AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋರಿಯನ್ ದೋಸೆ; ‘ಈ ಪಾಕಪ್ರವೀಣೆಯನ್ನು ಇನ್​ಸ್ಟಾಗ್ರಾಂನಿಂದ ಓಡಿಸಿ’ ನೆಟ್ಟಿಗರ ಆಕ್ರೋಶ

Dosa : ದಕ್ಷಿಣ ಭಾರತೀಯನಾದ ನನಗೆ ಈ ವಿಡಿಯೋ ನೋಡಲು ಆಗುತ್ತಿಲ್ಲ. ದೋಸೆಯೊಳಗೆ ಚೀಝ್​, ನೂಡಲ್ಸ್​ ಹಾಕುತ್ತಿರುವ ಈಕೆಗೆ ಈ ವಿಡಿಯೋ ಡಿಲೀಟ್ ಮಾಡಲು ಹೇಳಿ’ ನೆಟ್ಟಿಗರೊಬ್ಬರು ಸಂಕಟದಿಂದ ಹೇಳಿದ್ದಾರೆ.

ಕೋರಿಯನ್ ದೋಸೆ; ‘ಈ ಪಾಕಪ್ರವೀಣೆಯನ್ನು ಇನ್​ಸ್ಟಾಗ್ರಾಂನಿಂದ ಓಡಿಸಿ’ ನೆಟ್ಟಿಗರ ಆಕ್ರೋಶ
Food blogger's Korean dosa with noodles and cheese
TV9 Web
| Edited By: |

Updated on:Oct 18, 2022 | 5:15 PM

Share

Viral Video : ಇಂಟರ್​ನೆಟ್​ನಲ್ಲಿರುವ ಪಾಕಪ್ರವೀಣ/ಣೆಯರ ಪ್ರಯೋಗಕ್ಕೆ ಸಿಲುಕಿದ ನಮ್ಮ ದೋಸೆ ಆಗಾಗ ಹೀಗೆ ನರಳುತ್ತಿರುತ್ತದೆ. ಅದರಲ್ಲೂ ಉತ್ತರ ಭಾರತದ ಖಾದ್ಯಗಳನ್ನು ದೋಸೆಯ ಹೊಟ್ಟೆಯಲ್ಲಿಟ್ಟು ಬೇಯಿಸಿ, ಕತ್ತರಿಸುವ ರೀತಿ ಇದೆಯಲ್ಲ! ಮಾಡಿದವರಿಗೇ ಪ್ರಿಯ. ಇದೀಗ ವೈರಲ್ ಆಗುತ್ತಿರುವ ಈ ಕೋರಿಯನ್​ ದೋಸೆ ಎಂಬ ಹೊಸ ಪ್ರಯೋಗದ ವಿಡಿಯೋ ಭಾರೀ ಓಡಾಡುತ್ತಿದೆ. ಫುಡ್​ ಬ್ಲಾಗರ್​ ಒಬ್ಬರು ಇನ್​ಸ್ಟಾಗ್ರಾಮ್​ನಲ್ಲಿ ಈ ವಿಡಿಯೋ ಪೋಸ್ಟ್​ ಮಾಡಿದ್ದಾರೆ. ನೆಟ್ಟಿಗರಂತೂ ಮುಖ ಹುಳ್ಳಗೆ ಮಾಡಿಕೊಂಡು ಬ್ಲಾಗರ್​ ಅನ್ನು ಕಾವಲಿ ಮೇಲೆ ಸರೀ ಹುರಿಯುತ್ತಿದ್ದಾರೆ!

View this post on Instagram

A post shared by Anjali Dhingra (@sooosaute)

ಶೆಝ್ವಾನ್​ ದೋಸಾ, ಚಿಲ್ಲಿ ಪನೀರ್​ ದೋಸಾ, ಆಲೂ ಚೀಸ್​ ದೋಸಾ, ವೆಜಿಟೇಬಲ್​ ಚೀಸ್​ ದೋಸಾ, ಪನೀರ್​ ಮಟರ್ ದೋಸಾ, ಚಾಕೋಲೇಟ್​ ದೋಸಾ ಹೀಗೆ ಏನೇನೆಲ್ಲವನ್ನೂ ದೋಸೆಯೆಂಬ ಸರಳ ಸಾದಾ ರುಚಿಯೋತ್ತಮನ ಹೊಟ್ಟೆಯೊಳಗಿಟ್ಟು ಅಸ್ತಿತ್ವ ನಾಶ ಮಾಡುವುದಿನ್ನೂ ಚಾಲ್ತಿಯಲ್ಲಿದೆ ಎನ್ನುವುದಕ್ಕೆ ಈ ನೂಡಲ್ಸ್​ ಚೀಝ್​ ದೋಸಾ ಸಾಕ್ಷಿ. ಇದಕ್ಕೆ ಕೋರಿಯನ್ ದೋಸಾ ಎಂಬ ಕಿರೀಟ ಬೇರೆ!

@soosaute ಎಂಬ ಇನ್​ಸ್ಟಾಗ್ರಾಂ ಖಾತೆಯನ್ನು ಅಂಜಲಿ ಧಿಂಗ್ರಾ ಎಂಬ ಫುಡ್​ ಬ್ಲಾಗರ್​​ ನಿರ್ವಹಿಸುತ್ತಾರೆ. ಅಂಜಲಿಯವರೇ ತಯಾರಿಸಿದ ಕೋರಿಯನ್ ದೋಸೆ ಇದಾಗಿದೆ. 1,51,000 ಜನರು ಈ ವಿಡಿಯೋ ನೋಡಿದ್ದಾರೆ.  9000ಕ್ಕಿಂತಲೂ ಹೆಚ್ಚು ಜನ ಈ ಪೋಸ್ಟ್​ ಇಷ್ಟಪಟ್ಟಿದ್ದಾರೇನೋ ನಿಜ. ಆದರೆ ಸಾಕಷ್ಟು ಜನ ಈ ಪ್ರಯೋಗವನ್ನು ಖಂಡಿಸಿದ್ದಾರೆ. ‘ನೀವು ಹೀಗೆಲ್ಲ ಪ್ರಯೋಗ ಮಾಡುವುದನ್ನು ನಿಲ್ಲಿಸಿ’ ಎಂದಿದ್ದಾರೆ ಒಬ್ಬರು. ‘ಈ ವಿಡಿಯೋ ಡಿಲೀಟ್​ ಮಾಡಲು ಇನ್ನೂ ಸಮಯವಿದೆ! ಬೇಡ ಇಂಥ ದೋಸೆ’ ಎಂದು ಮತ್ತೊಬ್ಬರು ಹೇಳಿದ್ದಾರೆ. ‘ಹೀಗೆ ಈಕೆ ಪ್ರಯೋಗ ಮಾಡುವುದನ್ನು ನಿಲ್ಲಿಸಲು ಯಾರಾದರೂ ಹೇಳಿ, ದಕ್ಷಿಣಭಾರತೀಯನಾದ ನನಗೆ ಇದನ್ನು ನೋಡಲು ಬಹಳ ನೋವೆನ್ನಿಸುತ್ತಿದೆ. ಯಾಕೆ ಹೀಗೆ ದೋಸೆಯ ಮೇಲೆ ನೂಡಲ್ಸ್​ ಸುರಿಯುತ್ತಿದ್ದಾಳೆ? ಈಕೆಯನ್ನು ಇನ್​ಸ್ಟಾಗ್ರಾಂನಿಂದಲೇ ಓಡಿಸಿ’ ಎಂದಿದ್ದಾರೆ. ‘ಈ ಹುಡುಗಿಗೆ ಏನು ಸಮಸ್ಯೆಯಾಗಿದೆ’ ಎಂದು ಮತ್ತೊಬ್ಬರು ಕೋಪ ವ್ಯಕ್ತಪಡಿಸಿದ್ದಾರೆ.

ಸಾಕಲ್ವಾ ದೋಸೆಯ ಕೊಲೆ ಮಾಡಿದ್ದು ಈಕೆ? ಇಂಥ ಭೀಕರಪಾಕಪ್ರಯೋಗದ ಸಂತತಿಗೆ ಧಿಕ್ಕಾರ!

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:06 pm, Tue, 18 October 22

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ