ರಾಜಿ ಸಂಧಾನಕ್ಕೆ ಕರೆದು ಚಾಕುವಿನಿಂದ ಇರಿದು ಯುವಕನ ಬರ್ಬರ ಕೊಲೆ

ನಿನ್ನೆ ರಾತ್ರಿ ಚಾಕುವಿನಿಂದ ಇರಿದು ಯಾಚೇನಹಳ್ಳಿ ಗ್ರಾಮದ ನಿವಾಸಿ ಆನಂದ ಅಲಿಯಾಸ್ ಶಿವಕುಮಾರ್​ನನ್ನು(21)ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಎರಡು ದಿನಗಳ ಹಿಂದೆ ಗ್ರಾಮದ ಯುವಕರ ನಡುವೆ ಗಲಾಟೆ ನಡೆದಿತ್ತು. ಇದೇ ವಿಚಾರವಾಗಿ ರಾಜಿ ಸಂಧಾನಕ್ಕೆ ಕರೆದು ಯುವಕನ ಹತ್ಯೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

  • TV9 Web Team
  • Published On - 9:25 AM, 20 Jan 2021
ರಾಜಿ ಸಂಧಾನಕ್ಕೆ ಕರೆದು ಚಾಕುವಿನಿಂದ ಇರಿದು ಯುವಕನ ಬರ್ಬರ ಕೊಲೆ

ಹಾಸನ: ಕ್ಷುಲ್ಲಕ‌ ಕಾರಣಕ್ಕೆ ಗಲಾಟೆಯಾಗಿ ಚಾಕು ಇರಿದು ಯುವಕನ ಬರ್ಬರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಡಿ.ಕಾಳೇನಹಳ್ಳಿ ಬಳಿ ನಡೆದಿದೆ. ಆನಂದ(21) ಕೊಲೆಯಾದ ಯುವಕ.

ನಿನ್ನೆ ರಾತ್ರಿ ಚಾಕುವಿನಿಂದ ಇರಿದು ಯಾಚೇನಹಳ್ಳಿ ಗ್ರಾಮದ ನಿವಾಸಿ ಆನಂದ ಅಲಿಯಾಸ್ ಶಿವಕುಮಾರ್​ನನ್ನು(21)ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಎರಡು ದಿನಗಳ ಹಿಂದೆ ಗ್ರಾಮದ ಯುವಕರ ನಡುವೆ ಗಲಾಟೆ ನಡೆದಿತ್ತು. ಇದೇ ವಿಚಾರವಾಗಿ ರಾಜಿ ಸಂಧಾನಕ್ಕೆ ಕರೆದು ಯುವಕನ ಹತ್ಯೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದೇವನಹಳ್ಳಿ: ವಾಯುವಿಹಾರಕ್ಕೆ ತೆರಳಿದ್ದ ವೃದ್ಧನ ಕೊಲೆಗೈದು ಚಿನ್ನಾಭರಣ ದೋಚಿದ ದುಷ್ಕರ್ಮಿಗಳು