Relationship: ಸಂಗಾತಿಯು ನಿಮ್ಮ ಜೀವನದ ಮೇಲೆ ಪ್ರಭಾವ ಬೀರುವ ಕೆಲವೊಂದು ಅಂಶಗಳು ಯಾವುವು?

ಹಣದೊಂದಿಗಿನ ನಮ್ಮ ವ್ಯವಹಾರದಿಂದ ಹಿಡಿದು ನಾವು ನಾವಗಿರುವ ಸಾಮರ್ಥ್ಯದವರೆಗೆ , ನಮ್ಮ ಸಂಗಾತಿಯು ನಮ್ಮ ಜೀವನಶೈಲಿಯ ಮೇಲೆ ಪ್ರಭಾವ ಬೀರುವ ಕೆಲವು ಅಂಶಗಳು ಇಲ್ಲಿವೆ.

Relationship:  ಸಂಗಾತಿಯು ನಿಮ್ಮ ಜೀವನದ ಮೇಲೆ ಪ್ರಭಾವ ಬೀರುವ ಕೆಲವೊಂದು ಅಂಶಗಳು ಯಾವುವು?
ಸಾಂದರ್ಬೀಕ ಚಿತ್ರ
Follow us
|

Updated on:Mar 02, 2023 | 6:44 PM

ಹಣದೊಂದಿಗಿನ ನಮ್ಮ ವ್ಯವಹಾರದಿಂದ ಹಿಡಿದು ನಾವು ನಾವಗಿರುವ ಸಾಮರ್ಥ್ಯದವರೆಗೆ , ನಮ್ಮ ಸಂಗಾತಿಯು ನಮ್ಮ ಜೀವನಶೈಲಿಯ ಮೇಲೆ ಪ್ರಭಾವ ಬೀರುವ ಕೆಲವು ಅಂಶಗಳು ಇಲ್ಲಿವೆ. ಜೀವನವನ್ನು ಕಟ್ಟಿಕೊಳ್ಳಲು ಬಾಳಸಂಗಾತಿಯನ್ನು ಆಯ್ಕೆ ಮಾಡುವುದು ನಾವು ಜೀವನದಲ್ಲಿ ಮಾಡುವ ಅತ್ಯಂತ ಕಷ್ಟಕರ ಮತ್ತು ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ನಾವು ಹುಟ್ಟುವ ಕುಟುಂಬ ಮತ್ತು ಸಂಬಂಧಿಕರು ಅದು ನಮ್ಮ ಆಯ್ಕೆಯಾಗಿರುವುದಿಲ್ಲ. ಆದರೆ ನಮ್ಮ ನಂತರದ ಜೀವನದಲ್ಲಿ, ನಾವು ಜೊತೆಯಲ್ಲಿ ಇರಲು ಬಯಸುವ ಸ್ನೇಹಿತರನ್ನು ಮತ್ತು ನಾವು ಜೊತೆಯಾಗಿ ಜೀವನ ಮಾಡಲು ಬಯಸುವ ಸಂಗಾತಿಯನ್ನು ಆಯ್ಕೆ ಮಾಡುವುದು ನಮ್ಮ ಕೈಯಲ್ಲಿರುತ್ತದೆ.

ನಾವು ಹೆಚ್ಚು ಪ್ರೀತಿಸುವ ವ್ಯಕ್ತಿಯೊಂದಿಗೆ ನಮ್ಮ ಜೀವನವನ್ನು ಕಳೆಯಲು ಬಯಸುತ್ತೇವೆ. ಇದನ್ನು ಉದ್ದೇಶಿಸಿ, ನಮ್ಮ ಸಂಗಾತಿಯು ನಮ್ಮ ಆಯ್ಕೆಗಳು ಮತ್ತು ಜೀವನಶೈಲಿಯನ್ನು ಹೇಗೆ ಪ್ರಭಾವಿಸಬಹುದು ಎಂಬುದರ ಕುರಿತ ಮಾಹಿತಿಯನ್ನು ಮನಶಾಸ್ತಜ್ಞೆ ನಿಕೋಲಾ ಲೆಪೆರಾ ಹಂಚಿಕೊಂಡಿದ್ದಾರೆ.

ಸಂಗಾತಿಯು ನಿಮ್ಮ ಜೀವನದ ಮೇಲೆ ಪ್ರಭಾವ ಬೀರುವ ವಿಧಾನಗಳು:

ದೈನಂದಿನ ಅಭ್ಯಾಸಗಳು: ನಮ್ಮ ದೈನಂದಿನ ಅಭ್ಯಾಸಗಳನ್ನು ನಾವು ಆಯ್ಕೆ ಮಾಡುವ ರೀತಿಯಲ್ಲಿ ಅದು ನಮ್ಮ ಸಂಗಾತಿಯ ಮೇಲೆ ಪ್ರಭಾವ ಬೀರುತ್ತದೆ. ಸಂಗಾತಿಗಳು ಪರಸ್ಪರ ಒಬ್ಬರಿಗೊಬ್ಬರು ಸಮಯವನ್ನು ಮೀಸಲಿಡಬೇಕಾಗುತ್ತದೆ.

ಮನಸ್ಥಿತಿ: ದೃಷ್ಟಿಕೋನಗಳು, ಅಭಿಪ್ರಾಯಗಳು, ಒಪ್ಪಂದಗಳು ನಾವು ಒಟ್ಟಿಗೆ ಸಮಯ ಕಳೆಯುವ ವಿಧಾನದಿಂದ ಪ್ರಭಾವಿತವಾಗುತ್ತದೆ. ಸಂಗಾತಿಗಳಿಬ್ಬರು ಒಟ್ಟಿಗೆ ಈ ವಿಷಯಗಳ ಬಗ್ಗೆ ಮಾತನಾಡಿ ಪರಸ್ಪರ ಆಲೋಚನೆಗಳ ಮಾದರಿಗಳ ಬಗ್ಗೆ ತಿಳಿದುಕೊಳ್ಳುತ್ತೇವೆ.

ಹಣ: ನಾವು ಪ್ರೀತಿಸುವ ವ್ಯಕ್ತಿಯೊಂದಿಗೆ ಒಟ್ಟಿಗೆ ಜೀವನ ನಡೆಸುವುದು ನಮ್ಮ ಹಣಕಾಸಿನ ವಿಷಯಗಳೊಂದಿಗೆ ನಾವು ವ್ಯವಹರಿಸುವ ರೀತಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮತ್ತು ಆಯ್ಕೆಗಳನ್ನು ತರುತ್ತದೆ. ಹಣದೊಂದಿಗಿನ ನಮ್ಮ ಸಂಬಂಧವೂ ಸಹ ಅವರಿಂದ ಪ್ರಭಾವಿತವಾಗುತ್ತದೆ.

ಇದನ್ನೂ ಓದಿ: Relationship Tips: ನಿಮ್ಮ ರಿಲೇಷನ್​​​ಶಿಪ್​​ನಲ್ಲಿ ಇಂತಹ ಅಭ್ಯಾಸಗಳು ಕಂಡುಬಂದರೆ ತಕ್ಷಣ ಸಂಬಂಧಕ್ಕೆ ಬ್ರೇಕ್ ಹಾಕಿ

ಕುಟುಂಬ: ನಾವು ಪ್ರೀತಿಸುತ್ತಿರುವ ವ್ಯಕ್ತಿಯೊಂದಿಗೆ ನಾವು ತೆಗೆದುಕೊಳ್ಳುವ ನಿರ್ಧಾರಗಳಿಂದ ಕುಟುಂಬ ಪ್ರಭಾವಿತವಾಗಿರುತ್ತದೆ ಮತ್ತು ನಿರ್ವಹಿಸಲ್ಪಡುತ್ತದೆ.

ಆರೋಗ್ಯ: ನಮ್ಮ ಸಂಗಾತಿ ನಮ್ಮ ಜೀವನ ಶೈಲಿಯ ಮೇಲೆ ಹೆಚ್ಚು ಪರಿಣಾಮ ಬೀರಬಹುದು. ನಾವು ತಿನ್ನುವ ಆಹಾರ, ನಾವು ಮಾಡುವ ವ್ಯಾಯಾಮಗಳು, ನಿದ್ರೆ ಮತ್ತು ವಿಶ್ರಾಂತಿಗಾಗಿ ನಾವು ಹೂಡಿಕೆ ಮಾಡುವ ಸಮಯ ಎಲ್ಲವೂ ಸಂಗಾತಿಯಿಂದ ಪ್ರಭಾವಿತವಾಗಿರುತ್ತದೆ.

ನಾವು ನಾವಗಿರುವ ಸಾಮರ್ಥ್ಯ: ನಾನು ನಮ್ಮನ್ನು ವ್ಯಕ್ತಪಡಿಸುವ ಮತ್ತು ಸ್ವೀಕರಿಸುವ ವಿಧಾನವು ಆರೋಗ್ಯಕರ ಸಂಬಂಧದಲ್ಲಿ ಇರುತ್ತದೆ. ನಾವು ಯಾರೆಂದು ಮತ್ತು ನಮ್ಮ ಸ್ವಂತ ಮನಸ್ಸಿನ ಆಳವನ್ನು ಅನ್ವೇಷಿಸಲು ನಾವು ಹೆಚ್ಚು ಮುಕ್ತರಾಗಿರುತ್ತೇವೆ.

Published On - 6:00 pm, Thu, 2 March 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ