ಸಿಲಿಕಾನ್ ಸಿಟಿಯಲ್ಲಿ ಮತ್ತೆ ಸರಗಳ್ಳರ ಹಾವಳಿ! 1ವಾರದಲ್ಲಿ 3ಕಡೆ ಕಳ್ಳರ ಕೈಚಳಕ!

|

Updated on: Jan 13, 2020 | 1:35 PM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಸರಗಳ್ಳರ ಅಟ್ಟಹಾಸ ಮುಂದುವರಿದಿದೆ. ಒಂದೇ ವಾರದಲ್ಲಿ ನಗರದ ಮೂರು ಕಡೆ ಸರಗಳ್ಳತನವಾಗಿರುವ ಘಟನೆ ನಡೆದಿದೆ. ನಿನ್ನೆಯಷ್ಟೇ ನಂದಿನಿ ಲೇಔಟ್​ನಲ್ಲಿ ಸರ ಕದ್ದು ಕಿಡಿಗೇಡಿಗಳು ಪರಾರಿಯಾಗಿದ್ದರು. ಇದೀಗ ನಾಯಂಡಹಳ್ಳಿಯ ಐಟಿಐ ಲೇಔಟ್​ನಲ್ಲಿ ಬೈಕ್​ನಲ್ಲಿ ಬಂದಿದ್ದ ಮೂವರು ಮಹಿಳೆಯ ಸರ ಕಸಿದು ಎಸ್ಕೇಪ್ ಆಗಿದ್ದಾರೆ. ನಾಯಂಡಹಳ್ಳಿಯ ಐಟಿ ಲೇಔಟ್​ನ ಕೈಲಾಶ್ ದೇವಾಲಯ ಬಳಿ ಬೈಕ್​ನಲ್ಲಿ ಬಂದಿದ್ದ ಮೂವರು ಶಾಂತಾ(47) ಎಂಬುವರ ಸರ ಕದ್ದು ಪರಾರಿಯಾಗಿದ್ದಾರೆ. ಹೊಂಚು ಹಾಕಿ ಮಹಿಳೆಯ ಸುಮಾರು 50 ಗ್ರಾಂ […]

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಸರಗಳ್ಳರ ಹಾವಳಿ! 1ವಾರದಲ್ಲಿ 3ಕಡೆ ಕಳ್ಳರ ಕೈಚಳಕ!
Follow us on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಸರಗಳ್ಳರ ಅಟ್ಟಹಾಸ ಮುಂದುವರಿದಿದೆ. ಒಂದೇ ವಾರದಲ್ಲಿ ನಗರದ ಮೂರು ಕಡೆ ಸರಗಳ್ಳತನವಾಗಿರುವ ಘಟನೆ ನಡೆದಿದೆ. ನಿನ್ನೆಯಷ್ಟೇ ನಂದಿನಿ ಲೇಔಟ್​ನಲ್ಲಿ ಸರ ಕದ್ದು ಕಿಡಿಗೇಡಿಗಳು ಪರಾರಿಯಾಗಿದ್ದರು. ಇದೀಗ ನಾಯಂಡಹಳ್ಳಿಯ ಐಟಿಐ ಲೇಔಟ್​ನಲ್ಲಿ ಬೈಕ್​ನಲ್ಲಿ ಬಂದಿದ್ದ ಮೂವರು ಮಹಿಳೆಯ ಸರ ಕಸಿದು ಎಸ್ಕೇಪ್ ಆಗಿದ್ದಾರೆ.

ನಾಯಂಡಹಳ್ಳಿಯ ಐಟಿ ಲೇಔಟ್​ನ ಕೈಲಾಶ್ ದೇವಾಲಯ ಬಳಿ ಬೈಕ್​ನಲ್ಲಿ ಬಂದಿದ್ದ ಮೂವರು ಶಾಂತಾ(47) ಎಂಬುವರ ಸರ ಕದ್ದು ಪರಾರಿಯಾಗಿದ್ದಾರೆ. ಹೊಂಚು ಹಾಕಿ ಮಹಿಳೆಯ ಸುಮಾರು 50 ಗ್ರಾಂ ತೂಕದ ಮಾಂಗಲ್ಯ ಸರ ಎಗರಿಸಿ ಕ್ಷಣಾರ್ಧದಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ. ಸರಗಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಜನವರಿ 9 ರಂದು ಆರ್.ಟಿ.ನಗರದ ಗಿಡ್ಡಪ್ಪ ಬ್ಲಾಕ್​ನಲ್ಲಿ ಸರಗಳ್ಳತನ ನಡೆದಿತ್ತು. 55 ವರ್ಷದ ನಿರ್ಮಲಾ ಎಂಬ ಮಹಿಳೆಯನ್ನು ಗಾಯಗೊಳಿಸಿ ಸರ ಕಸಿದು ಆರೋಪಿಗಳು ಎಸ್ಕೇಪ್ ಆಗಿದ್ದರು. ನಿನ್ನೆ ನಂದಿನಿ ಲೇಔಟ್​ನಲ್ಲಿ ಮಹಿಳೆಯ ಸರ ಎಗರಿಸಿ ಆರೋಪಿಗಳು ಪರಾರಿಯಾಗಿದ್ದರು.


Published On - 5:25 pm, Sun, 12 January 20