ಕಾಲು ಜಾರಿ ನದಿಗೆ ಬಿದ್ದು ಯುವಕನ ಸಾವು!
ಹಾಸನ: ನದಿ ದಡದಲ್ಲಿ ಹಾದು ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ ಯುವಕನೊಬ್ಬ ನದಿಗೆ ಬಿದ್ದು ಸಾವನಪ್ಪಿರುವ ಘಟನೆ ಹಾಸನ ಜಿಲ್ಲೆಯಲ್ಲಿ ಸಂಭವಿಸಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಐಗೂರು ಗ್ರಾಮದ ನವೀನ್(25) ಎಂಬ ಯುವಕ ಬೆಳಿಗ್ಗೆ ಜಾನುವಾರುಗಳನ್ನ ಜಮೀನಿನ ಬಳಿ ಕರೆದೊಯ್ಯವಾಗ ಈ ಅವಘಡ ಸಂಭವಿಸಿದೆ. ನದಿಯಂಚಿನಲ್ಲಿ ಜಾನುವಾರುಗಳೊಂದಿಗೆ ತೆರಳುವಾಗ ಆಕಸ್ಮಿಕವಾಗಿ ಯುವಕ ಕಾಲು ಜಾರಿ ನದಿಗೆ ಬಿದ್ದಿದ್ದಾನೆ ಎನ್ನಲಾಗ್ತಿದೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದಾರೆ. ಬೆಳಿಗ್ಗೆಯಿಂದ ಶೋಧ ನಡೆಸಿ ಯುವಕನ ಮೃತದೇಹವನ್ನು ಹೊರತೆಗೆದಿದ್ದಾರೆಂದು ತಿಳಿದು […]

ಹಾಸನ: ನದಿ ದಡದಲ್ಲಿ ಹಾದು ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ ಯುವಕನೊಬ್ಬ ನದಿಗೆ ಬಿದ್ದು ಸಾವನಪ್ಪಿರುವ ಘಟನೆ ಹಾಸನ ಜಿಲ್ಲೆಯಲ್ಲಿ ಸಂಭವಿಸಿದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಐಗೂರು ಗ್ರಾಮದ ನವೀನ್(25) ಎಂಬ ಯುವಕ ಬೆಳಿಗ್ಗೆ ಜಾನುವಾರುಗಳನ್ನ ಜಮೀನಿನ ಬಳಿ ಕರೆದೊಯ್ಯವಾಗ ಈ ಅವಘಡ ಸಂಭವಿಸಿದೆ. ನದಿಯಂಚಿನಲ್ಲಿ ಜಾನುವಾರುಗಳೊಂದಿಗೆ ತೆರಳುವಾಗ ಆಕಸ್ಮಿಕವಾಗಿ ಯುವಕ ಕಾಲು ಜಾರಿ ನದಿಗೆ ಬಿದ್ದಿದ್ದಾನೆ ಎನ್ನಲಾಗ್ತಿದೆ.
ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದಾರೆ. ಬೆಳಿಗ್ಗೆಯಿಂದ ಶೋಧ ನಡೆಸಿ ಯುವಕನ ಮೃತದೇಹವನ್ನು ಹೊರತೆಗೆದಿದ್ದಾರೆಂದು ತಿಳಿದು ಬಂದಿದೆ.



