ದೇವನಹಳ್ಳಿ: ಜಮೀನು ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ.. ರೈತ ಮಹಿಳೆ ಗಂಭೀರ

| Updated By: ಸಾಧು ಶ್ರೀನಾಥ್​

Updated on: Mar 08, 2021 | 12:37 PM

ಆಲಹಳ್ಳಿ ಗ್ರಾಮದ ಜಮೀನು ಗಡಿ ವಿಚಾರಕ್ಕೆ ಪಕ್ಕದ ಜಮೀನು ಮಾಲೀಕ ಕಿರಿಕಿರಿ ಉಂಟುಮಾಡಿದ್ದು ಈ ವೇಳೆ ನಡೆದ ಮಾತಿನ ಚಕಮಕಿ ತಾರಕಕ್ಕೇರಿ ರೈತ ಮಹಿಳೆ ಹಾಗೂ ಆಕೆಯ ಪತಿಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಂಪತಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ದೇವನಹಳ್ಳಿ: ಜಮೀನು ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ.. ರೈತ ಮಹಿಳೆ ಗಂಭೀರ
ಹಲ್ಲೆಗೆ ಒಳಗಾದ ರೈತ ಮಹಿಳೆ ಉಮಾದೇವಿ
Follow us on

ದೇವನಹಳ್ಳಿ: ಜಮೀನು ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ರೈತ ಮಹಿಳೆಯೊಬ್ಬರ ತಲೆಗೆ ಪೆಟ್ಟು ಬಿದ್ದು ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಆಲಹಳ್ಳಿಯಲ್ಲಿ ನಡೆದಿದೆ. ರೈತ ಮಹಿಳೆ ಉಮಾದೇವಿ ಮತ್ತು ಪತಿ ಚನ್ನೇಗೌಡ ಮೇಲೆ ಹಲ್ಲೆ ನಡೆದಿದ್ದು ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಆಲಹಳ್ಳಿ ಗ್ರಾಮದ ಜಮೀನು ಗಡಿ ವಿಚಾರಕ್ಕೆ ಪಕ್ಕದ ಜಮೀನು ಮಾಲೀಕ ಕಿರಿಕಿರಿ ಉಂಟುಮಾಡಿದ್ದು ಈ ವೇಳೆ ನಡೆದ ಮಾತಿನ ಚಕಮಕಿ ತಾರಕಕ್ಕೇರಿ ರೈತ ಮಹಿಳೆ ಹಾಗೂ ಆಕೆಯ ಪತಿಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಂಪತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮದ ಮಂಜುನಾಥ್ ಕುಟುಂಬಸ್ಥರು ರೈತ ಮಹಿಳೆ ಉಮಾದೇವಿ ಮತ್ತು ಪತಿ ಚನ್ನೇಗೌಡ ಮೇಲೆ ಹಲ್ಲೆ ನಡೆಸಿದ್ದಾರಂತೆ. ಇನ್ನು ಈ ಬಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರಾಮಾರಿ ವೇಳೆ ನಡೆದ ಅವಘಡ

ಜಮೀನು ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಮಾರಾಮಾರಿ

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಜಮೀನು ವಿವಾದ; ಕಿಡಿಗೇಡಿಗಳಿಂದ ದಂಪತಿ ಮೇಲೆ ಮನಬಂದಂತೆ ಹಲ್ಲೆ