Dosa Without Rice Flour: ಅಕ್ಕಿ ಹಿಟ್ಟು ಬಳಸದೇ ಸುಲಭವಾಗಿ ದೋಸೆಯನ್ನು ತಯಾರಿಸಿ
ದೋಸೆಗಳನ್ನು ಕೇವಲ ಬೆಳಗಿನ ಉಪಹಾರ ಎಂದು ಮಾತ್ರ ಪರಿಗಣಿಸಲಾಗುವುದಿಲ್ಲ. ಬದಲಾಗಿ ಯಾವುದೇ ಸಮಯದಲ್ಲಿ ಕೂಡ ನಿಮಗೆ ಸಂಪೂರ್ಣವಾಗಿ ಹೊಟ್ಟೆ ತುಂಬಿಸುತ್ತದೆ.

ದಕ್ಷಿಣ ಭಾರತದ ಪ್ರಮುಖ ತಿಂಡಿಗಳಲ್ಲಿ ದೋಸೆಯು ಕೂಡ ಒಂದು. ಗರಿಗರಿಯಾದ ಮತ್ತು ಪೇಪರ್ ದೋಸೆ, ತೆಳುವಾದ ದೇಸಿ-ಶೈಲಿಯ ನೀರು ದೋಸೆಗಳನ್ನು ಬಿಸಿ ಸಾಂಬಾರ್ ಮತ್ತು ತೆಂಗಿನಕಾಯಿ ಚಟ್ನಿಯೊಂದಿಗೆ ಸವಿದರೆ ಅದರ ರುಚಿಯೇ ಬೇರೆ. ದೋಸೆಗಳನ್ನು ಕೇವಲ ಬೆಳಗಿನ ಉಪಹಾರ ಎಂದು ಮಾತ್ರ ಪರಿಗಣಿಸಲಾಗುವುದಿಲ್ಲ. ಬದಲಾಗಿ ಯಾವುದೇ ಸಮಯದಲ್ಲಿ ಕೂಡ ನಿಮಗೆ ಸಂಪೂರ್ಣವಾಗಿ ಹೊಟ್ಟೆ ತುಂಬಿಸುತ್ತದೆ. ಆದರೆ ಈ ಖಾದ್ಯವು ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ದೇಶದ ಇತರ ಭಾಗಗಳಲ್ಲಿಯೂ ಜನಪ್ರಿಯವಾಗಿದೆ.
ಸಾಮಾನ್ಯವಾಗಿ ಇಂತಹ ದೋಸೆಗಳನ್ನು ಅಕ್ಕಿಯನ್ನು ನೆನೆಸಿಟ್ಟು, ಹಿಟ್ಟನ್ನು ದಿನಪೂರ್ತಿ ಹಾಗೆಯೇ ಇಟ್ಟು ಹುಳಿಬರಿಸಿ ದೋಸೆಯನ್ನು ತಯಾರಿಸಲಾಗುತ್ತದೆ. ಆದರೆ ನೀವು ಅಕ್ಕಿ ಹಿಟ್ಟು ಇಲ್ಲದೆಯೂ ಕೂಡ ರುಚಿಕರ ದೋಸೆಯನ್ನು ತಯಾರಿಸಬಹುದು. ನಿಮ್ಮ ಮನೆಯಲ್ಲಿ ಸಾಮಾನ್ಯವಾಗಿ ದೋಸೆಯನ್ನು ಮಾಡುವಾಗ ಅಕ್ಕಿ ಮತ್ತು ಉದ್ದಿನ ಬೇಳೆಯೊಂದಿಗೆ ತಯಾರಿಸಲಾಗುತ್ತದೆ. ಆದರೆ ಅಕ್ಕಿ ಹಿಟ್ಟು ಬಳಸದೇ ಉದ್ದಿನ ಬೇಳೆ, ಹೆಸರು ಬೇಳೆ ಮತ್ತು ಮಸೂರ ಬೇಳೆ ಮಿಶ್ರಣವನ್ನು ಬಳಸಿ ತಯಾರಿಸಬಹುದಾಗಿದೆ. ಇದರ ರುಚಿಯು ಕೂಡ ಅಷ್ಟೇ ಅದ್ಭುತವಾಗಿರುತ್ತದೆ. ಜೊತೆಗೆ ತಯಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಮತ್ತು ಪ್ರತಿ ಬಾರಿಯೂ ನೀವು ಸಂಪೂರ್ಣವಾಗಿ ಗರಿಗರಿಯಾದ ದೋಸೆಯನ್ನು ಸವಿಯಬಹುದು.
ಇದನ್ನು ಓದಿ: ಮಧುಮೇಹಿಗಳಿಗಾಗಿ ವಿಶೇಷವಾಗಿ ತಯಾರಿಸಲಾದ ಹಲಸಿನ ಹಣ್ಣಿನ ಲಡ್ಡು
ಅಕ್ಕಿ ಹಿಟ್ಟು ಇಲ್ಲದೆ ದೋಸೆ ಪಾಕವಿಧಾನ:
ಅಕ್ಕಿ ಹಿಟ್ಟು ಇಲ್ಲದೆ ದೋಸೆ ಮಾಡಲು ಉದ್ದಿನ ಬೇಳೆ, ಹೆಸರು ಬೇಳೆ ಮತ್ತು ಮಸೂರ ಬೇಳೆ ಅಗತ್ಯವಿದೆ. ಈ ಎಲ್ಲಾ ಬೇಳೆಗಳನ್ನು ಚೆನ್ನಾಗಿ ತೊಳೆದು 4-5 ಗಂಟೆಗಳ ಕಾಲ ನೆನೆಸಿಡಿ, ಅಥವಾ ರಾತ್ರಿಯಿಡೀ ನೆನೆಸಿಡಬಹುದು. ನಂತರ ಇದನ್ನು 15-20 ನಿಮಿಷಗಳ ಕಾಲ ಚೆನ್ನಾಗಿ ನಯವಾಗಿ ರುಬ್ಬಿಕೊಳ್ಳಿ. ನಂತರ ಇದನ್ನು ಕಡಿಮೆ ಉರಿಯಲ್ಲಿ ತವಾ ಅಥವಾ ದೋಸೆ ಕಾವಲಿಯನ್ನು ಬಿಸಿ ಮಾಡಿ ಸ್ವಲ್ಪ ಎಣ್ಣೆಯನ್ನು ಹರಡಿ. ನಂತರ ತವದ ಮೇಲೆ ಎಣ್ಣೆ ಬಿಸಿಯಾದ ಮೇಲೆ ಹಿಟ್ಟನ್ನು ವೃತ್ತಾಕಾರದಲ್ಲಿ ಸುರಿಯಿರಿ. ಹೀಗೆ ಒಂದು ಬದಿ ಬೆಂದ ಮೇಲೆ ಇನ್ನೊಂದು ಬದಿಯಿಂದ ಬೇಯಿಸಲು ತೆಂಗಿನಕಾಯಿ ಚಟ್ನಿಯೊಂದಿಗೆ ಬಿಸಿಯಾಗಿ ಸವಿಯಿರಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:50 pm, Fri, 9 December 22