ವೃದ್ಧಿಮಾನ್ ಸಾಹ ಮಗನ ಹುಟ್ಟು ಹಬ್ಬದಲ್ಲಿ ಭಾಗಿಯಾದ ವಿರಾಟ್-ಅನುಷ್ಕಾ ದಂಪತಿ

ಅಹಮದಬಾದ್: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮ ಅವರಿಬ್ಬರೂ ವೃದ್ಧಿಮಾನ್ ಸಾಹ ಅವರ ಮಗನ ಮೊದಲ ಹುಟ್ಟುಹಬ್ಬದಲ್ಲಿ ಭಾಗಿಯಾಗಿ ಶುಭ ಕೋರಿದರು. ವೃದ್ಧಿಮಾನ್ ಸಾಹ ಮಗನ ಹುಟ್ಟುಹಬ್ಬ ಅಹಾಮದಾಬಾದ್​ನ ಭಾಷಾ ನಗರದಲ್ಲಿ ನಡೆಯಿತು. ಇತ್ತೀಚೆಗೆ ನಡೆದ ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಜಯ ದಾಖಲಿಸಿತು. ಈ ಗೆಲವು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್​ನಲ್ಲಿ ಭಾರತಕ್ಕೆ ಸ್ಥಾನ ಗಳಿಸಲು ನೆರವಾಯಿತು. ವೃದ್ಧಿಮಾನ್ ಸಾಹ ತಂಡದ ಭಾಗವಾಗಿದ್ದರೂ […]

ವೃದ್ಧಿಮಾನ್ ಸಾಹ ಮಗನ ಹುಟ್ಟು ಹಬ್ಬದಲ್ಲಿ ಭಾಗಿಯಾದ ವಿರಾಟ್-ಅನುಷ್ಕಾ ದಂಪತಿ
ವೃದ್ಧಿಮಾನ್ ಸಾಹ ರವರವ ಮಗನ ಹುಟ್ಟು ಹಬ್ಬದಲ್ಲಿ ವಿರಾಟ್ ಕೊಯ್ಲಿ ಮತ್ತು ಅನುಷ್ಕಾ ಶರ್ಮ
Follow us
sandhya thejappa
|

Updated on: Mar 08, 2021 | 12:17 PM

ಅಹಮದಬಾದ್: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮ ಅವರಿಬ್ಬರೂ ವೃದ್ಧಿಮಾನ್ ಸಾಹ ಅವರ ಮಗನ ಮೊದಲ ಹುಟ್ಟುಹಬ್ಬದಲ್ಲಿ ಭಾಗಿಯಾಗಿ ಶುಭ ಕೋರಿದರು. ವೃದ್ಧಿಮಾನ್ ಸಾಹ ಮಗನ ಹುಟ್ಟುಹಬ್ಬ ಅಹಾಮದಾಬಾದ್​ನ ಭಾಷಾ ನಗರದಲ್ಲಿ ನಡೆಯಿತು.

ಇತ್ತೀಚೆಗೆ ನಡೆದ ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಜಯ ದಾಖಲಿಸಿತು. ಈ ಗೆಲವು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್​ನಲ್ಲಿ ಭಾರತಕ್ಕೆ ಸ್ಥಾನ ಗಳಿಸಲು ನೆರವಾಯಿತು. ವೃದ್ಧಿಮಾನ್ ಸಾಹ ತಂಡದ ಭಾಗವಾಗಿದ್ದರೂ ಯಾವುದೇ ಪಂದ್ಯವನ್ನೂ ಆಡಲಿಲ್ಲ. ಆದರೆ ರಿಷಭ್ ಪಂತ್ ವಿಕೆಟ್ ಕೀಪರ್​ಗೆ ಆದ್ಯತೆ ನೀಡಿದರು.

ಸದ್ಯ ವೃದ್ಧಿಮಾನ್ ಸಾಹ ತನ್ನ ಮಗನ ಹುಟ್ಟುಹಬ್ಬದ ಸಂಭ್ರದಲ್ಲಿದ್ದಾರೆ. ಮೊದಲ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿದ್ದು, ಇದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳನ್ನು ವೃದ್ಧಿಮಾನ್ ಸಾಹ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಹಂಚಿಕೊಂಡ ಫೋಟೋವೊಂದರಲ್ಲಿ ಹುಟ್ಟು ಹಬ್ಬದ ಕೇಕ್ ಕತ್ತರಿಸುವ ವೇಳೆ ಭಾರತ ಕ್ರಿಕೆಟ್ ತಂಡದ ನಾಯಕ ತನ್ನ ಮಡದಿ ಅನುಷ್ಕಾ ಜೊತೆ ನಿಂತುಕೊಂಡಿದ್ದಾರೆ. ವಿರಾಟ್ ಕೊಯ್ಲಿ ಬಿಳಿ ಟೀ ಶರ್ಟ್ ಜೊತೆ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್​ ಧರಿಸಿದ್ದಾರೆ. ಇನ್ನು ಅನುಷ್ಕಾ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಜೊತೆಗೆ ಬಿಳಿ ಟಾಪ್​ನಲ್ಲಿ ಸುಂದರವಾಗಿ ಕಾಣಿಸಿಕೊಂಡರು.

ಅಪ್ಪನಾದ ವಿರಾಟ್ ಕೊಹ್ಲಿ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ 2017ರ ಡಿಸೆಂಬರ್ 11 ರಂದು ವಿವಾಹವಾದರು. ಇಟಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿಯ ಆರತಕ್ಷತೆ ಭಾರತದಲ್ಲಿ ಅದ್ದೂರಿಯಾಗಿ ನಡೆದಿತ್ತು. ದೇಶದ ಪ್ರಧಾನಿ ಸೇರಿದಂತೆ ಬಾಲಿವುಡ್ ತಾರೆಯರು ಮತ್ತು ಕ್ರಿಕೆಟ್ ಆಟಗಾರರು ಆರತಕ್ಷತೆಗೆ ಸಾಕ್ಷಿಯಾದರು. ಇನ್ನು 2021 ರ ಜನವರಿ12 ಕ್ಕೆ ಅನುಷ್ಕಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಅಪ್ಪನಾದ ಭಾರತ ಕ್ರಿಕೆಟ್ ತಂಡನ ನಾಯಕನಿಗೆ ಅಭಿಮಾನಿಗಳು ಶುಭವನ್ನು ಕೋರಿದ್ದರು. ಸದ್ಯ ಇವರ ಮಗುವಿಗೆ 2 ತಿಂಗಳಾಗಿದ್ದು, ಕೆಲವು ದಿನಗಳ ಹಿಂದೆ ಮಗುವಿನ ಪಾದಗಳ ಫೋಟೋವನ್ನು ವಿರಾಟ್ ಕೊಹ್ಲಿ ಸಹೋದರ ಹಂಚಿಕೊಂಡಿದ್ದರು.

ಇದನ್ನೂ ಓದಿ

ಮಾಲೂರಿನಲ್ಲಿ ‘ಸಲಗ ಕಪ್’ ಹವಾ: ಅಭಿಮಾನಿಗಳೊಟ್ಟಿಗೆ ಕ್ರಿಕೆಟ್​ ಆಡಿದ ದುನಿಯಾ ವಿಜಿ!

ಆಟಗಾರರಿಗೆ ಕೊರೊನಾ ಸೋಂಕು; ಪಾಕಿಸ್ತಾನ ಸೂಪರ್ ಲೀಗ್​ ತಾತ್ಕಾಲಿಕ ಸ್ಥಗಿತ

‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು