ಹಣಕಾಸು ವಹಿವಾಟು, ಅಕ್ರಮ ಸಂಬಂಧ ಶಂಕೆ: ಮಹಿಳೆಯ ಕೊಲೆಗೈದು ಅವಿವಾಹಿತ ಆತ್ಮಹತ್ಯೆ

| Updated By: ಸಾಧು ಶ್ರೀನಾಥ್​

Updated on: Nov 19, 2020 | 2:26 PM

ದಕ್ಷಿಣ ಕನ್ನಡ: ಜಿಲ್ಲೆಯ ಸುರತ್ಕಲ್ ಬಳಿ ಮಹಿಳೆಯೊಬ್ಬಳನ್ನು ಹತ್ಯೆಗೈದು ನಂತರ ಅವಿವಾಹಿತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ನಡೆದಿದೆ. ಹಣಕಾಸು ವಹಿವಾಟು ಹಾಗೂ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಮಹಿಳೆಯನ್ನು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ಸುರತ್ಕಲ್ ಬಳಿಯ ಮುಕ್ಕದ ಬಾಡಿಗೆ ಮನೆಯಲ್ಲಿ ಕೃತ್ಯ ‌ನಡೆದಿದೆ. ರೇಖಾ ಭಂಡಾರಿ(36) ಎಂಬುವವರನ್ನು ಕೊಲೆಗೈದು ವಸಂತ್ (42) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಸಂತ್ ಸುರತ್ಕಲ್ ಪೇಟೆಯಲ್ಲಿ ಹೂವಿನ ವ್ಯಾಪಾರ ನಡೆಸುತ್ತಿದ್ದ. ಮೃತ ಮಹಿಳೆ ರೇಖಾ ಕಾಟಿಪಳ್ಳ ನಿವಾಸಿ ಅಶೋಕ್ ಭಂಡಾರಿ ಪತ್ನಿ. ರೇಖಾಳ […]

ಹಣಕಾಸು ವಹಿವಾಟು, ಅಕ್ರಮ ಸಂಬಂಧ ಶಂಕೆ: ಮಹಿಳೆಯ ಕೊಲೆಗೈದು ಅವಿವಾಹಿತ ಆತ್ಮಹತ್ಯೆ
Follow us on

ದಕ್ಷಿಣ ಕನ್ನಡ: ಜಿಲ್ಲೆಯ ಸುರತ್ಕಲ್ ಬಳಿ ಮಹಿಳೆಯೊಬ್ಬಳನ್ನು ಹತ್ಯೆಗೈದು ನಂತರ ಅವಿವಾಹಿತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ನಡೆದಿದೆ. ಹಣಕಾಸು ವಹಿವಾಟು ಹಾಗೂ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಮಹಿಳೆಯನ್ನು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.
ನಿನ್ನೆ ಸುರತ್ಕಲ್ ಬಳಿಯ ಮುಕ್ಕದ ಬಾಡಿಗೆ ಮನೆಯಲ್ಲಿ ಕೃತ್ಯ ‌ನಡೆದಿದೆ. ರೇಖಾ ಭಂಡಾರಿ(36) ಎಂಬುವವರನ್ನು ಕೊಲೆಗೈದು ವಸಂತ್ (42) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಸಂತ್ ಸುರತ್ಕಲ್ ಪೇಟೆಯಲ್ಲಿ ಹೂವಿನ ವ್ಯಾಪಾರ ನಡೆಸುತ್ತಿದ್ದ. ಮೃತ ಮಹಿಳೆ ರೇಖಾ ಕಾಟಿಪಳ್ಳ ನಿವಾಸಿ ಅಶೋಕ್ ಭಂಡಾರಿ ಪತ್ನಿ.

ರೇಖಾಳ ಎದೆ ಹಾಗೂ ಹೊಟ್ಟೆಯ ಭಾಗಕ್ಕೆ ವಸಂತ್ 11 ಬಾರಿ ಇರಿದು ಭೀಕರವಾಗಿ ಕೊಲೆಗೈದಿದ್ದಾನೆ. ರೇಖಾ ತನ್ನ ಮಗಳನ್ನು ಮನೆಗೆ ಬಿಟ್ಟು ನ.17ರಂದು ವಸಂತ್ ಜೊತೆ ಬಂದಿದ್ದಳು. ಈ ವೇಳೆ ವಸಂತ್​ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ರೇಖಾ ಮತ್ತು ವಸಂತನಿಗೆ ಹತ್ತು ವರ್ಷಗಳಿಂದ ಪರಿಚಯವಿತ್ತು ಎಂದು ಹೇಳಲಾಗಿದೆ. ಬಹಳಷ್ಟು ಸಾಲ ಮಾಡಿಕೊಂಡಿದ್ದ ವಸಂತ್ ರೇಖಾಳಿಂದ ಹಣ ಪಡೆದಿದ್ದನು ಎಂದು ಹೇಳಲಾಗಿದೆ. ಹಾಗಾಗಿ, ಹಣ ವಾಪಸ್ ಕೇಳಿದ ಕಾರಣಕ್ಕೆ ರೇಖಾಳ ಹತ್ಯೆಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.