Amchoor Ki Chutney: ಒಣ ಮಾವಿನ ಚಟ್ನಿ ಮಾಡುವುದು ಹೇಗೆ? ಇಲ್ಲಿದೆ ಪಾಕ ವಿಧಾನ
ಆಮ್ಚೂರ್(ಒಣ ಮಾವಿನ ಪುಡಿ) ಚಟ್ನಿಯ ಪಾಕವಿಧಾನದ ಬಗ್ಗೆ ತಿಳಿಸಿಕೊಡುತ್ತೇವೆ. ಸರಳವಾಗಿ ತಯಾರಿಸಬಹುದಾದ ಈ ಚಟ್ನಿಗೆ ಕೇವಲ ಬೆರಳೆಣಿಕೆಯಷ್ಟು ಪದಾರ್ಥಗಳು ಸಾಕಾಗುತ್ತವೆ.
ಚಟ್ನಿ ಮಾಡಲು ನಿಮ್ಮ ಬಳಿ ಮಾವಿನಕಾಯಿ ಅಥವಾ ಯಾವುದೇ ತರಕಾರಿಗಳು ಇಲ್ಲದಿದ್ದಾಗ, ತಕ್ಷಣಕ್ಕೆ ಮಾಡಿಕೊಳ್ಳಬಹುದಾದ ಆಮ್ಚೂರ್ ಚಟ್ನಿ ಪಾಕವಿಧಾನದ ಬಗ್ಗೆ ತಿಳಿಸಿಕೊಡುತ್ತೇವೆ. ಭಾರತೀಯ ಊಟಗಳಲ್ಲಿ ಹೆಚ್ಚಾಗಿ ಯಾವುದಾದರು ಒಂದು ಬಗೆಯ ಚಟ್ನಿ ಇದ್ದೇ ಇರುತ್ತದೆ. ಚಟ್ನಿಯ ಹುಳಿ, ಖಾರ, ಸ್ವಲ್ಪ ಸಿಹಿಯಾದ ರುಚಿಕರವಾದ ಸಂಯೋಜನೆಯು ಹೆಚ್ಚಿನ ಜನರಿಗೆ ಇಷ್ಟವಾಗುತ್ತದೆ. ಚಟ್ನಿಗಳಲ್ಲಿ ಅನೇಕ ಬಗೆಗಳನ್ನು ಕಾಣಬಹುದು. ಹಣ್ಣುಗಳಿಂದ ಹಿಡಿದು ತರಕಾರಿಯವವರೆಗೆ ವಿವಿಧ ರೀತಿಯ ಚಟ್ನಿಗಳನ್ನು ತಯಾರಿಸಲಾಗುತ್ತದೆ. ಇದೇ ರೀತಿಯ ಆಮ್ಚೂರ್(ಒಣ ಮಾವಿನ ಪುಡಿ) ಚಟ್ನಿಯ ಪಾಕವಿಧಾನದ ಬಗ್ಗೆ ತಿಳಿಸಿಕೊಡುತ್ತೇವೆ. ಸರಳವಾಗಿ ತಯಾರಿಸಬಹುದಾದ ಈ ಚಟ್ನಿಗೆ ಕೇವಲ ಬೆರಳೆಣಿಕೆಯಷ್ಟು ಪದಾರ್ಥಗಳು ಸಾಕಾಗುತ್ತವೆ.
ಆಮ್ಚೂರ್ ಚಟ್ನಿಯನ್ನು ತಯಾರಿಸುವುದು ಹೇಗೆ?
ಒಂದು ಸಣ್ಣ ಬಟ್ಟಲಿನಲ್ಲಿ ಆಮ್ಚೂರ್ ಪುಡಿ, ಬೆಲ್ಲ ಅಥವಾ ಬ್ರೌನ್ ಶುಗರ್, ರುಚಿಗೆ ತಕ್ಕಷ್ಟು ಉಪ್ಪು, ಅಚ್ಚಖಾರದ ಪುಡಿ ಹಾಗೂ ಹುರಿದಿಟ್ಟ ಜೀರಿಗೆ ಪುಡಿ ಇವುಗಳನ್ನೆಲ್ಲ ಒಟ್ಟಿಗೆ ಮಿಶ್ರಣ ಮಾಡಿ. ನಂತರ ನೀರನ್ನು ಸೇರಿಸಿ ಮತ್ತೊಮ್ಮೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಸಣ್ಣ ಲೋಹದ ಪಾತ್ರೆಗೆ ಸುರಿಯಿರಿ ಮತ್ತು ಮಧ್ಯಮ ಶಾಖದಲ್ಲಿ ಕುದಿಯಲು ಬಿಡಿ. ನಂತರ ಉರಿ ಕಡಿಮೆ ಮಾಡಿ 5 ರಿಂದ 7 ನಿಮಿಷಗಳ ಕಾಲ ಚಟ್ನಿ ದಪ್ಪಗಾಗುವವರೆಗೆ ಕುದಿಸಿ. ಚಟ್ನಿ ದಪ್ಪಗಿನ ಪೇಸ್ಟ್ ರೀತಿಯಲ್ಲಿ ಆದ ಬಳಿಕ ಸ್ವವ್ ಆಫ್ ಮಾಡಿ ಕೋಣೆಯ ಉಷ್ಣಾಂಶದಲ್ಲಿ ಚಟ್ನಿಯನ್ನು ತಣ್ಣಗಾಗಲು ಬಿಡಿ. ಈ ಚಟ್ನಿಯನ್ನು ಕರಿದ ಖಾದ್ಯಗಳ ಜೊತೆಗೆ ಮತ್ತು ಊಟದ ಜೊತೆಗೂ ಸವಿಯಬಹುದು.
ಇದನ್ನೂ ಓದಿ: Coconut Chutney: ಬಾಯಲ್ಲಿ ನೀರೂರಿಸುವ ಬಗೆ ಬಗೆಯ ತೆಂಗಿನಕಾಯಿ ಚಟ್ನಿ ರೆಸಿಪಿ ಇಲ್ಲಿದೆ
ಈ ಚಟ್ನಿಯನ್ನು ದೀರ್ಘ ಕಾಲದವರೆಗೆ ಸಂಗ್ರಹಿಸಿಡಬಹುದು. ಚಟ್ನಿ ಹಾಳಗದಂತೆ ನೋಡಿಕೊಳ್ಳಲು ಅವುಗಳನ್ನು ಸ್ವಚ್ಛವಾದ ಜಾಡಿಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳಿ. ಹಾಗೂ ಚಟ್ನಿಯನ್ನು ಸಂಪೂರ್ಣವಾಗಿ ತಣ್ಣಗಾಗಿಸಿದ ಬಳಿಕವಷ್ಟೇ ಅವುಗಳನ್ನು ಜಾಡಿಗಳಲ್ಲಿ ಸಂಗ್ರಹಿಸಿ. ಹೀಗೆ ಸಂಗ್ರಹಿಸಿಟ್ಟ ಚಟ್ನಿಯನ್ನು ತಂಪಾಗಿರುವ ಕೋಣೆಯಲ್ಲಿ ಒಂದು ವಾರದವರೆಗೆ ಹಾಗೂ ರೆಫ್ರಿಜರೇಟರ್‌ನಲ್ಲಿ ಒಂದು ತಿಂಗಳುಗಳ ಕಾಲ ಇಟ್ಟು ಉಪಯೋಗಿಸಬಹುದು.