ಗುರು ರಾಘವೇಂದ್ರ ಸೌಹಾರ್ದ ಸೊಸೈಟಿ ಮೇಲೆ ACB ದಾಳಿ, ನಕಲಿ ಅಕೌಂಟ್ ಜಾಲ ಪತ್ತೆ

ಬೆಂಗಳೂರು: ಬಸವನಗುಡಿಯಲ್ಲಿರುವ ಗುರು ರಾಘವೇಂದ್ರ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಮೇಲೆ ಎಸಿಬಿ ದಾಳಿ ನಡೆಸಿದೆ. ಎಸಿಬಿ ಡಿವೈಎಸ್ಪಿ ತಮ್ಮಯ್ಯ,ಬಾಲಕೃಷ್ಣ ಮತ್ತು ಖಾನ್ ನೇತೃತ್ವದ ತಂಡ ಏಕಕಾಲದಲ್ಲಿ 5 ಕಡೆ ದಾಳಿ ನಡೆಸಿದೆ. ಮುಖ್ಯ ಕಚೇರಿ ಮತ್ತು ಬ್ಯಾಂಕ್​ನಲ್ಲಿರುವ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಗುರು ರಾಘವೇಂದ್ರ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವಿರುದ್ಧ ಬರೋಬ್ಬರಿ 1400 ಕೋಟಿಗಳ ಅವ್ಯವಹಾರದ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳ ತಂಡ ಏಕಾ ಏಕಿ ದಾಳಿ ನಡೆಸಿ ಪರಿಶೀಲನೆ […]

ಗುರು ರಾಘವೇಂದ್ರ ಸೌಹಾರ್ದ ಸೊಸೈಟಿ ಮೇಲೆ ACB ದಾಳಿ, ನಕಲಿ ಅಕೌಂಟ್ ಜಾಲ ಪತ್ತೆ
ಗುರು ರಾಘವೇಂದ್ರ ಬ್ಯಾಂಕ್
Follow us
ಆಯೇಷಾ ಬಾನು
|

Updated on:Jun 18, 2020 | 4:13 PM

ಬೆಂಗಳೂರು: ಬಸವನಗುಡಿಯಲ್ಲಿರುವ ಗುರು ರಾಘವೇಂದ್ರ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಮೇಲೆ ಎಸಿಬಿ ದಾಳಿ ನಡೆಸಿದೆ. ಎಸಿಬಿ ಡಿವೈಎಸ್ಪಿ ತಮ್ಮಯ್ಯ,ಬಾಲಕೃಷ್ಣ ಮತ್ತು ಖಾನ್ ನೇತೃತ್ವದ ತಂಡ ಏಕಕಾಲದಲ್ಲಿ 5 ಕಡೆ ದಾಳಿ ನಡೆಸಿದೆ. ಮುಖ್ಯ ಕಚೇರಿ ಮತ್ತು ಬ್ಯಾಂಕ್​ನಲ್ಲಿರುವ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.

ಗುರು ರಾಘವೇಂದ್ರ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವಿರುದ್ಧ ಬರೋಬ್ಬರಿ 1400 ಕೋಟಿಗಳ ಅವ್ಯವಹಾರದ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳ ತಂಡ ಏಕಾ ಏಕಿ ದಾಳಿ ನಡೆಸಿ ಪರಿಶೀಲನೆ ಮಾಡಿದೆ.

ಬ್ಯಾಂಕ್ ನಲ್ಲಿ ಭಾರಿ ಪ್ರಮಾಣದ ನಕಲಿ ಅಕೌಂಟ್​ಗಳು ಪತ್ತೆ ಎಸಿಬಿ ದಾಳಿ ಸಂದರ್ಭದಲ್ಲಿ 892 ಕೋಟಿ ರೂ ಭಾರೀ ಪ್ರಮಾಣದ ಅವ್ಯವಹಾರ ಪತ್ತೆಯಾಗಿದೆ. ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ 24 ಮಂದಿ ಈ ಅವ್ಯವಹಾರದಲ್ಲಿ ಶಾಮೀಲು ಆಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಎಸಿಬಿ ದಾಳಿ ಸಂದರ್ಭದಲ್ಲಿ ಬ್ಯಾಂಕ್ ಅಧ್ಯಕ್ಷ ಡಾ. ರಾಮಕೃಷ್ಣ, ಮಾಜಿ ಸಿಇಓ ವಾಸುದೇವ್ ಮಯ್ಯ ಪರಾರಿಯಾಗಿದ್ದಾರೆ.

ಅಸ್ಥಿತ್ವದಲ್ಲೇ ಇರದ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಅಕೌಂಟ್ ಮಾಡಿಸಿ ವಂಚಿಸಿದ್ದಾರೆ. ಸುಮಾರು 60 ನಕಲಿ ಅಕೌಂಟ್​ ಗಳಲ್ಲಿ 149 ಕೋಟಿ ಠೇವಣಿ ಮಾಡಲಾಗಿದೆ. 1602 ನಕಲಿ ಖಾತೆಯಲ್ಲಿ 701 ಕೋಟಿ ರೂ ವಹಿವಾಟು ನಡೆದಿದೆ. ಬಹುತೇಕ ಖಾತೆಗಳಿಗೆ ವ್ಯಕ್ತಿಗಳು, ದಾಖಲಾತಿಗಳೇ ಇಲ್ಲ. ನಕಲಿ ಅಕೌಂಟ್​ಗಳನ್ನ ಹೊಂದಿರುವ ವ್ಯಕ್ತಿಗಳು ಪತ್ತೆಯಾಗಿಲ್ಲ. ಹಾಗೂ ನಕಲಿ ಅಕೌಂಟ್​ ತೆರೆಯಲು ಸೂಕ್ತ ದಾಖಲಾತಿಗಳನ್ನೂ ನೀಡಿಲ್ಲ.

ಆರ್ ಬಿ ಐ ಗೆ ಸುಳ್ಳು ಲೆಕ್ಕ ನೀಡಿರುವ ಆಡಳಿತ ಮಂಡಳಿ ಇಲ್ಲಿ ಆಡಳಿತ ಮಂಡಳಿ ಆರ್​ಬಿಐ ಗೈಡ್ ಲೈನ್ಸ್​ಗಳನ್ನು ಗಾಳಿಗೆ ತೂರಿದೆ. ಶೇ 30ರಷ್ಟು ಸಾಲ ವಸೂಲಾತಿ ಬಾಕಿಯಿದ್ದರೂ ಶೇ 1 ಎಂದು ತೋರಿಸಲಾಗಿದೆ. ಬ್ಯಾಂಕ್ ನ 3300 ಗ್ರಾಹಕರಿಗೂ ಮಕ್ಮಲ್ ಟೋಪಿ ಹಾಕಲಾಗಿದೆ. ಎಸಿಬಿಯಿಂದ ದಾಖಲೆ ಪರಿಶೀಲನೆ ವೇಳೆ ಈ ಅವ್ಯವಹಾರ ಬಹಿರಂಗವಾಗಿದೆ.

Published On - 10:58 am, Thu, 18 June 20

ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು