AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೋಸೆ ತಯಾರಿಸುವಾಗ ನೀವು ಮಾಡುವ ಸಾಮಾನ್ಯ ತಪ್ಪುಗಳು ಇಲ್ಲಿವೆ

ಸೆಲೆಬ್ರಿಟಿ ಬಾಣಸಿಗ ಸಂಜೀವ್ ಕಪೂರ್ ಅವರು ದೋಸೆ ತಯಾರಿಸುವಾಗ ಜನರು ಮಾಡುವ ಸಾಮಾನ್ಯ ತಪ್ಪುಗಳನ್ನು ತಮ್ಮ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ದೋಸೆ ತಯಾರಿಸುವಾಗ ನೀವು ಮಾಡುವ ಸಾಮಾನ್ಯ ತಪ್ಪುಗಳು ಇಲ್ಲಿವೆ
Image Credit source: Instagram
Follow us
ಅಕ್ಷತಾ ವರ್ಕಾಡಿ
|

Updated on:Mar 02, 2023 | 5:36 PM

ದೋಸೆ ಪ್ರತಿಯೊಂದು ಮನೆಯಲ್ಲೂ ವಾರದಲ್ಲಿ ಎರಡು ಸಲವಾದರೂ ಇದ್ದೇ ಇರುತ್ತದೆ. ಆದರೆ ನೀವು ದೋಸೆ ಮಾಡುವ ಸರಿಯಾದ ಕ್ರಮದ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ದೋಸೆ ಸರಿಯಾಗಿ ಕಾವಲಿಯಿಂದ ಏಳುವುದಿಲ್ಲ ಎಂಬುದು ಸಾಕಷ್ಟು ಗೃಹಿಣಿಯರ ಸಮಸ್ಯೆ. ಸೆಲೆಬ್ರಿಟಿ ಬಾಣಸಿಗರಾದ ಸಂಜೀವ್ ಕಪೂರ್ ದೋಸೆ ತಯಾರಿಸುವಾಗ ಜನರು ಮಾಡುವ ಸಾಮಾನ್ಯ ತಪ್ಪುಗಳು ಮತ್ತು ಸರಿಯಾದ ಕ್ರಮದಲ್ಲಿ ದೋಸೆ ಮಾಡುವುದು ಹೇಗೆ ಎಂಬುದನ್ನು ಹಂಚಿಕೊಂಡಿದ್ದಾರೆ.

ಸಂಜೀವ್ ಕಪೂರ್ ತಮ್ಮ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಇಲ್ಲಿದೆ:

ತವಾಗೆ ಎಣ್ಣೆ ಹಚ್ಚುವ ಸರಿಯಾದ ಕ್ರಮ:

ಬಾಣಸಿಗ ಸಂಜೀವ್ ಕಪೂರ್ ಅವರು ದೋಸೆ ತಯಾರಿಸುವಾಗ ತವಾಗೆ ಎಣ್ಣೆ ಹಚ್ಚುವ ಸರಿಯಾದ ಕ್ರಮದ ಬಗ್ಗೆ ತಿಳಿಸಿದ್ದಾರೆ. ನೀವು ಸಾಮಾನ್ಯವಾಗಿ ದೋಸೆ ಮಾಡುವ ಮೊದಲು ತವಾಗೆ ಎಣ್ಣೆ ಹಾಕಿ ನಂತರ ಅದನ್ನು ಗ್ರೀಸ್​​ ಮಾಡುತ್ತೀರಿ. ಆದರೆ ಇನ್ನು ಮುಂದೆ ಆ ರೀತಿ ಮಾಡದಿರಿ ಎಂದು ಸಲಹೆ ನೀಡುತ್ತಾರೆ. ಬದಲಾಗಿ ಒಂದು ಇರುಳ್ಳಿಯನ್ನು ಮಧ್ಯದಿಂದ ಎರಡು ಭಾಗಗಳಾಗಿ ಕತ್ತರಿಸಿ. ನಂತರ ಒಂದು ಭಾಗವನ್ನು ತೆಗೆದುಕೊಂಡು ತವಾಗೆ ಎಣ್ಣೆ ಹಚ್ಚಿದ ನಂತರ ಇರುಳ್ಳಿಯ ಅರ್ಧ ಭಾಗದಿಂದ ಎಣ್ಣೆಯನ್ನು ಚೆನ್ನಾಗಿ ಹರಡಿ ಎಂದು ಹೇಳಿದ್ದಾರೆ.

ನೀವು ನಾನ್ ಸ್ಟಿಕ್ ತವಾ ಬಳಸುತ್ತಿದ್ದರೆ ಎಣ್ಣೆ ಹಚ್ಚುವ ಅಗತ್ಯವಿಲ್ಲ ಎಂದು ಅವರು ಹೇಳುತ್ತಾರೆ. ಎಣ್ಣೆ ಹಚ್ಚದೇ ನೀವು ಸುಲಭವಾಗಿ ದೋಸೆ ತಯಾರಿಸಬಹುದು ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: ಒಣ ಮಾವಿನ ಚಟ್ನಿ ಮಾಡುವುದು ಹೇಗೆ? ಇಲ್ಲಿದೆ ಪಾಕ ವಿಧಾನ

ಮಧ್ಯಮ ಉರಿಯಲ್ಲಿರಲಿ:

ನೀವು ಹಿಟ್ಟನ್ನು ಸುರಿಯುವ ಮೊದಲು ತವಾ ಬಿಸಿಯಾಗಿರಬೇಕು ನಿಜ. ಆದರೆ ತವಾವನ್ನು ತುಂಬಾ ಬಿಸಿ ಮಾಡಬೇಡಿ. ಜೊತೆಗೆ ಹಿಟ್ಟನ್ನು ಸುರಿದ ನಂತರ ದೋಸೆ ಮಧ್ಯಮ ಉರಿಯಲ್ಲಿರಲಿ ಎಂದು ಅವರು ಹೇಳುತ್ತಾರೆ.

ಹಿಟ್ಟಿನ ಸ್ಥಿರತೆ:

ನೀವು ಪ್ರತಿ ಬಾರಿ ದೋಸೆ ತಯಾರಿಸುವಾಗ ಹಿಟ್ಟಿನ ಸ್ಥಿರತೆ ತುಂಬಾ ಅಗತ್ಯ. ಇದು ತುಂಬಾ ದಪ್ಪವಾಗಿರಬಾರದು ಅಥವಾ ತುಂಬಾ ನೀರಾಗಿ ಕೂಡ ಇರಬಾರದು. ಸರಿಯಾಗಿ ಇದ್ದರೆ ಮಾತ್ರ ನೀವು ಮಾಡುವ ದೋಸೆ ಪರಿಪೂರ್ಣವಾಗಲು ಸಾಧ್ಯ ಎಂದು ಕಪೂರ್​ ಹೇಳುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 5:35 pm, Thu, 2 March 23