ಧಾರವಾಡದಲ್ಲೊಬ್ಬ ಮರಕುಟಿಕ.. ಇವನೆಂಥಾ ವಿಚಿತ್ರ ಮನುಷ್ಯ!?

ಧಾರವಾಡ ವಿದ್ಯಾವಂತರ ಬೀಡು. ಆದ್ರೆ ಇಲ್ಲೊಬ್ಬ ವಿಚಿತ್ರ ವ್ಯಕ್ತಿ ಕಾಣಿಸಿಕೊಂಡಿದ್ದಾನೆ. ಎಲ್ಲೆಡೆ ಮನೆ ಮುಂದೆ ಗಿಡ-ಮರಗಳು ಇರಲಿ ಅಂತಾ ಬಯಸೋ ಜನರಿದ್ದರೆ ಈ ವ್ಯಕ್ತಿ ಮನೆಯ ಮುಂದಿನ ಮರವನ್ನು ನಿಧಾನವಾಗಿ ಸಾಯುವಂತೆ ಮಾಡುತ್ತಿದ್ದಾನೆ! ಹೌದು! ಆತನ ಕೃತ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ. ಧಾರವಾಡ ನಗರದ ಗಾಂಧಿ ನಗರ ಬಡಾವಣೆಯ 4 ನೇ ಅಡ್ಡ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತ ಮರಗಳಿವೆ. ಅರಣ್ಯ ಇಲಾಖೆ ನೆಟ್ಟು, ಸ್ಥಳೀಯರ ಸುಪರ್ದಿಯಲ್ಲಿ ಪೋಷಿಸಿಕೊಂಡ ಮರಗಳಿವು. ಅಂತಹ ಅನೇಕ ಬೃಹತ್ […]

ಧಾರವಾಡದಲ್ಲೊಬ್ಬ ಮರಕುಟಿಕ.. ಇವನೆಂಥಾ ವಿಚಿತ್ರ ಮನುಷ್ಯ!?
Follow us
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು

Updated on:May 28, 2020 | 2:57 PM

ಧಾರವಾಡ ವಿದ್ಯಾವಂತರ ಬೀಡು. ಆದ್ರೆ ಇಲ್ಲೊಬ್ಬ ವಿಚಿತ್ರ ವ್ಯಕ್ತಿ ಕಾಣಿಸಿಕೊಂಡಿದ್ದಾನೆ. ಎಲ್ಲೆಡೆ ಮನೆ ಮುಂದೆ ಗಿಡ-ಮರಗಳು ಇರಲಿ ಅಂತಾ ಬಯಸೋ ಜನರಿದ್ದರೆ ಈ ವ್ಯಕ್ತಿ ಮನೆಯ ಮುಂದಿನ ಮರವನ್ನು ನಿಧಾನವಾಗಿ ಸಾಯುವಂತೆ ಮಾಡುತ್ತಿದ್ದಾನೆ!

ಹೌದು! ಆತನ ಕೃತ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ. ಧಾರವಾಡ ನಗರದ ಗಾಂಧಿ ನಗರ ಬಡಾವಣೆಯ 4 ನೇ ಅಡ್ಡ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತ ಮರಗಳಿವೆ. ಅರಣ್ಯ ಇಲಾಖೆ ನೆಟ್ಟು, ಸ್ಥಳೀಯರ ಸುಪರ್ದಿಯಲ್ಲಿ ಪೋಷಿಸಿಕೊಂಡ ಮರಗಳಿವು. ಅಂತಹ ಅನೇಕ ಬೃಹತ್ ಮರಗಳ ಪೈಕಿ, ಕಳೆದ ಎರಡು ದಿನಗಳಿಂದ ಒಂದು ಮನೆ ಮುಂದಿನ ಬೃಹದಾಕಾರದ ಮರ, ನಿತ್ಯ ತನ್ನ ಚರ್ಮ ಸುಲಿಸಿಕೊಳ್ಳುತ್ತಿದೆ..!

ಎಲ್ಲಾ ಮರ ಬೆಳೆಸಿ-ಉಳಿಸಿ ಅಂದ್ರೆ, ಇವಯ್ಯ ಸದ್ದಿಲ್ಲದೆ ಮರ ಉರುಳಿಸ್ತಿದಾನೆ!  ಈ ಮರವನ್ನು ಉರುಳಿಸಬೇಕು ಅನ್ನುವ ಕಾರಣಕ್ಕೆ ರಮೇಶ ಹುಟಗಿ ಅನ್ನೋ ವ್ಯಕ್ತಿ ನಿತ್ಯವೂ ಉಳಿ ಮತ್ತು ಚಾಣದಿಂದ ಅದರ ಕಾಂಡದ ಚರ್ಮ ಸುಲಿಯುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಇಂಥದ್ದೊಂದು ಕೃತ್ಯ ಎಸಗುತ್ತಿರೋ ದೃಶ್ಯವನ್ನು ಸ್ಥಳೀಯರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಪೆಲ್ಟೋ ಫಾರ್ಮ್ ಜಾತಿಯ ಈ ಮರ ಅಪಾಯ ಮಾಡುತ್ತದೆ. ಇದನ್ನು ಕಡಿದು ಹಾಕುವಂತೆ ಈ ಮುಂಚೆ ರಮೇಶ ಹುಟಗಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರಂತೆ. ಆದರೆ ಅದು ಬೀಳುವ ಸ್ಥಿತಿಯಲ್ಲಿಲ್ಲ ಅಂತಾ ಅರಣ್ಯ ಇಲಾಖೆಯವರು ಆತನ ಮನವಿಯನ್ನು ತಿರಸ್ಕರಿಸಿದ್ದರು. ಇದರಿಂದ ಸಿಟ್ಟಿಗೆದ್ದ ರಮೇಶ ಹುಟಗಿ ಮರವನ್ನು ನಿಧಾನವಾಗಿ ಸಾಯಿಸಿದರೆ ಬಳಿಕ ಅದನ್ನು ಅರಣ್ಯ ಇಲಾಖೆಯವರು ಕತ್ತರಿಸುತ್ತಾರೆ ಅಂತಾ ಇಂಥದ್ದೊಂದು ಕೆಲಸ ಮಾಡುತ್ತಿದ್ದಾರೆ!

ಆದರೆ ಇದರಿಂದ ದೊಡ್ಡ ಅನಾಹುತವೇ ಸಂಭವಿಸಬಹುದು ಅನ್ನುವ ಪರಿಜ್ಞಾನವೂ ರಮೇಶ ಅವರಿಗೆ ಇಲ್ಲ ಅನ್ನಿಸುತ್ತಿದೆ. ಏಕೆಂದರೆ ಒಂದು ವೇಳೆ ನಿತ್ಯವೂ ಹೀಗೆ ಕಾಂಡದ ತೊಗಟೆ ಸುಲಿಯುತ್ತಾ ಹೋದರೆ ಗಾಳಿಗೆ ಮರ ಬಿದ್ದರೆ ದೊಡ್ಡ ಅನಾಹುತವೇ ಆಗಬಹುದು. ಸುತ್ತಮುತ್ತಲೂ ಅನೇಕ ಮನೆಗಳು, ವಿದ್ಯುತ್ ಕಂಬಗಳು ಇವೆ. ನಿತ್ಯವೂ ಬಹಳ ಜನ ಕೂಡ ಓಡಾಡುತ್ತಾರೆ. ಇಂಥ ರಸ್ತೆಯಲ್ಲಿ ಮರವೇನಾದರೂ ಬಿದ್ದರೆ ಅನಾಹುತ ಆಗೋದು ಗ್ಯಾರಂಟಿ.

ವೀಡಿಯೋ ವೈರಲ್, ಕೇಸು ದಾಖಲು ದನ್ನು ಗಮನಿಸಿದ ಸ್ಥಳೀಯರು ಆತನ ಕೃತ್ಯದ ವೀಡಿಯೋವನ್ನು ವೈರಲ್ ಮಾಡಿದ್ದಾರೆ. ಆ ವೀಡಿಯೋ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ರಮೇಶ ಹುಟಗಿ ಮೇಲೆ ಕೇಸು ದಾಖಲಿಸಿದ್ದಾರೆ. ಇನ್ನು ಸ್ಥಳೀಯರು ಹೇಳುವಂತೆ ರಮೇಶ ಈ ಮುಂಚೆಯೂ ಇದೇ ರೀತಿ ಮಾಡಿ ಎರಡು ಮರಗಳ ಸಾವಿಗೆ ಕಾರಣರಾಗಿದ್ದಾರಂತೆ.

ಕಂತಿನ ಸಾವು ಕರುಣಿಸುವುದೇ ಇವರ ಕೆಲಸ ಇತ್ತೀಚಿಗೆ ದಿನಗಳಲ್ಲಿ ಧಾರವಾಡದಲ್ಲಿ ಇಂಥವರ ಸಂಖ್ಯೆ ಹೆಚ್ಚಾಗುತ್ತಿದೆ. ಗಿಡಗಳ ಬೇರು ಕತ್ತರಿಸುವುದು, ಅವುಗಳಿಗೆ ವಿಷಪ್ರಾಷನ ಮಾಡಲು ಪೊಟ್ಟಣ ಬಿಗಿಯುವುದು, ವಿಷದ ರಾಸಾಯನಿಕಗಳ ಚುಚ್ಚುಮದ್ದು ಚುಚ್ಚಿಸಿ, ಕಂತಿನ ಸಾವು ಕರುಣಿಸುವುದೇ ಕೆಲವರ ಕೆಲಸವಾಗಿದೆ. ಕಾಂಡಕ್ಕೆ ಹತ್ತಾರು ತೂತು ಕೊರೆದು ಪಾದರಸ ತುಂಬಿಸಿ, ಕಾಂಡ ಒಣಗಿಸಿ, ಮರ ಬೀಳಬಹುದು ಎಂಬ ಹುಯಿಲೆಬ್ಬಿಸಿ, ಅರ್ಜಿ ಗುಜರಾಯಿಸಿ, ಅರಣ್ಯ ಇಲಾಖೆಯವರಿಂದಲೇ ಮರ ಕಡಿಸುವುದು ಕೂಡ ಅನೇಕ ಕಡೆಗಳಲ್ಲಿ ನಡೆದಿದೆ. ಅಂಥವುಗಳ ಸಾಲಿಗೆ ಇದೀಗ ಈ ಪ್ರಕರಣ ಕೂಡ ಸೇರಿದಂತಾಗಿದೆ.

Published On - 2:40 pm, Thu, 28 May 20

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ