ವಾಷಿಂಗ್ಟನ್: ಪ್ರತಿಷ್ಠಿತ ಜಾನ್ಸ್ ಹಾಪ್‌ಕಿನ್ಸ್ ಸೆಂಟರ್ ಫಾರ್ ಟ್ಯಾಲೆಂಟೆಡ್ ಯೂತ್‌ನ “ವಿಶ್ವದ ಬುದ್ಧಿವಂತ ವಿದ್ಯಾರ್ಥಿನಿ”(World’s Brightest) ಪಟ್ಟಿಯಲ್ಲಿ ಒಂಬತ್ತು ವರ್ಷದ ಭಾರತೀಯ-ಅಮೆರಿಕನ್(Indian-American) ಶಾಲಾ ವಿದ್ಯಾರ್ಥಿನಿ ಪ್ರೀಶಾ ಚಕ್ರವರ್ತಿ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. 90 ದೇಶಗಳಲ್ಲಿ ಸುಮಾರು 16 ಸಾವಿರ ವಿದ್ಯಾರ್ಥಿಗಳಲ್ಲಿ ಪ್ರೀಶಾ ‘ವಿಶ್ವದ ಬುದ್ಧಿವಂತ ವಿದ್ಯಾರ್ಥಿನಿ’ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ.
ಪ್ರೀಶಾ ಕ್ಯಾಲಿಫೋರ್ನಿಯಾದ ಫ್ರೀಮಾಂಟ್‌ನಲ್ಲಿರುವ ವಾರ್ಮ್ ಸ್ಪ್ರಿಂಗ್ ಎಲಿಮೆಂಟರಿ ಶಾಲೆಯ 3ನೇ ತರಗತಿಯ ವಿದ್ಯಾರ್ಥಿನಿ. 2023ರಲ್ಲಿ ನಡೆದ ಪ್ರತಿಷ್ಠಿತ ಜಾನ್ಸ್ ಹಾಪ್‌ಕಿನ್ಸ್ ಸೆಂಟರ್ ಫಾರ್ ಟ್ಯಾಲೆಂಟೆಡ್ ಯೂತ್ (JH-CTY) ಪರೀಕ್ಷೆಯನ್ನು ಬರೆದಿದ್ದರು. “ಇದು ಕೇವಲ ಒಂದು ಬರವಣಿಗೆಯ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ಗುರುತಿಸುವುದಿಲ್ಲ,ಬದಲಾಗಿ ಅವರ ಕುತೂಹಲ ಮತ್ತು ಕಲಿಕೆಯ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ” ಎಂದು CTY ನ ಕಾರ್ಯನಿರ್ವಾಹಕ ನಿರ್ದೇಶಕ ಆಮಿ ಶೆಲ್ಟನ್ ಹೇಳಿದ್ದಾರೆ. ಪ್ರೀಶಾ ಯಾವಾಗಲೂ ಕಲಿಕೆಯ ಬಗ್ಗೆ ಉತ್ಸುಕಳಾಗಿರುತ್ತಾಳೆ. ಜೊತೆಗೆ ಹೊಸತನ್ನು ಕಲಿಯುವ ಹಂಬಲ ಆಕೆಗೆ ಸದಾ ಇದೆ ಎಂದು ಆಕೆಯ ಪೋಷಕರು ಹೇಳುತ್ತಾರೆ.
ಇದನ್ನೂ ಓದಿ: ರಷ್ಯಾದ ಹಸುಗಳ ಕಣ್ಣಿಗೆ ವಿಆರ್ ಗ್ಲಾಸ್; ಹಾಲು ನೀಡುವ ಸಾಮರ್ಥ್ಯದಲ್ಲಿ ಶೇ. 40ರಷ್ಟು ಹೆಚ್ಚಳ
ಪ್ರೀಶಾ ವಿಶ್ವದಲ್ಲೇ ಅತ್ಯಂತ ಹಳೆಯ ಉನ್ನತ-ಐಕ್ಯೂ ಸೊಸೈಟಿಯಾದ ಮೆನ್ಸಾ ಫೌಂಡೇಶನ್‌ನ ಜೀವಿತಾವಧಿಯ ಸದಸ್ಯರಾಗಿದ್ದಾರೆ. ಆದರೆ ಇಲ್ಲಿ ಸದಸ್ಯತ್ವನ್ನು ಪಡೆಯುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಐಕ್ಯೂ ಅಥವಾ ಇತರ ಅನುಮೋದಿತ ಬುದ್ಧಿಮತ್ತೆ ಪರೀಕ್ಷೆಯಲ್ಲಿ ಶೇಕಡಾ 98 ಅಥವಾ ಹೆಚ್ಚಿನ ಅಂಕಗಳನ್ನು ಪಡೆದವರಿಗೆ ಮಾತ್ರ ಸದಸ್ಯತ್ವವನ್ನು ನೀಡಲಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 12:59 pm, Tue, 16 January 24