
ಕೋಲಾರ: ನಗರದ ಖಾಸಗಿ ಆಸ್ಪತ್ರೆಯ ವಿರುದ್ಧ ಸುಳ್ಳು ಕೊವಿಡ್ ವರದಿ ನೀಡಿರುವ ಆರೋಪ ಕೇಳಿಬಂದಿದೆ. ಆಸ್ಪತ್ರೆಗೆ ಸರ್ಜರಿಗೆ ಎಂದು ದಾಖಲಾಗಿದ್ದ ನೀಲಮ್ಮ ಎಂಬ ಮಹಿಳೆಗೆ ಸುಳ್ಳು ಕೊವಿಡ್ ವರದಿ ನೀಡಲಾಗಿದೆ ಎಂದ ಅಕೆಯ ಸಂಬಂಧಿಕರು ಆರೋಪಿಸಿದ್ದಾರೆ.
ಈ ಮಧ್ಯೆ ನೀಲಮ್ಮ ತಮಗೆ ಕೊರೊನಾ ಬಂದಿದೆ ಎಂಬ ಆತಂಕದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ. ಕೊನೆಗೆ ಆಕೆಗೆ ಕುಟುಂಬಸ್ಥರು ಸರ್ಕಾರಿ ಆಸ್ಪತ್ರೆಯಲ್ಲಿ ಕೊವಿಡ್ ಟೆಸ್ಟ್ ಮಾಡಿಸಿದ್ದರು.
ಆದರೆ, ಆಗ ಮಹಿಳೆಯ ಕೊವಿಡ್ ಟೆಸ್ಟ್ ವರದಿಯಲ್ಲಿ ನೆಗೆಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ನೀಲಮ್ಮ ಮತ್ತು ಆಕೆಯ ಕುಟುಂಬಸ್ಥರು ಖಾಸಗಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ತಮ್ಮ ಸಿಟ್ಟು ಹೊರಹಾಕಿದ್ದಾರೆ.