ಮಗನಿಗೆ ಹೆಣ್ಣು ನೋಡಿ ಬಂದಿದ್ದ ಮಹಿಳೆ ಕೊರೊನಾಗೆ ಬಲಿ

|

Updated on: Jun 18, 2020 | 10:13 AM

ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾಗೆ ಮತ್ತೊಂದು ಬಲಿಯಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ಮೂಲದ 56 ವರ್ಷದ ಮಹಿಳೆ ಕೊವಿಡ್​ಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕೊವಿಡ್ ನಿಯಮಾನುಸಾರ ಚನ್ನಗಿರಿ ಪಟ್ಟಣದ ಹೊರ ವಲಯದಲ್ಲಿ ಶವ ಸಂಸ್ಕಾರ ಮಾಡಲಾಗಿದೆ. ಇದೇ ಜೂನ್ 16 ರಂದು ಮೂತ್ರಪಿಂಡ ವೈಫಲ್ಯದಿಂದ ಮೆಗ್ಗಾನ್ ಆಸ್ಪತ್ರೆ ಸೇರಿದ್ದರು. ಕೊರೊನಾ ಟೆಸ್ಟ್ ವರದಿಯಲ್ಲಿ ಕೊರೊನಾ ಸೋಂಕು ಇರುವುದು ಖಚಿತವಾಗಿತ್ತು. ನಿನ್ನೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇವರು ಚನ್ನಗಿರಿ ಪಟ್ಟಣದ ಕುಂಬಾರ ಬೀದಿಯ ನಿವಾಸಿಯಾಗಿದ್ದರು. ಹೀಗಾಗಿ 29 ಕುಟುಂಬಗಳಿರುವ […]

ಮಗನಿಗೆ ಹೆಣ್ಣು ನೋಡಿ ಬಂದಿದ್ದ ಮಹಿಳೆ ಕೊರೊನಾಗೆ ಬಲಿ
Follow us on

ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾಗೆ ಮತ್ತೊಂದು ಬಲಿಯಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ಮೂಲದ 56 ವರ್ಷದ ಮಹಿಳೆ ಕೊವಿಡ್​ಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕೊವಿಡ್ ನಿಯಮಾನುಸಾರ ಚನ್ನಗಿರಿ ಪಟ್ಟಣದ ಹೊರ ವಲಯದಲ್ಲಿ ಶವ ಸಂಸ್ಕಾರ ಮಾಡಲಾಗಿದೆ. ಇದೇ ಜೂನ್ 16 ರಂದು ಮೂತ್ರಪಿಂಡ ವೈಫಲ್ಯದಿಂದ ಮೆಗ್ಗಾನ್ ಆಸ್ಪತ್ರೆ ಸೇರಿದ್ದರು. ಕೊರೊನಾ ಟೆಸ್ಟ್ ವರದಿಯಲ್ಲಿ ಕೊರೊನಾ ಸೋಂಕು ಇರುವುದು ಖಚಿತವಾಗಿತ್ತು. ನಿನ್ನೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಇವರು ಚನ್ನಗಿರಿ ಪಟ್ಟಣದ ಕುಂಬಾರ ಬೀದಿಯ ನಿವಾಸಿಯಾಗಿದ್ದರು. ಹೀಗಾಗಿ 29 ಕುಟುಂಬಗಳಿರುವ ಕುಂಬಾರ ಬೀದಿ ಸೀಲ್​ಡೌನ್ ಮಾಡಲಾಗಿದೆ. ಇಲ್ಲಿನ 76 ಜನರ ಗಂಟಲು ದ್ರವ ಸಂಗ್ರಹಿಸಿ ಟೆಸ್ಟ್​ಗೆ ಕಳುಹಿಸಲಾಗಿದೆ. ಮೃತ ಮಹಿಳೆ ಹತ್ತು ದಿನಗಳ ಹಿಂದೆ ಪುತ್ರನಿಗೆ ಹೆಣ್ಣು ನೋಡಲು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಗೆ ಹೋಗಿ ಬಂದಿದ್ದರು.