ಲಾರಿ ಹರಿದು ಬೈಕ್‌ನಲ್ಲಿದ್ದ ಯುವತಿ ಸ್ಥಳದಲ್ಲೇ ದುರ್ಮರಣ, ಇಬ್ಬರು ಗಂಭೀರ
ಬಾಗಲಕೋಟೆ: ಬೈಕ್ ಮೇಲೆ ಲಾರಿ ಹರಿದ ಪರಿಣಾಮ ಯುವತಿಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಇಳಕಲ್ ತಾಲೂಕಿನ ಗೊರಬಾಳ ಕ್ರಾಸ್ ಬಳಿಯಿರುವ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ. 22 ವರ್ಷದ ಭುವನೇಶ್ವರಿ ಗೌಡರ ಮೃತ ದುರ್ದೈವಿ. ಮೃತ ಯುವತಿ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಅಂಕನಾಳ ಗ್ರಾಮದವಳು ಎಂದು ತಿಳಿದುಬಂದಿದೆ. ಇನ್ನು, ಘಟನೆಯಲ್ಲಿ ರತ್ನವ್ವ ಹಾಗೂ ಭೀಮಪ್ಪ ಎಂಬುವವರಿಗೆ ಗಾಯಗಳಾಗಿದೆ. ಸದ್ಯ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಗಲಕೋಟೆ: ಬೈಕ್ ಮೇಲೆ ಲಾರಿ ಹರಿದ ಪರಿಣಾಮ ಯುವತಿಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಇಳಕಲ್ ತಾಲೂಕಿನ ಗೊರಬಾಳ ಕ್ರಾಸ್ ಬಳಿಯಿರುವ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ. 22 ವರ್ಷದ ಭುವನೇಶ್ವರಿ ಗೌಡರ ಮೃತ ದುರ್ದೈವಿ.
ಮೃತ ಯುವತಿ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಅಂಕನಾಳ ಗ್ರಾಮದವಳು ಎಂದು ತಿಳಿದುಬಂದಿದೆ. ಇನ್ನು, ಘಟನೆಯಲ್ಲಿ ರತ್ನವ್ವ ಹಾಗೂ ಭೀಮಪ್ಪ ಎಂಬುವವರಿಗೆ ಗಾಯಗಳಾಗಿದೆ. ಸದ್ಯ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.