AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಕೆಟ್​ ಜಗತ್ತಿನ ಬಿಗ್​ ಬಾಸ್​ BCCI ವಾರ್ಷಿಕ ಆದಾಯ ಎಷ್ಟು ಗೊತ್ತಾ? ಕೇಳಿದರೆ ನಿಬ್ಬೆರಗಾಗುತ್ತೀರಿ!

ಇಂತ ಶ್ರೀಮಂತ ಕ್ರಿಕೆಟ್ ಮಂಡಳಿಯ ವಾರ್ಷಿಕ ಒಟ್ಟು ಮೌಲ್ಯ ಎಷ್ಟು ಅಂದ್ರೆ, ನೀವು ನಿಬ್ಬೆರಗಾಗದೇ ಇರೋದಿಲ್ಲ. 2018-19ರ ಹಣಕಾಸು ವರ್ಷದ ಅವಧಿಗೆ ಬಿಸಿಸಿಐನ ಒಟ್ಟು ಮೌಲ್ಯ 14,489.80 ಕೋಟಿ ರೂಪಾಯಿಗಳು. ಹಿಂದಿನ ವರ್ಷಕ್ಕೆ ಹೋಲಿಸಿದರೆ BCCI ವಾರ್ಷಿಕ ಆದಾಯದಲ್ಲಿ 2,597.19 ಕೋಟಿ ರೂ ಏರಿಕೆಯಾಗಿದೆ.

ಕ್ರಿಕೆಟ್​ ಜಗತ್ತಿನ ಬಿಗ್​ ಬಾಸ್​ BCCI ವಾರ್ಷಿಕ ಆದಾಯ ಎಷ್ಟು ಗೊತ್ತಾ? ಕೇಳಿದರೆ ನಿಬ್ಬೆರಗಾಗುತ್ತೀರಿ!
ಪ್ರಾತಿನಿಧಿಕ ಚಿತ್ರ
ಪೃಥ್ವಿಶಂಕರ
|

Updated on: Jan 07, 2021 | 11:29 AM

Share

ಮುಂಬೈ: BCCI.. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ.. ಇಡೀ ವಿಶ್ವದಲ್ಲಿ ಎಲ್ಲ ಕ್ರೀಡಾ ಮಂಡಳಿಗಳ ಪೈಕಿ ಶ್ರೀಮಂತ ಶ್ರೀಮಂತ ಮಂಡಳಿ ಈ ಬಿಸಿಸಿಐ! ಕ್ರಿಕೆಟ್ ದುನಿಯಾಕ್ಕೆ ಬಿಗ್ ಬಾಸ್ ಎನಿಸಿಕೊಂಡಿರೋ ಐಸಿಸಿಯನ್ನು ಸಹ ಗಡ ಗಡ ನಡುಗಿಸೋ ತಾಕತ್ತು ಹೊಂದಿರೋ ಕ್ರಿಕೆಟ್ ಮಂಡಳಿ ಇದು. IPL ಮಾದರಿಯಲ್ಲೇ ಬೇರೆಲ್ಲಾ ದೇಶಗಳು ಮಿನಿ ಟೂರ್ನಿ ನಡೆಸಿದ್ರೂ, ಬಿಸಿಸಿಐ ನಡೆಸಿಕೊಡೋ ಐಪಿಎಲ್ ಹವಾ ಮುಂದೆ, ಬೇರೆಲ್ಲಾ ಟೂರ್ನಿನೂ ಡಮ್ಮೀನೇ.

ಇಂತ ಶ್ರೀಮಂತ ಕ್ರಿಕೆಟ್ ಮಂಡಳಿಯ ವಾರ್ಷಿಕ ಒಟ್ಟು ಆದಾಯ ಎಷ್ಟು ಅಂದ್ರೆ, ನೀವು ನಿಬ್ಬೆರಗಾಗದೇ ಇರೋದಿಲ್ಲ. 2018-19ರ ಹಣಕಾಸು ವರ್ಷದ ಅವಧಿಯಲ್ಲಿ ಬಿಸಿಸಿಐ ಒಟ್ಟು ಆದಾಯ 14,489 ಕೋಟಿ ರೂಪಾಯಿ. ಇನ್ನು ಹಿಂದಿನ ವರ್ಷಕ್ಕೆ (2019-20) ಹೋಲಿಸಿದರೆ BCCI ವಾರ್ಷಿಕ ಆದಾಯದಲ್ಲಿ 2,597 ಕೋಟಿ ರೂ ಏರಿಕೆಯಾಗಿದೆ.

ಮೀಡಿಯಾ ರೈಟ್ಸ್ ಮೂಲಕ ಸುಮಾರು 828 ಕೋಟಿ ರೂ ಬಾಚಿಕೊಂಡ ಬಿಸಿಸಿಐ.. BCCI 2018ರಲ್ಲಿ 4,017 ಕೋಟಿ ರೂ. ಆದಾಯ ಗಳಿಸಿದ್ದು, ಇದರಲ್ಲಿ ಬಹುಪಾಲು ಅಂದರೆ ಸುಮಾರು 2,407 ಕೋಟಿ ರೂ 2018ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಿಂದ ಬಂದಿದೆ. ಇನ್ನು ಆ ಪಂದ್ಯಗಳ ಮೀಡಿಯಾ ರೈಟ್ಸ್ ಮೂಲಕ ಸುಮಾರು 828 ಕೋಟಿ ರೂ ಬಾಚಿರುವುದು BCCI ಎರಡನೇ ಆದಾಯದ ಮೂಲವಾಗಿದೆ.

ಬಿಸಿಸಿಐ

ಬ್ಯಾಂಕ್‌ ಠೇವಣಿ ಮೇಲಿನ ಬಡ್ಡಿಯೇ 290 ಕೋಟಿ ಆದಾಯ ತರುತಿದೆ! ಇದೇ ವೇಳೆ BCCI ಖರ್ಚು ಬಾಬತ್ತುಗಳೇನೂ ಇಲ್ಲ ಅಂತೇನೂ ಅಲ್ಲ! 2018-19 ರ ಅವಧಿಯಲ್ಲಿ ಮಂಡಳಿ ಸುಮಾರು 1,592 ಕೋಟಿ ರೂ. ಖರ್ಚು ಸಹ ಮಾಡಿದೆ. ಇಷ್ಟೇ ಅಲ್ಲದೆ BCCI ಅಂತಾರಾಷ್ಟ್ರೀಯ ಸರಣಿ ಆಯೋಜನೆ ಮೂಲಕ 446 ಕೋಟಿ ರೂ ಆದಾಯ ಗಳಿಸಿಕೊಂಡಿದೆ.

ಇನ್ನು 2018-19ರಲ್ಲಿ ಬ್ಯಾಂಕ್‌ಗಳಲ್ಲಿ ಇರಿಸಲಾಗಿರುವ ಠೇವಣಿಗೆ 290 ಕೋಟಿ ರೂಪಾಯಿ ಬಡ್ಡಿ ರೂಪದಲ್ಲಿ ಪಡೆದುಕೊಂಡಿದೆ. ICC ಮತ್ತು ಏಷ್ಯನ್ ಕ್ರಿಕೆಟ್‌ ಕೌನ್ಸಿಲ್‌ನಿಂದಲೂ 25 ಕೋಟಿ ಆದಾಯವನ್ನು ಪಡೆದಿದೆ! ಇದೇ ಕಾರಣಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರು, ಬೇರೆಲ್ಲಾ ದೇಶಗಳ ಕ್ರಿಕೆಟಿಗರಿಗಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಾರೆ!

2019-20 ರ IPL ನಲ್ಲಿ 4000 ಕೋಟಿ ಆದಾಯ ಗಳಿಸಿದ BCCI.. ಕೊರೊನಾ ಮಹಾಮಾರಿಯ ಆರ್ಭಟದ ನಡುವೆಯು ದುಬೈನಲ್ಲಿ ‘ಸುರಕ್ಷಿತವಾಗಿ’ IPL ಆಯೋಜಿಸಿ, ಪಂದ್ಯಾವಳಿ ನಡಿಸಿದ BCCI. 2019-20 ರ IPL ಆವೃತ್ತಿಯಲ್ಲಿ ಭರ್ಜರಿ ಆದಾಯ ಗಳಿಸಿತ್ತು. ಯುಎಇಯಲ್ಲಿ ಮುಕ್ತಾಯಗೊಂಡ ಐಪಿಎಲ್ 2020 ರಲ್ಲಿ BCCI 4,000 ಕೋಟಿ ರೂ ಆದಾಯ ಗಳಿಸಿ, ಮತ್ತೊಮ್ಮೆ ತಾನೂ ಕ್ರಿಕೆಟ್​ ಜಗತ್ತಿನ ಸಾಮ್ರಾಟ ಎಂಬುದನ್ನು ಸಾಬೀತು ಪಡಿಸಿತು.

ಇವುಗಳ ಜೊತೆಗೆ BCCI ತನ್ನ 7 ಸ್ಪಾನ್ಸರ್​ಗಳಿಂದಲೂ ಕೋಟಿ ಕೋಟಿ ರೂಪಾಯಿ ಹಣ ಪಡೆಯುತ್ತಿದೆ. ಹೀಗೆ ವರ್ಷಕ್ಕೆ ಸಾವಿರಾರು ಕೋಟಿ ಆದಾಯಗಳಿಸೋ BCCI, ಕ್ರಿಕೆಟ್ ದುನಿಯಾದ ಕಿಂಗ್ ಆಗಿ ಗುರುತಿಸಿಕೊಂಡಿದೆ. ಇದೇ ಕಾರಣಕ್ಕೆ ICC ಅನ್ನೋ ವಿಶ್ವ ಕ್ರಿಕೆಟ್ ಸಂಸ್ಥೆಯೂ BCCI ಎದುರು, ಮಂಡಿಯೂರತ್ತದೆ.

ಇಂತಹ ಶ್ರೀಮಂತ ಮಂಡಳಿಗೆ ಸದ್ಯಕ್ಕೆ ಅಧ್ಯಕ್ಷರಾಗಿರುವುದು ಭಾರತೀಯ ಕ್ರಿಕೆಟ್ ಅಂಗಳದ ದಾದಾ ಸೌರವ್​ ಗಂಗೂಲಿ! ಇನ್ನು, ಮಂಡಳಿಯ ಬಾದ್​ಷಾ ರೀತಿ ಇರುವವರು ಬಿಜೆಪಿ ಅಧಿನಾಯಕ ಅಮಿತ್ ಶಾ ಅವರ ಪುತ್ರ ಜಯ್​ ಶಾ. ಇವರು ಬಿಸಿಸಿಐ ಕಾರ್ಯದರ್ಶಿಯಾಗಿದ್ದಾರೆ.

India vs Australia Test Series | ಮೂರನೇ ಟೆಸ್ಟ್ ಪಂದ್ಯಕ್ಕೆ ವರುಣನ ಅಡ್ಡಿ.. ಆಸಿಸ್​ಗೆ ಆರಂಭಿಕ ಆಘಾತ