ತುಟಿಗಳ ಅಂದ ಹೆಚ್ಚಿಸುವ ಈ ಲಿಪ್ ಸ್ಟಿಕ್ನ್ನು ನೈಸರ್ಗಿಕವಾಗಿ ಮನೆಯಲ್ಲೇ ತಯಾರಿಸಿ
ಲಿಪ್ ಸ್ಟಿಕ್ ಎಲ್ಲಾ ಹೆಣ್ಣು ಮಕ್ಕಳಿಗೆ ಇಷ್ಟ. ಊಟ ತಿಂಡಿ ಮಾಡದೇ ಇದ್ದರೂ ಕೂಡ ಪರವಾಗಿಲ್ಲ. ಆದರೆ ಹೆಣ್ಣು ಮಕ್ಕಳು ತುಟಿಯ ಅಂದವನ್ನು ಹೆಚ್ಚಿಸುವ ಈ ಲಿಪ್ ಸ್ಟಿಕ್ ಹಾಕದೇ ಇರರು. ಹೀಗಾಗಿ ಹೆಣ್ಣು ಮಕ್ಕಳು ಮೇಕಪ್ ಕಿಟ್ ಬ್ಯಾಗ್ ಮಲ್ಲಿಕಾರ್ಜುನ ವಿವಿಧ ಬಣ್ಣದ ಲಿಪ್ ಸ್ಟಿಕ್ ಕಲೆಕ್ಷನ್ಗಳನ್ನು ಇರುತ್ತದೆ. ಕೆಲವೊಮ್ಮೆ ಈ ಲಿಪ್ ಸ್ಟಿಕ್ಗಳು ತುಟಿಗಳ ಅಂದವನ್ನು ಹೆಚ್ಚಿಸುವುದರ ಜೊತೆಗೆ ರಾಸಾಯನಿಕಗಳ ಕಾರಣ ತುಟಿಗಳ ಆರೋಗ್ಯವನ್ನು ಹಾಳು ಮಾಡಬಲ್ಲದು. ಹೀಗಾಗಿ ತುಟಿಯ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ತುಟಿಗಳ ಅಂದವನ್ನು ಹೆಚ್ಚಿಸಲು ಮನೆಯಲ್ಲಿಯೇ ಲಿಪ್ ಸ್ಟಿಕ್ ತಯಾರಿಸಿ ಬಳಸಬಹುದು.

ಲಿಪ್ ಸ್ಟಿಕ್ ಎಲ್ಲಾ ಹೆಣ್ಣು ಮಕ್ಕಳಿಗೆ ಅಚ್ಚುಮೆಚ್ಚಾಗಿದ್ದು , ಮಹಿಳೆಯರ ಸೌಂದರ್ಯ ವರ್ಧಕಗಳಲ್ಲಿ ಲಿಪ್ ಸ್ಟಿಕ್ಗೆ ಮೊದಲ ಆದ್ಯತೆ ಎನ್ನಬಹುದು. ಯುವತಿಯರು ಮೇಕಪ್ ಮಾಡದೇ ಇದ್ದರೂ ತುಟಿಗಳಿಗೆ ಗಾಢವಾದ ಲಿಪ್ ಸ್ಟಿಕ್ ಹಚ್ಚಿ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುತ್ತಾರೆ. ಈಗೀಗ ಲಿಪ್ ಸ್ಟಿಕ್ ಬಳಸುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಈ ಲಿಪ್ ಸ್ಟಿಕ್ಗಳನ್ನು ರಾಸಾಯನಿಕಗಳನ್ನು ಬಳಸಿ ಮಾಡುವುದರಿಂದ ತುಟಿಗಳ ಆರೋಗ್ಯವು ಕ್ಷೀಣಿಸುವುದರ ಅರಿವು ಅನೇಕರಿಗಿಲ್ಲ. ಆದರೆ ರಾಸಾಯನಿಕಗಳ ಬಳಕೆ ಮಾಡುತ್ತಾರೆ ಎನ್ನುವುದರ ಬಗ್ಗೆ ಕೆಲವರಿಗೆ ತಿಳಿದಿದ್ದರೂ ಬಳಕೆ ಮಾಡುವುದು ಮಾತ್ರ ಕಡಿಮೆಯಿಲ್ಲ. ಬಹಳ ಬೇಡಿಕೆಯಿರುವ ಈ ಲಿಪ್ ಸ್ಟಿಕ್ ಅಂನ್ಚ್ ಮನೆಯಲ್ಲಿ ನೈಸರ್ಗಿಕವಾಗಿ ತಯಾರಿಸಬಹುದಾಗಿದ್ದು, ಅದೇಗೆ ಎನ್ನುವುದನ್ನು ಇಲ್ಲಿ ತಿಳಿಯೋಣ ಬನ್ನಿ.
ನೈಸರ್ಗಿಕ ಲಿಪ್ ಸ್ಟಿಕ್ ತಯಾರಿಸಲು ಬೇಕಾಗಿರುವ ಸಾಮಗ್ರಿಗಳು
* ಶಿಯಾ ಬೆಣ್ಣೆ- 1 ಚಮಚ, ಜೇನುಮೇಣ- 1 ಚಮಚ, ಬಾದಾಮಿ ಅಥವಾ ಆಲಿವ್ ತೈಲ -1 ಚಮಚ, ದೊಡ್ಡ ಪಾತ್ರೆ ಅಥವಾ ತವಾ, ಚಾಪ್ ಸ್ಟಿಕ್ ಅಥವಾ ಲಿಪ್ ಸ್ಟಿಕ್ ಟ್ಯೂಬ್ ಅಥವಾ ಕಾಸ್ಮೆಟಿಕ್ ಪಾಟ್ ಹಾಗೂ ಬೀಟ್ ರೂಟ್ ಹುಡಿ.
ಇದನ್ನೂ ಓದಿ: ಸೌಂದರ್ಯ ವರ್ಧಕ ರೋಸ್ ವಾಟರ್ ಎಷ್ಟು ಪ್ರಯೋಜನಕಾರಿ ಗೊತ್ತಾ?
ನೈಸರ್ಗಿಕ ಲಿಪ್ ಸ್ಟಿಕ್ ತಯಾರಿಸುವ ವಿಧಾನ
* ಒಂದು ದೊಡ್ಡ ತವಾ ತೆಗೆದುಕೊಂಡು ಅದಕ್ಕೆ 5 ಸೆ.ಮೀ.ನಷ್ಟು ನೀರು ಹಾಕಿ ಬಿಸಿ ಮಾಡಿ.
* ಬಣ್ಣ ಹೊರತುಪಡಿಸಿ ಎಲ್ಲಾ ಸಾಮಗ್ರಿಗಳನ್ನು ಸಣ್ಣ ಪಾತ್ರೆಗೆ ಹಾಕಿಕೊಂಡು, ಅದನ್ನು ನೀರು ಇರುವ ತವಾದಲ್ಲಿ ನಿಧಾನವಾಗಿ ಇಟ್ಟುಕೊಳ್ಳಿ.
* ಪಾತ್ರೆಯಲ್ಲಿರುವ ಸಾಮಗ್ರಿಗಳನ್ನು ಸರಿಯಾಗಿ ಕಲಸಿಕೊಂಡು, ಈ ಮಿಶ್ರಣಕ್ಕೆ ಬಣ್ಣ ಎಷ್ಟು ಕಡು ಬೇಕು ಎಂದು ನೋಡಿ, ಬಣ್ಣದ ಮಿಶ್ರಣ ಹಾಕಿಕೊಳ್ಳಿ. ಮತ್ತೆ ಬಣ್ಣ ಬೇಕಾದರೆ ಹಾಕಿ ಕಲಸಿಕೊಳ್ಳಿ. * ಈ ಮಿಶ್ರಣವು ತಣ್ಣಗಾದ ಬಳಿಕ ಖಾಲಿ ಲಿಪ್ ಸ್ಟಿಕ್ ಟ್ಯೂಬ್ ಗೆ ಹಾಕಿ, ರಾತ್ರಿಯಿಡಿ ಹಾಗೆ ಬಿಡಬೇಕು.
* ಮರುದಿನ ನೋಡಿದರೆ ಈ ಲಿಪ್ ಸ್ಟಿಕ್ ಟ್ಯೂಬ್ ಗೆ ಹಾಕಿದ ಮಿಶ್ರಣವು ಗಟ್ಟಿಯಾಗಿರುತ್ತದೆ. ಈ ನೈಸರ್ಗಿಕವಾಗಿ ತಯಾರಿಸಿದ ಲಿಪ್ ಸ್ಟಿಕ್ ಅನ್ನು ಯಾವುದೇ ಆತಂಕವಿಲ್ಲದೇ ತುಟಿಗಳ ಅಂದವನ್ನು ಹೆಚ್ಚಿಸಲು ಬಳಸಬಹುದು.
ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:37 am, Tue, 16 January 24