ಮಂಡ್ಯ: ಸೋಂಕಿತ ಮಗನಿಗಾಗಿ ಮನನೊಂದು ಕೆರೆಗೆ ಹಾರಿದ ತಾಯಿ

ಮಂಡ್ಯ: ಪುತ್ರನಿಗೆ ಕೊರೊನಾ ಬಂದಿದೆ ಎಂದು ಹೆದರಿ ಆತನ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಚೆನ್ನಳ್ಳಿಯಲ್ಲಿ ನಡೆದಿದೆ. 60 ವರ್ಷದ ನಿಂಗಮ್ಮ ಹಳ್ಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ತಿಳಿದುಬಂದಿದೆ. ನಿಂಗಮ್ಮ ಮಗನಿಗೆ ಕೊರೊನಾ ಸೋಂಕು ತಗಲಿದೆ ಎಂದು ಅಧಿಕಾರಿಗಳು ಎರಡು ದಿನಗಳ ಹಿಂದೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಮಗನನ್ನು ಆಸ್ಪತ್ರೆಗೆ ಕರೆದೊಯ್ದ ನಂತರ ಆತಂಕಕ್ಕೆ ಒಳಗಾಗಿದ್ದ ನಿಂಗಮ್ಮ ಮನನೊಂದು ಇಂದು ಅಡ್ಡಳ್ಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅರಕೆರೆ ಪೊಲೀಸ್ ಠಾಣಾ […]

ಮಂಡ್ಯ: ಸೋಂಕಿತ ಮಗನಿಗಾಗಿ ಮನನೊಂದು ಕೆರೆಗೆ ಹಾರಿದ ತಾಯಿ
ಸಾಂದರ್ಭಿಕ ಚಿತ್ರ
Edited By:

Updated on: Sep 06, 2020 | 2:11 PM

ಮಂಡ್ಯ: ಪುತ್ರನಿಗೆ ಕೊರೊನಾ ಬಂದಿದೆ ಎಂದು ಹೆದರಿ ಆತನ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಚೆನ್ನಳ್ಳಿಯಲ್ಲಿ ನಡೆದಿದೆ. 60 ವರ್ಷದ ನಿಂಗಮ್ಮ ಹಳ್ಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ತಿಳಿದುಬಂದಿದೆ.

ನಿಂಗಮ್ಮ ಮಗನಿಗೆ ಕೊರೊನಾ ಸೋಂಕು ತಗಲಿದೆ ಎಂದು ಅಧಿಕಾರಿಗಳು ಎರಡು ದಿನಗಳ ಹಿಂದೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಮಗನನ್ನು ಆಸ್ಪತ್ರೆಗೆ ಕರೆದೊಯ್ದ ನಂತರ ಆತಂಕಕ್ಕೆ ಒಳಗಾಗಿದ್ದ ನಿಂಗಮ್ಮ ಮನನೊಂದು ಇಂದು ಅಡ್ಡಳ್ಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಮೃತದೇಹಕ್ಕಾಗಿ ಗ್ರಾಮಸ್ಥರು ಹುಡುಕಾಟ ನಡೆಸುತ್ತಿದ್ದಾರೆ.