಾಂಗ್ರೆಸ್​ನವರಿಗೆ ನಾನು ಬಿಜೆಪಿ ಸೇರಿದ ಮೇಲೆ ಅಭ್ಯರ್ಥಿ ಇರಲಿಲ್ಲ. ಹೀಗಾಗಿ ‌ಬಸವನಗೌಡ ತುರವಿಹಾಳರನ್ನು ಹೈಜಾಕ್ ಮಾಡಿದ್ದಾರೆ ಎಂದು ಅನರ್ಹ ಶಾಸಕ ಪ್ರತಾಪ್ ಗೌಡ ಹೇಳಿದ್ದಾರೆ.

  • TV9 Web Team
  • Published On - 15:34 PM, 19 Jan 2021
pratapgowda
ಪ್ರತಾಪ್ ಗೌಡ

ಬೆಂಗಳೂರು: ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ಅನರ್ಹ ಶಾಸಕ ಪ್ರತಾಪ್ ಗೌಡ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಸರ್ಕಾರ ರಚನೆ ವೇಳೆ ನನಗೆ ಸಚಿವ ಸ್ಥಾನ ನೀಡುವ ಬಗ್ಗೆ ಮಾತುಕತೆ ನಡೆದಿತ್ತು. ಮುನಿರತ್ನಗೂ ಸಚಿವ ಸ್ಥಾನ ನೀಡಬೇಕಾಗಿತ್ತು. ಮಸ್ಕಿ ಉಪಚುನಾವಣೆಯಲ್ಲಿ ನಾನು ಗೆಲುವು ಸಾಧಿಸುತ್ತೇನೆ. ನಾನು ಗೆದ್ದ ಬಳಿಕ ಬಳಿಕ ಮಂತ್ರಿಯಾಗುತ್ತೇನೆಂಬ ವಿಶ್ವಾಸವಿದೆ.

ಕಾಂಗ್ರೆಸ್​ನವರಿಗೆ ನಾನು ಬಿಜೆಪಿ ಸೇರಿದ ಮೇಲೆ ಅಭ್ಯರ್ಥಿ ಇರಲಿಲ್ಲ. ಹೀಗಾಗಿ ‌ಬಸವನಗೌಡ ತುರವಿಹಾಳರನ್ನು ಹೈಜಾಕ್ ಮಾಡಿದ್ದಾರೆ. ತುರವಿಹಾಳಗೆ ನಿಗಮ ಮಂಡಳಿ ನೀಡಿದರೂ ಅವರು ಪಕ್ಷದಲ್ಲಿ ಉಳಿಯಲಿಲ್ಲ. ಅವರು ಶಾಸಕನಾಗಬಹುದು ಅನ್ನೋ ಆಸೆಯಿಂದ ಕಾಂಗ್ರೆಸ್ ಹೋಗಿದ್ದಾರೆ ಎಂದು ಪ್ರತಾಪ್ ಗೌಡ ಹೇಳಿದರು.

ಪ್ರತಾಪ್ ಗೌಡ ಪಾಟೀಲ್ ಒಬ್ಬ​ ಚೆಂಗುಲಿ ಕುದುರೆ ಎಂದು ಗೊತ್ತಿರಲಿಲ್ಲ -ಸಿದ್ದು ವ್ಯಂಗ್ಯ