ಮೈಸೂರಿನ ಆ ಸ್ಥಳದಲ್ಲಿ ರಂಗೇರಿದೆ ಗೊಂಬೆ ಪ್ರದರ್ಶನ.. ಸಾರುತಿವೆ ಪುರಾತನ ಕಥೆಗಳ!
ಮೈಸೂರು: ಅಲ್ಲಿ ಎತ್ತ ನೋಡಿದರತ್ತ ಗೊಂಬೆಗಳ ಸಾಮ್ರಾಜ್ಯವೇ ಕಾಣಸಿಗುತ್ತದೆ. ಅಂಗೈಯಲ್ಲಿ ಹಿಡಿಯಬಹುದಾದ ಪುಟಾಣಿ ಬೊಂಬೆಯಿಂದ ಹಿಡಿದು ಆಳೆತ್ತರದ ಸಾವಿರಾರು ಬೊಂಬೆಗಳು ಅಲ್ಲಿವೆ. ಕಣ್ಣು ಹಾಯಿಸಿದ ಕಡೆಯಲ್ಲಾ ಗೊಂಬೆಗಳ ರಾಶಿ ಕಾಣಿಸುತ್ತದೆ. ನಮ್ಮ ಸಂಸ್ಕೃತಿ ಸಾರುವ.. ದಸರಾ ವೈಭವ ಸಾರುವ.. ರಾಜ ಮಹಾರಾಜರ.. ತಾಯಿ ಚಾಮುಂಡೇಶ್ವರಿಯ.. ರಾಮಾಯಣ ಕಥೆ ಹೇಳುವ ಗೊಂಬೆಗಳು ಹೀಗೆ ಹೇಳ್ತಾನೆ ಹೋದ್ರೆ ಈ ಬೊಂಬೆಗಳ ಕಥೆ ಮುಗಿಯೋದೆ ಇಲ್ಲ. ಮೈಸೂರಿನ ನಜರ್ ಬಾದ್ನಲ್ಲಿ ರಾಮನ್ ಸನ್ಸ್ ಕಲಾ ಪ್ರತಿಷ್ಠಾನ ಆಯೋಜನೆ ಮಾಡಿರುವ ಬೊಂಬೆ ಪ್ರದರ್ಶನದಲ್ಲಿ […]

ಮೈಸೂರು: ಅಲ್ಲಿ ಎತ್ತ ನೋಡಿದರತ್ತ ಗೊಂಬೆಗಳ ಸಾಮ್ರಾಜ್ಯವೇ ಕಾಣಸಿಗುತ್ತದೆ. ಅಂಗೈಯಲ್ಲಿ ಹಿಡಿಯಬಹುದಾದ ಪುಟಾಣಿ ಬೊಂಬೆಯಿಂದ ಹಿಡಿದು ಆಳೆತ್ತರದ ಸಾವಿರಾರು ಬೊಂಬೆಗಳು ಅಲ್ಲಿವೆ. ಕಣ್ಣು ಹಾಯಿಸಿದ ಕಡೆಯಲ್ಲಾ ಗೊಂಬೆಗಳ ರಾಶಿ ಕಾಣಿಸುತ್ತದೆ. ನಮ್ಮ ಸಂಸ್ಕೃತಿ ಸಾರುವ.. ದಸರಾ ವೈಭವ ಸಾರುವ.. ರಾಜ ಮಹಾರಾಜರ.. ತಾಯಿ ಚಾಮುಂಡೇಶ್ವರಿಯ.. ರಾಮಾಯಣ ಕಥೆ ಹೇಳುವ ಗೊಂಬೆಗಳು ಹೀಗೆ ಹೇಳ್ತಾನೆ ಹೋದ್ರೆ ಈ ಬೊಂಬೆಗಳ ಕಥೆ ಮುಗಿಯೋದೆ ಇಲ್ಲ.
ಮೈಸೂರಿನ ನಜರ್ ಬಾದ್ನಲ್ಲಿ ರಾಮನ್ ಸನ್ಸ್ ಕಲಾ ಪ್ರತಿಷ್ಠಾನ ಆಯೋಜನೆ ಮಾಡಿರುವ ಬೊಂಬೆ ಪ್ರದರ್ಶನದಲ್ಲಿ ಕಾಣುವ ಗೊಂಬೆಗಳಿವು. ಕಳೆದ 16 ವರ್ಷಗಳಿಂದ ದಸರಾ ಸಂದರ್ಭದಲ್ಲಿ ಈ ಗೊಂಬೆ ಪ್ರದರ್ಶನ ಮಾಡಿಕೊಂಡು ಬರಲಾಗುತ್ತಿದೆ. ಅದರಲ್ಲೂ ದಸರೆಯ ವೈಭವವನ್ನು ನೆನಪಿಸುವ ಗೊಂಬೆಗಳ ಲೋಕವೇ ಇಲ್ಲಿದೆ. ಸುಮಾರು 12 ರಾಜ್ಯಗಳಿಂದ ತಂದಿರುವ 5 ಸಾವಿರಕ್ಕು ಹೆಚ್ಚು ಗೊಂಬೆಗಳನ್ನ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ.
ಈ ವರ್ಷದ ವಿಶೇಷವಾಗಿ ಶ್ರೀರಾಮ ಕಲಾ ಕಲ್ಪ ಹೆಸರಿನಲ್ಲಿ ವಿಶೇಷ ಆವರಣ ಸ್ಥಾಪಿಸಲಾಗಿದೆ. ಕೋದಂಡರಾಮ ಸೇರಿದಂತೆ ರಾಮಾಯಣದ ಭಾಗಗಳನ್ನು ಒಳಗೊಂಡ ಪೇಟಿಂಗ್ ಮತ್ತು ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇದರೊಂದಿಗೆ ಸ್ವರ್ಣಗೌರಿ, ಸೌಭಾಗ್ಯಗೌರಿ, ಕುಂದಗೌರಿ ಮುಂತಾದ ಗೌರಿ ಮೂರ್ತಿಗಳನ್ನು ಇಡಲಾಗಿದೆ. ಚಾಮರಾಜೇಂದ್ರ ವೃತ್ತದ ಶತಮಾನೋತ್ಸವದ ಅಂಗವಾಗಿ ವೃತ್ತದ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಈ ಪ್ರದರ್ಶನ ನೋಡಿ ಪ್ರವಾಸಿಗರು ಪಿದಾ ಆಗಿದ್ದಾರೆ.
ಒಟ್ನಲ್ಲಿ ಅರಮನೆ ನಗರಿಯಲ್ಲಿ ದಸರಾ ಶುರವಾಗುತ್ತಿದ್ದಂತೆ ಗೊಂಬೆಗಳ ಕಲವರ ಶುರುವಾಗಿದ್ದು, ಈ ಬೊಂಬೆ ಮನೆ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.


Published On - 3:02 pm, Thu, 8 October 20




