ಮನೆಯ ಮುಂದಿದ್ದ ನೀರಿನ ಸಂಪಿಗೆ ಬಿದ್ದು ಮಗು ಸಾವು
ನಿರ್ಮಾಣ ಹಂತದಲ್ಲಿದ್ದ ಮನೆಯ ಮುಂದಿದ್ದ ನೀರಿನ ಸಂಪಿಗೆ ಬಿದ್ದು ಪುಟ್ಟ ಕಂದಮ್ಮ(ದಯಾನಂದ್) ಸಾವನ್ನಪ್ಪಿರುವ ಘಟನೆ ಹುಣಸೂರು ತಾಲೂಕಿನ ತೆಂಕಲಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಮೈಸೂರು: ನಿರ್ಮಾಣ ಹಂತದಲ್ಲಿದ್ದ ಮನೆಯ ಮುಂದಿದ್ದ ನೀರಿನ ಸಂಪಿಗೆ ಬಿದ್ದು ಪುಟ್ಟ ಕಂದಮ್ಮ(ದಯಾನಂದ್) ಸಾವನ್ನಪ್ಪಿರುವ ಘಟನೆ ಹುಣಸೂರು ತಾಲೂಕಿನ ತೆಂಕಲಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ತೆಂಕಲಕೊಪ್ಪಲಿನ ನಟರಾಜ್ ಎಂಬುವವರ ಪುತ್ರ ಒಂದೂವರೆ ವರ್ಷದ ದಯಾನಂದ್ ನಿರ್ಮಾಣದ ಹಂತದಲ್ಲಿದ್ದ ಮನೆ ಎದುರು ಅಕ್ಕನ ಜೊತೆ ಆಟವಾಡುತ್ತಿದ್ದ. ಅಕ್ಕ ಮನೆಯೊಳಗೆ ಹೋಗಿ ಬರುವಷ್ಟರಲ್ಲಿ ದಯಾನಂದ್ ಕಾಣೆಯಾಗಿದ್ದ.
ಬಳಿಕ ಆತನಿಗಾಗಿ ಹುಡುಕಾಟ ಪ್ರಾರಂಭಗೊಂಡಿತ್ತು, ಈ ವೇಳೆ ಎದುರಿಗಿದ್ದ ನೀರಿನ ಸಂಪಿನೊಳಗೆ ಬಿದ್ದ ಮಗುವಿನ ಮೃತ ದೇಹ ಪತ್ತೆಯಾಗಿದೆ. ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.