12 ಅಡಿ ಉದ್ದದ ಭಯಂಕರ ಹೆಬ್ಬಾವು ರಕ್ಷಿಸಿದ ಕೊಡಗಿನ ಕಲಿ

ಮಡಿಕೇರಿ: ಸತತ ಮಳೆಯ ಪರಿಣಾಮವೋ ಅಥವಾ ಕುರಿ ಕೋಳಿ ತಿನ್ನವ ಆಶೆಯೋ ಗೊತ್ತಿಲ್ಲ, ಆದ್ರೆ ಕಾಡು ಬಿಟ್ಟು ನಾಡಿನತ್ತ ಬಂದಿದ್ದ ಹೆಬ್ಬಾವು ಒಂದನ್ನು ಗ್ರಾಮಸ್ಥರು ನೋಡಿ ರಕ್ಷಣೆ ಮಾಡಿದ ಘಟನೆ ಕೊಡಗಿನಲ್ಲಿ ನಡೆದಿದೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಚೆಟ್ಟಿಮಾನಿ ಗ್ರಾಮದ ಕೆದಂಬಾಡಿಯ ದಿಲಿ ಎಂಬವರ ಮನೆ ಬಳಿ ಕಾಡಿನಿಂದ ಹೆಬ್ಬಾವು ಬಂದಿತ್ತು. ಇದನ್ನು ನೋಡಿ ಗ್ರಾಮಸ್ಥರಲ್ಲಿ ಕೆಲವರು ಭಯಭೀತರಾದ್ರೆ, ಇನ್ನುಳಿದವರು ಹೊಡೆಯಲು ಮುಂದಾಗಿದ್ದಾರೆ. ಆದ್ರೆ ಸ್ಥಳೀಯರಾದ ಉದಯ್‌ಕುಮಾರ್‌ ಎಂಬುವವರು ಇತರರ ಸಹಾಯದೊಂದಿಗೆ ಗ್ರಾಮಕ್ಕೆ ಬಂದಿದ್ದ ಭಯಂಕರ […]

12 ಅಡಿ ಉದ್ದದ ಭಯಂಕರ ಹೆಬ್ಬಾವು ರಕ್ಷಿಸಿದ ಕೊಡಗಿನ ಕಲಿ

Updated on: Aug 29, 2020 | 7:01 PM

ಮಡಿಕೇರಿ: ಸತತ ಮಳೆಯ ಪರಿಣಾಮವೋ ಅಥವಾ ಕುರಿ ಕೋಳಿ ತಿನ್ನವ ಆಶೆಯೋ ಗೊತ್ತಿಲ್ಲ, ಆದ್ರೆ ಕಾಡು ಬಿಟ್ಟು ನಾಡಿನತ್ತ ಬಂದಿದ್ದ ಹೆಬ್ಬಾವು ಒಂದನ್ನು ಗ್ರಾಮಸ್ಥರು ನೋಡಿ ರಕ್ಷಣೆ ಮಾಡಿದ ಘಟನೆ ಕೊಡಗಿನಲ್ಲಿ ನಡೆದಿದೆ.

ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಚೆಟ್ಟಿಮಾನಿ ಗ್ರಾಮದ ಕೆದಂಬಾಡಿಯ ದಿಲಿ ಎಂಬವರ ಮನೆ ಬಳಿ ಕಾಡಿನಿಂದ ಹೆಬ್ಬಾವು ಬಂದಿತ್ತು. ಇದನ್ನು ನೋಡಿ ಗ್ರಾಮಸ್ಥರಲ್ಲಿ ಕೆಲವರು ಭಯಭೀತರಾದ್ರೆ, ಇನ್ನುಳಿದವರು ಹೊಡೆಯಲು ಮುಂದಾಗಿದ್ದಾರೆ.

ಆದ್ರೆ ಸ್ಥಳೀಯರಾದ ಉದಯ್‌ಕುಮಾರ್‌ ಎಂಬುವವರು ಇತರರ ಸಹಾಯದೊಂದಿಗೆ ಗ್ರಾಮಕ್ಕೆ ಬಂದಿದ್ದ ಭಯಂಕರ ಹೆಬ್ಬಾವನ್ನು ಸೆರೆ ಹಿಡಿದಿದ್ದಾರೆ.
ಸುಮಾರು 12 ಅಡಿ ಉದ್ದ, 20 ಕೆ.ಜಿ. ತೂಕವಿರುವ ಈ ಹೆಬ್ಬಾವನ್ನು ಹಿಡಿದು ರಕ್ಷಿಸಿದ ನಂತರ ಅರಣ್ಯಾಧಿಕಾರಿಗಳ ವಶಕ್ಕೆ ನೀಡಿದ್ದಾರೆ.