ತನ್ನ ಗಲ್​ಫ್ರೆಂಡ್​ಗೆ ಖರ್ಚಿಲ್ಲದೇ ನೆಕ್ಲೇಸ್​​​​​ ಗಿಫ್ಟ್ ಕೊಟ್ಟ ಹುಡುಗ, ಇಲ್ಲಿದೆ ನೋಡಿ ಫೋಟೋ

|

Updated on: Mar 02, 2023 | 11:15 AM

ನಿಮ್ಮ ಸಂಗಾತಿಯನ್ನು ಖುಷಿಯಿಂದಿರಿಸಲು ಬರೀ ದುಡ್ಡು, ದುಬಾರಿ ಗಿಫ್ಟ್​​ಗಳು ಮಾತ್ರ ಮುಖ್ಯ ಆಗಲ್ಲ. ಬದಲಾಗಿ ನಿಮ್ಮ ಕ್ರಿಯೇಟಿವ್​​ ಯೋಚನೆಗಳ ಮೂಲಕ ನಿಮ್ಮವರನ್ನು ಖುಷಿಯಾಗಿರಿಸಬಹುದು.

ತನ್ನ ಗಲ್​ಫ್ರೆಂಡ್​ಗೆ ಖರ್ಚಿಲ್ಲದೇ ನೆಕ್ಲೇಸ್​​​​​ ಗಿಫ್ಟ್ ಕೊಟ್ಟ ಹುಡುಗ, ಇಲ್ಲಿದೆ ನೋಡಿ ಫೋಟೋ
ಬೆಳಕಿನ ಪ್ರತಿಬಿಂಬದಲ್ಲಿ ಕಾಣುವ ನೆಕ್ಲೇಸ್
Image Credit source: thestar.com
Follow us on

ಸಂಗಾತಿಗೆ ಡೈಮಂಡ್​ ನೆಕ್ಲೇಸ್ ಗಿಫ್ಟ್​ ಕೊಡಬೇಕು ಎಂದು ಸಾಕಷ್ಟು ಮಂದಿಗೆ ಕನಸಿರುತ್ತದೆ. ಅದರೆ ಆ ಕನಸು ಸಕಾರಗೊಳ್ಳಲು ಅಷ್ಟೊಂದು ದುಡ್ಡು ಇಲ್ಲದಿರುವುದರಿಂದ, ಸಾಕಷ್ಟು ಕನಸುಗಳು ಕನಸಾಗಿಯೇ ಉಳಿಯುತ್ತದೆ. ಆದರೆ ಇಲ್ಲೊಬ್ಬ ಒಂದು ರೂಪಾಯಿಯ ಖರ್ಚಿಲ್ಲದೇ ತನ್ನ ಸಂಗಾತಿಗೆ ಆಕರ್ಷಕ ಹೊಳೆಯುವ ನೆಕ್ಲೇಸ್ ಒಂದನ್ನು ಗಿಫ್ಟ್​​ ಮಾಡಿದ್ದಾನೆ. ಅರೇ…. ಇದು ಹೇಗಪ್ಪ ಅಂತಾ ಅನ್ಕೊಂತ್ತಿದ್ದೀರಾ ಈ ಸ್ಟೋರಿ ಓದಿ.

ನಿಮ್ಮ ಸಂಗಾತಿಯನ್ನು ಖುಷಿಯಿಂದಿರಿಸಲು ಬರೀ ದುಡ್ಡು, ದುಬಾರಿ ಗಿಫ್ಟ್​​ಗಳು ಮಾತ್ರ ಮುಖ್ಯ ಆಗಲ್ಲ. ಬದಲಾಗಿ ನಿಮ್ಮ ಕ್ರಿಯೇಟಿವ್​​ ಯೋಚನೆಗಳ ಮೂಲಕ ನಿಮ್ಮವರನ್ನು ಖುಷಿಯಾಗಿರಿಸಬಹುದು. ಪೂರ್ವ ಚೀನಾದ ಝೆಜಿಯಾಂಗ್ ಪ್ರಾಂತ್ಯದ ಜಾಂಗ್ ಎಂಬಾತ ತನ್ನ ಗೆಳತಿ ಬೆಳಕಿನ ಮೂಲಕ ಪ್ರತಿಬಿಂಬದಲ್ಲಿ ಕಾಣುವ ಸುಂದರ ವಿನ್ಯಾಸದ ನೆಕ್ಲೇಸ್ ಗಿಫ್ಟ್​​ ಮಾಡಿದ್ದು, ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಟ್ಟಿಗೆ ವೈರಲ್​ ಆಗಿದೆ. ತನ್ನ ಸಂಗಾತಿಗೆ ಒಂದು ಪೆಟ್ಟಿಗೆಯಲ್ಲಿ ಬಿಳಿ ಕಾಗದದ ತುಂಡನ್ನು ಇಟ್ಟು ಉಡುಗೊರೆಯಾಗಿ ನೀಡಿದ್ದಾನೆ. ಇದಾದ ಬಳಿಕ ಆಕೆಯನ್ನು ಹೊರಗಡೆ ಸೂರ್ಯನ ಬೆಳಕಿಗೆ ಕರೆದುಕೊಂಡು ಹೋಗಿ ತಾನು ಕ್ರಿಯಾತ್ಮಕವಾಗಿ ವಿನ್ಯಾಸಗಗೊಳಿಸಿದ ಬೆಳಕಿನ ಹಾರವನ್ನು ಬಿಳಿ ಕಾಗದದ ಪ್ರತಿಬಿಂಬದ ಮೂಲಕ ಆಕೆಗೆ ತೊಡಿಸಿದ್ದಾನೆ.

 

ಇದನ್ನೂ ಓದಿ: ತನಗೆ ಕಿಡ್ನಿ ದಾನ ಮಾಡುತ್ತಿರುವವರನ್ನು ಕಂಡು ಕಣ್ಣೀರಿಟ್ಟ ವ್ಯಕ್ತಿ, ಅಷ್ಟಕ್ಕೂ ಕಿಡ್ನಿ ದಾನ ಮಾಡಿದ್ದು ಯಾರು ಗೊತ್ತಾ?

ಈ ಸುಂದರ ಬೆಳಕಿನ ಪ್ರತಿಬಿಂಬಕದ ಹಾರವನ್ನು ಬಿಳಿ ಹಾಳೆಯ ಮೇಲೆ ವಿನ್ಯಾಸಗೊಳಿಸಲು ಎರಡು ದಿನಗಳನ್ನು ತೆಗೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಡೌಯಿನ್‌ನಲ್ಲಿ ಜಾಂಗ್ ಅಪ್‌ಲೋಡ್ ಮಾಡಿದ ನೆಕ್ಲೇಸ್‌ನ ವೀಡಿಯೊವನ್ನು 62 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಣೆಗೊಂಡಿದೆ. ಜೊತೆಗೆ 40,000 ಕ್ಕಿಂತಲೂ ಹೆಚ್ಚಿನ ಕಾಮೆಂಟ್​​ಗಳನ್ನು ಕಾಣಬಹುದು.ಈತ ಕಳೆದ ವರ್ಷ ತನ್ನ ಸ್ನೇಹಿತೆಗಾಗಿ ಕಾಗದದ ಕೊರೆಯಚ್ಚು ಬಳಸಿ ಹಗುರವಾದ “ಡೈಮಂಡ್ ರಿಂಗ್” ನೀಡಿದ್ದರು ಎಂದು ತಿಳಿದುಬಂದಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 11:09 am, Thu, 2 March 23