ಯೋ-ಯೋ 2.0? ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಆಟಗಾರರಿಗಾಗಿ ಹೊಸ ಫಿಟ್‌ನೆಸ್ ಪರೀಕ್ಷೆ ಪರಿಚಯಿಸಿದ BCCI

ಭಾರತೀಯ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿರುವ ಆಟಗಾರರು 2 ಕಿ.ಮೀ ದೂರವನ್ನು ನಿಗದಿ ಪಡಿಸಿದ ಸಮಯದೊಳಗೆ ತಲುಪುವುದು ಕಡ್ಡಾಯವಾಗಿದೆ.  .

ಯೋ-ಯೋ 2.0? ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಆಟಗಾರರಿಗಾಗಿ ಹೊಸ ಫಿಟ್‌ನೆಸ್ ಪರೀಕ್ಷೆ ಪರಿಚಯಿಸಿದ BCCI
ತರಬೇತಿಯಲ್ಲಿ ನಿರತರಾಗಿರುವ ಟೀಂ ಇಂಡಿಯಾ ಆಟಗಾರರು
Follow us
ಪೃಥ್ವಿಶಂಕರ
| Updated By: ರಾಜೇಶ್ ದುಗ್ಗುಮನೆ

Updated on: Jan 22, 2021 | 1:50 PM

ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾ ಆಟಗಾರರು ಎದುರಿಸಿದ ಗಾಯದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ, ಆಟಗಾರರ ಫಿಟ್‌ನೆಸ್ ವಿಚಾರದಲ್ಲಿ ಹೊಸ ಅನ್ವೇಷಣೆಗೆ ಮುಂದಾಗಿದೆ.

ಯೋ-ಯೋ ಪರೀಕ್ಷೆಯ ಪರಿಚಯವು ತಂಡದ ಭವಿಷ್ಯವನ್ನು ರೂಪಿಸಲು ಸಹಾಯ ಮಾಡಿತು. ಹೀಗಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತೊಂದು ಪರೀಕ್ಷೆಯನ್ನು ಪರಿಚಯಿಸಿದೆ. ಇದರನ್ವಯ ಭಾರತೀಯ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿರುವ ಆಟಗಾರರು 2 ಕಿ.ಮೀ ದೂರವನ್ನು ನಿಗದಿ ಪಡಿಸಿದ ಸಮಯದೊಳಗೆ ತಲುಪುವುದು ಕಡ್ಡಾಯವಾಗಿದೆ.  .

ಮಂಡಳಿ, ವೇಗದ ಬೌಲರ್‌ಗಳಿಗೆ 2 ಕಿ.ಮೀ ದೂರವನ್ನು ಪೂರ್ಣಗೊಳಿಸಲು 8 ನಿಮಿಷ 15 ಸೆಕೆಂಡುಗಳ ಕಾಲವಕಾಶ ನಿಗದಿಪಡಿಸಿದ್ದರೆ, ಬ್ಯಾಟ್ಸ್‌ಮನ್‌ಗಳು, ಸ್ಪಿನ್ನರ್‌ಗಳು ಮತ್ತು ವಿಕೆಟ್ ಕೀಪರ್‌ಗಳಿಗೆ 8 ನಿಮಿಷ 30 ಸೆಕೆಂಡುಗಳ ಕಾಲವಕಾಶ ನೀಡಿದೆ. ಇದರ ಜೊತೆಗೆ ಅಸ್ತಿತ್ವದಲ್ಲಿರುವ ಯೋ-ಯೋ ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ತರುವುದಿಲ್ಲ ಎಂದು ಮಂಡಳಿ ತಿಳಿಸಿದೆ. ಆಟಗಾರರ ಫಿಟ್ನೆಸ್ ಅನ್ನು ಮುಂದಿನ ಹಂತಕ್ಕೆ ತಲುಪಿಸುವಲ್ಲಿ ಪ್ರಸ್ತುತ ಫಿಟ್ನೆಸ್ ಮಾನದಂಡವು ದೊಡ್ಡ ಪಾತ್ರವನ್ನು ವಹಿಸಲಿದೆ ಎಂದು ಮಂಡಳಿ ಭಾವಿಸಿದೆ.

ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮುಂತಾದ ಗಣ್ಯ ಕ್ರೀಡಾಪಟುಗಳು ಹೊಸ ಪರೀಕ್ಷೆಯನ್ನು ಕಡಿಮೆ ಸಮಯದಲ್ಲಿ (8 ನಿಮಿಷ 6 ಸೆಕೆಂಡುಗಳು) ಪೂರ್ಣಗೊಳಿಸುವ ನಿರೀಕ್ಷೆಯಿದೆ. ಆಟಗಾರರಿಗೆ ಕನಿಷ್ಠ ಯೋ-ಯೋ ಟೆಸ್ಟ್ ಸ್ಕೋರ್, ಈ ಮಧ್ಯೆ 17.1 ಆಗಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜೈ ಷಾ ಅವರಿಂದ ಅಗತ್ಯ ಅನುಮೋದನೆ ಪಡೆದ ನಂತರ ಎಲ್ಲಾ ಬಿಸಿಸಿಐ ಗುತ್ತಿಗೆ ಆಟಗಾರರಿಗೆ ಹೊಸ ಪರೀಕ್ಷೆ ನಡೆಸುತ್ತಿದೆ.

ಈ ಪರೀಕ್ಷೆಯನ್ನು ಫೆಬ್ರವರಿ, ಜೂನ್, ಆಗಸ್ಟ್, ಸೆಪ್ಟೆಂಬರ್‌ನಲ್ಲಿ ನಡೆಸಲಾಗುವುದು. ಆಸಿಸ್​ ಟೆಸ್ಟ್ ಸರಣಿಯಲ್ಲಿ ಭಾಗವಸಿದ್ದ ಆಟಗಾರರು ಫೆಬ್ರವರಿಯಲ್ಲಿ ಪರೀಕ್ಷೆಗೆ ಒಳಗಾಗಬೇಕೆಂದಿಲ್ಲ. ಆದರೆ ಸೀಮಿತ ಓವರ್‌ಗಳ ಸರಣಿಗೆ ಆಯ್ಕೆಯಾಗುವವರು ಪರೀಕ್ಷೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಭಾರತ ತಂಡದ ಮಾಜಿ ತರಬೇತುದಾರರಾದ ರಾಮ್‌ಜಿ ಶ್ರೀನಿವಾಸನ್, ಯೋ-ಯೋ ಟೆಸ್ಟ್​ ಜೊತೆ ಟೈಮ್ ಟ್ರಯಲ್ ಪರೀಕ್ಷೆಯನ್ನು ನಡೆಸುವ ಜವಬ್ದಾರಿ ಹೊರಲಿದ್ದಾರೆ.

ಇಂಜುರಿ ಸಮಸ್ಯೆ: ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಯಿಂದ ರವೀಂದ್ರ ಜಡೇಜಾ ಔಟ್​..!