Hair Care: ನೀವು ನಿಮ್ಮ ಕೂದಲನ್ನು ಇಷ್ಟ ಪಡ್ತೀರ ಅಲ್ವಾ ಹಾಗಾದರೆ ಈ ತಪ್ಪು ಮಾಡಬೇಡಿ

ನಾವು ಮಾಡುವ ಕೆಲವು ಸಣ್ಣ ತಪ್ಪುಗಳು ಕೂದಲು ಉದುರುವಿಕೆ ಅಥವಾ ತೆಳ್ಳಗಾಗುವಿಕೆಗೆ ಕಾರಣವಾಗುತ್ತದೆ. ನಾವು ತಿಳಿಯದೇ ಮಾಡುವ ಕೆಲವು ಕೆಲಸಗಳು ಕೂಡ ನಮ್ಮ ಕೂದಲಿಗೆ ಹಾನಿಯನ್ನುಂಟುಮಾಡುತ್ತವೆ.

Hair Care: ನೀವು ನಿಮ್ಮ ಕೂದಲನ್ನು ಇಷ್ಟ ಪಡ್ತೀರ ಅಲ್ವಾ ಹಾಗಾದರೆ ಈ ತಪ್ಪು ಮಾಡಬೇಡಿ
Haircare
Follow us
TV9 Web
| Updated By: ನಯನಾ ರಾಜೀವ್

Updated on: Aug 05, 2022 | 12:50 PM

ನಾವು ಮಾಡುವ ಕೆಲವು ಸಣ್ಣ ತಪ್ಪುಗಳು ಕೂದಲು ಉದುರುವಿಕೆ ಅಥವಾ ತೆಳ್ಳಗಾಗುವಿಕೆಗೆ ಕಾರಣವಾಗುತ್ತದೆ. ನಾವು ತಿಳಿಯದೇ ಮಾಡುವ ಕೆಲವು ಕೆಲಸಗಳು ಕೂಡ ನಮ್ಮ ಕೂದಲಿಗೆ ಹಾನಿಯನ್ನುಂಟುಮಾಡುತ್ತವೆ.

ಕೂದಲನ್ನು ಹೆಚ್ಚು ತೊಳೆಯಬೇಡಿ: ಆಗಾಗ ಶಾಂಪೂ ಬಳಸಿ ನಿಮ್ಮ ಕೂದಲನ್ನು ಸ್ವಚ್ಛಗೊಳಿಸುವುದು ನಿಮ್ಮ ಕೂದಲಿಗೆ ಶಾಶ್ವತವಾಗಿ ಹಾನಿ ಮಾಡುತ್ತದೆ. ರಾಸಾಯನಿಕಗಳು ನೈಸರ್ಗಿಕ ತೈಲವನ್ನು ತಲೆಯಿಂದ ಹೋಗುವಂತೆ ಮಾಡಿ, ಕೂದಲಿನ ಬೇರುಗಳು ದುರ್ಬಲವಾಗುವಂತೆ ಮಾಡುತ್ತದೆ. ಅಲ್ಲದೆ, ಬಹಳಷ್ಟು ಶಾಂಪೂ ಮಾಡುವುದು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ತಜ್ಞರ ಪ್ರಕಾರ, ನೀವು ವಾಸಿಸುವ ಸ್ಥಳವನ್ನು ಅವಲಂಬಿಸಿ, ವಾರಕ್ಕೆ ಎರಡು ಬಾರಿ ಮಾತ್ರ ತಲೆಸ್ನಾನ ಮಾಡಿ ಎಂದು ಸಲಹೆ ನೀಡಿದ್ದಾರೆ.

ನೆತ್ತಿಯ ಮೇಲೆ ಕಂಡೀಷನರ್ ಹಾಕಬೇಡಿ: ಶಾಂಪೂ ಮಾಡಿದ ನಂತರ ನಿಮ್ಮ ಕೂದಲನ್ನು ಕಂಡೀಷನರ್ ಮಾಡುವುದು ಬಹಳ ಮುಖ್ಯ ಆದರೆ ಅದನ್ನು ಸರಿಯಾಗಿ ಎಲ್ಲಿ ಹಾಕಬೇಕೆಂದು ನೀವು ತಿಳಿದಿರಬೇಕು. ಕಂಡೀಷನರ್ ಅನ್ನು ಯಾವಾಗಲೂ ಕೂದಲಿಗೆ ಅನ್ವಯಿಸಬೇಕು, ಆರೋಗ್ಯಕರ ಮತ್ತು ಹೊಳೆಯುವ ಕೂದಲನ್ನು ಪಡೆಯಬಹುದು. ಆದರೆ ನೆತ್ತಿ ಭಾಗಕ್ಕೆ ಹಚ್ಚುವುದು ಬೇಡ.

ಕೂದಲನ್ನು ಹೆಚ್ಚು ಹೊತ್ತು ಕಟ್ಟಬೇಡಿ: ಕೂದಲನ್ನು ಪೋನಿಟೇಲ್ ಅಥವಾ ಬ್ರೇಡ್‌ನಲ್ಲಿ ದೀರ್ಘಕಾಲ ಇಡುವುದು ತುಂಬಾ ಆರಾಮದಾಯಕವೆನಿಸಿದರೂ ಕೂದಲು ಉದುರುವ ಸಮಸ್ಯೆ ಹೆಚ್ಚಿದೆ. ಇವು ಕೂದಲಿನ ಬೇರುಗಳನ್ನು ದುರ್ಬಲಗೊಳಿಸುತ್ತವೆ ಹಾಗೂ ನೆತ್ತಿಯನ್ನು ಹಾನಿಗೊಳಿಸುತ್ತವೆ.

ಹೇರ್ ಬ್ರಷ್ ಬಳಕೆ : ಹೇರ್ ಬ್ರಷ್ ಅನ್ನು ಬುದ್ಧಿವಂತಿಕೆಯಿಂದ ಬಳಸಿದರೆ ನಿಮ್ಮ ಕೂದಲಿಗೆ ಒಳ್ಳೆಯದು. ಪ್ರತಿ ಗಂಟೆಗೆ ಕೂದಲನ್ನು ಬಾಚಬೇಡಿ ಏಕೆಂದರೆ ಅದು ನಿಮ್ಮ ಕೂದಲನ್ನು ಹೆಚ್ಚು ಹಾನಿಗೊಳಿಸುತ್ತದೆ.

ಹೆಚ್ಚು ಬಾರಿ ಕೂದಲು ಬಾಚಿಕೊಳ್ಳುವುದು ಬೇರುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಬಹಳಷ್ಟು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಒದ್ದೆಯಾದ ಕೂದಲನ್ನು ಬಾಚಿಕೊಳ್ಳಬೇಡಿ: ಕೂದಲು ಒದ್ದೆಯಾಗಿದ್ದಾಗ ಬಾಚುವುದು ಹಾನಿಕಾರಕ,ಇದರಿಂದ ಕೂದಲು ಕವಲು ಒಡೆಯುವುದು, ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ.

ಸ್ವಲ್ಪ ಸಮಯದವರೆಗೆ ಕೂದಲನ್ನು ನೈಸರ್ಗಿಕವಾಗಿ ಒಣಗಲು ಬಿಡಿ ಮತ್ತು ನಂತರ ಅಗಲವಾದ ಹಲ್ಲಿನ ಬಾಚಣಿಗೆ ಅಥವಾ ಬ್ರಷ್‌ನಿಂದ ಅದನ್ನು ಬಿಡಿಸಿ. ಅಲ್ಲಿಯವರೆಗೆ, ನಿಮ್ಮ ಬೆರಳುಗಳನ್ನು ಬಳಸಿ.

ಎಲ್ಲಾ ಸಮಯದಲ್ಲೂ ಸ್ಟ್ರೈಟನಿಂಗ್, ಹೇರ್ ಡ್ರೈಯರ್ ಬಳಸಬೇಡಿ: ನೀವು ಪ್ರತಿ ಬಾರಿ ತಲೆ ಸ್ನಾನ ಮಾಡಿದ ಬಳಿಕ ಹೇರ್ ಸ್ಟ್ರೈಟನಿಂಗ್ ಹಾಗೂ ಹೇರ್ ಡ್ರೈಯರ್ ಬಳಸುವುದನ್ನು ತಪ್ಪಿಸಬೇಕು. ಇಲ್ಲವಾದಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ.

ಉತ್ತಮ ಆಹಾರ ಸೇವನೆ ಮಾಡಿ: ನೀವು ಸೇವಿಸುವ ಆಹಾರ ಕೂದಲಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ನಿಮ್ಮ ಆಹಾರದಲ್ಲಿ ತರಕಾರಿಗಳು, ಮಜ್ಜಿಗೆ, ಹಣ್ಣುಗಳು, ಮೊಸರು, ಮೊಳಕೆಯೊಡೆದ ಕಾಳುಗಳನ್ನು ಸೇವಿಸಿ. ಇದು ನಿಮ್ಮ ಆರೋಗ್ಯವನ್ನು ಜತೆಗೆ ಕೂದಲಿನ ಆರೋಗ್ಯವನ್ನೂ ಸುಧಾರಿಸುತ್ತದೆ

ನೆತ್ತಿಗೆ ಮಸಾಜ್ ಮಾಡಿ: ನೆತ್ತಿಯಲ್ಲಿ ರಕ್ತ ಸಂಚಾರ ಉತ್ತಮವಾದಾಗ ಕೂದಲು ಉದುರುವ ಸಮಸ್ಯೆ ಕೂಡ ಕಡಿಮೆಯಾಗುತ್ತದೆ. ನೀವು ನಿತ್ಯ ಬಳಸುವ ಯಾವುದೇ ಹೇರ್ ಆಯಿಲ್ ಬಳಸಿ ನಿಧಾನವಾಗಿ ನೆತ್ತಿಯ ಮೇಲೆ ಮಸಾಜ್ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ ಇದರ ಜೊತೆಗೆ ತಲೆನೋವು, ಟೆನ್ಶನ್ ಇಂತಹ ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ.

ಬೇವಿನ ಬಳಕೆ: ಬೇವಿನ ಸೊಪ್ಪನ್ನು ನೀರಿನಲ್ಲಿ ಬೇವಿನ ಎಲೆ ಹಾಕಿ ಚೆನ್ನಾಗಿ ಕುದಿಸಿ ಅದರ ನೀರನ್ನು ಕೂದಲ ಬುಡಕ್ಕೆ ಹಚ್ಚಿ ಒಣಗಿದ ಮೇಲೆ ಸ್ನಾನ ಮಾಡುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ. ಕೂದಲ ಬುಡಕ್ಕೆ ಹಚ್ಚುವುದರಿಂದ ರಕ್ತಪರಿಚಲನೆ ಉತ್ತಮವಾಗುತ್ತದೆ. ಅಷ್ಟೇ ಅಲ್ಲದೆ ಬಾಲನೆರೆ, ಕೂದಲು ಉದುರಿ ತೆಳ್ಳಗಾಗುವುದನ್ನು ಇದು ತಪ್ಪಿಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ