ಬುದ್ದಿವಾದ ಹೇಳೋದೆ ತಪ್ಪಾಗಿ ಹೋಯ್ತಾ? ಮನನೊಂದ ಯುವಕನಿಂದ ವಿಷ ಸೇವನೆ
ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ನಡೆದಿದ್ದು, ಬುದ್ದಿಮಾತು ಹೇಳಿದ್ದಕ್ಕೆ ಯುವಕ ವಿಷ ಸೇವಿಸಿದ್ದಾನೆ. ಸದ್ಯ ಈ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆಗೆ ಪ್ರಯತ್ನಿಸಿದ ಶಿವುವನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವ ದೃಶ್ಯ.
ವಿಜಯಪುರ: ಪ್ರಾಣ ನೀಗಿಕೊಳ್ಳುವುದೇ ಎಲ್ಲದಕ್ಕೂ ಪರಿಹಾರ ಎನ್ನುವುದು ಇತ್ತೀಚೆಗಿನ ಜನರ ಮನಸ್ಥಿತಿಯಾಗಿದೆ. ಇಂತಹದ್ದೇ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ನಡೆದಿದ್ದು, ಬುದ್ದಿಮಾತು ಹೇಳಿದ್ದಕ್ಕೆ ಯುವಕ ವಿಷ ಸೇವಿಸಿದ್ದಾನೆ.
ಸ್ಪೀಡ್ ಆಗಿ ಬೈಕ್ ಓಡಿಸಬೇಡ ಎಂದು ಕುಟುಂಬಸ್ಥರು ಬುದ್ದಿಮಾತು ಹೇಳಿದ್ದನ್ನೇ ದೊಡ್ಡ ಅವಮಾನ ಎಂದು ತಿಳಿದ ಶಿವು ಜೋಗುರ (21) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾನೆ.
ಸದ್ಯ ಸಿಂದಗಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಖಾಸಗಿ ಆಸ್ಪತ್ರೆಗೆ ಯುವಕನನ್ನು ರವಾನೆ ಮಾಡಲಾಗಿದೆ. ಈ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



