ವೈದ್ಯರೇಕೆ ತಿಳಿ ಬಣ್ಣದ ಉಡುಪಿನ ಜೊತೆ ಬಿಳಿ ಕೋಟನ್ನು ಧರಿಸುತ್ತಾರೆ? ಡಾ. ಪ್ರೀತಿ ಶಾನ್​ಭಾಗ್ ಹೇಳುವುದು ಹೀಗೆ

ಸಾಮಾನ್ಯವಾಗಿ ರೋಗಿಗಳು ಈ ವೈದ್ಯೆ/ವೈದ್ಯನಿಗೆ ನನ್ನ ರೋಗವನ್ನು ಗುಣ ಮಾಡುವ ಮ್ಯಚುರಿಟಿ ಇದೆಯೋ ಇಲ್ಲವೋ ಎಂದು ನಮ್ಮ ಉಡುಗೆ, ತೊಡುಗೆ, ನಾವು ಹೇಗೆ ಕಾಣುತ್ತೇವೆ ಎಂಬುದನ್ನು ನೋಡಿ ನಿರ್ಧರಿಸುತ್ತಾರೆ. ಇತ್ತೀಚಿಗೆ ಈ ರೀತಿಯ ಭಾವನೆ ಬದಲಾಗಿದೆ, ಆದರು ಕೆಲವರು ವೈದ್ಯರು ನಿರ್ದಿಷ್ಟ ರೀತಿಯಲ್ಲಿ ಕಾಣಬೇಕು ಎಂದು ಬಯಸುತ್ತಾರೆ, ಎಂದು ಡಾ. ಪ್ರೀತಿ ತಿಳಿಸಿದರು

ವೈದ್ಯರೇಕೆ ತಿಳಿ ಬಣ್ಣದ ಉಡುಪಿನ ಜೊತೆ ಬಿಳಿ ಕೋಟನ್ನು ಧರಿಸುತ್ತಾರೆ? ಡಾ. ಪ್ರೀತಿ ಶಾನ್​ಭಾಗ್ ಹೇಳುವುದು ಹೀಗೆ
ವೈದ್ಯಕೀಯ ಕ್ಷೇತ್ರ
Follow us
ನಯನಾ ಎಸ್​ಪಿ
| Updated By: Digi Tech Desk

Updated on:Mar 02, 2023 | 3:47 PM

ವೈದ್ಯರು, ವಕೀಲರು, ಪೊಲೀಸರು ಹೀಗೆ ಎಲ್ಲ ವೃತ್ತಿಗೂ ಒಂದೊಂದು ಸಮವಸ್ತ್ರ ಇರುವುದು ಸರ್ವೇ ಸಾಮಾನ್ಯ. ಅದರಲ್ಲಿ ವೈದ್ಯರು (Doctors) ಹೆಚ್ಚಾಗಿ ಬಿಳಿ ಕೋಟ್ ಮತ್ತು ವಕೀಲರು ಕಪ್ಪು ಕೋಟ್ ಹೀಗೆ ವಿವಿಧ ವೃತ್ತಿಗಳಲ್ಲಿ ವಿವಿಧ ಬಣ್ಣದ ಸಮವಸ್ತ್ರವನ್ನು ಬಳಸುತ್ತಾರೆ. ಆಸ್ಪತ್ರೆಯಲ್ಲಿ ವೈದ್ಯರು ಮತ್ತು ನರ್ಸ್​ಗಳು ಬಿಳಿ ಕೋಟು, ತಿಳಿ ಬಣ್ಣದ ಉಡುಪು ಧರಿಸಿ ಬಹಳ ಸರಳ ವ್ಯಕ್ತಿಗಳಂತೆ ಕಾಣುತ್ತಾರೆ. ಆದರೆ ವೈದ್ಯರು ಏಕೆ ಬಿಳಿ ಕೋಟ್ (White coat/apron) ಮಾತ್ರ ಧರಿಸುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಅಥವಾ ವೈದ್ಯರು ಯಾಕೆ ಸಾಮಾನ್ಯ ವೃತ್ತಿಪರರಂತೆ ಬೋಲ್ಡ್ ಕಲರ್ ಉಡುಗೆ, ಮೇಕ್ ಅಪ್ ಅಥವಾ ಹೇರ್ ಜೆಲ್ ಹಾಕಿ ರೋಗಿಗಳ ಶುಶ್ರುಷೆ ಮಾಡೋದಿಲ್ಲ ಎಂದು ಯಾವತ್ತಾದರೂ ತಿಳಿದುಕೊಳ್ಳಲು ಪ್ರಯತ್ನಿಸಿದ್ದೀರಾ? ಈ ಎಲ್ಲಾ ಪ್ರಶ್ನೆಗಳಿಗೆ ಸ್ವತಃ ಮಾನಸ ಫೌಂಡೇಷನ್ ಡೈರೆಕ್ಟರ್ (Manasa Foundation Director), ಕಟೀಲ್ ಅಶೋಕ್ ಪೈ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಸಹಸಂಸ್ಥಾಪಕಿ (KAPMI, Co-founder) ಡಾ. ಪ್ರೀತಿ ಶಾನ್​ಭಾಗ್​ (Dr. Preeti Shanbhag) ಉತ್ತರಿಸಿದ್ದಾರೆ.

ವೈದ್ಯರು ನಿರ್ಧಿಷ್ಟ ರೀತಿಯಲ್ಲಿ ಕಾಣಬೇಕು ಎನ್ನಲು ಯಾವುದಾದರು ಮನೋವ್ಯೆಜ್ಞಾನಿಕ ಕಾರಣವಿದೆಯೇ?

ಹಿಂದಿನ ಕಾಲದಲ್ಲಿ ಆಸ್ಪತ್ರಿಯಲ್ಲಿ ಕೆಲಸ ಮಾಡುವ ಡಾಕ್ಟರ್ಸ್ ಅದರಲ್ಲೂ ಮಹಿಳೆಯರು ಸೀರೆಯನ್ನೇ ಉಡಬೇಕು, ಮತ್ತು ಪುರುಷರು ಫಾರ್ಮಲ್ಸ್ ಹಾಕಬೇಕು ಎಂಬ ರೂಲ್ಸ್ ಇತ್ತು. ಆದರೆ ಈಗ ಕಾಲ ಬದಲಾಗಿದೆ ಎಲ್ಲರು ತಮಗೆ ಯಾವ ಉಡುಪು ಕಂಫರ್ಟೇಬಲ್ ಅನಿಸುತ್ತದೆಯೋ ಅದೇ ಬಟ್ಟೆಯನ್ನು ಧರಿಸುತ್ತಾರೆ. ವೈದ್ಯರು ಅಥವಾ ನರ್ಸ್​ಗಳು ಸಮವಸ್ತ್ರ, ಬಿಳಿ ಕೋಟು ಧರಿಸಲು ಮುಖ್ಯ ಕಾರಣ ತಮ್ಮನು ತಾವು ಗುರುತಿಸಿಕೊಳ್ಳುವುದಕ್ಕೆ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಒಬ್ಬ ವೈದ್ಯನನ್ನು ಹುಡುಕುವಲ್ಲಿ ಸಮಯ ಹಾಳಾಗಬಾರದು. ಇದೇ ಕಾರಣಕ್ಕೆ ಬಿಳಿ ಕೋಟು ಧರಿಸುತ್ತಾರೆ. ಆದರೆ ಉಡುಗೆ ತೊಡುಗೆ ವಿಷಯ ಬಂದಾಗ ಹಳೆ ಕಾಲದಲ್ಲಿ ಇದ್ದ ಹಾಗೆ ಯಾವುದೇ ನಿರ್ಧಿಷ್ಟ ರೀತಿಯಲ್ಲಿ ಉಡುಪು ಧರಿಸಬೇಕು ಎಂಬ ರೂಲ್ಸ್ ಈಗ ಇಲ್ಲ. ಆದರೆ ವೈದ್ಯಕೀಯ ಶಿಕ್ಷಣ ಪಡೆಯುವ ಸ್ಟೂಡೆಂಟ್ಸ್ ಈಗಲೂ ಸಮವಸ್ತ್ರ ಧರಿಸಬೇಕಾಗುತ್ತದೆ ಎಂದು ಡಾ. ಪ್ರೀತಿ ಶಾನ್​ಭಾಗ್ ತಿಳಿಸಿದ್ದಾರೆ.

ಆಸ್ಪತ್ರೆ ಎಂದಮೇಲೆ ಬಟ್ಟೆಯ ಮೇಲೆ ಕಲೆ ಆಗುವುದು ಸಹಜ, ಆದರು ಏಕೆ ಬಿಳಿ ಕೋಟ್ ಅನ್ನೇ ಧರಿಸುತ್ತಾರೆ?

ಬಿಳಿ ಉದ್ದನೆಯ ಕೋಟ್ ಅಥವಾ ಲ್ಯಾಬ್ ಕೋಟ್ (ಏಪ್ರನ್) ಅನ್ನು ವೈದ್ಯಕೀಯ ಕ್ಷೇತ್ರದವರು ಧರಿಸುತ್ತಾರೆ. ಈ ಕೋಟ್ ಹತ್ತಿ, ಲೆನಿನ್, ಪಾಲಿಸ್ಟರ್ ಅಥವಾ ಎರಡರ ಮಿಶ್ರಣದಿಂದ ಮಾಡಲ್ಪಟ್ಟಿದೆ. ಈ ಕಾರಣದಿಂದಾಗಿ, ಹೆಚ್ಚಿನ ತಾಪಮಾನದಲ್ಲಿ ಕೂಡ ಈ ಕೋಟ್ ಹಾಕಿ ಕೆಲಸ ಮಾಡಬಹುದು. ಇನ್ನು ಇದು ಬಿಳಿ ಇರುವ ಕಾರಣ ಇದು ಸ್ವಚ್ಛವಾಗಿದೆಯೇ ಇಲ್ಲವೇ ಎಂದು ಸುಲಭವಾಗಿ ತಿಳಿಯುತ್ತದೆ. ಮತ್ತು ಬೇರೆ ಬಟ್ಟೆಗೆ ಹೋಲಿಸಿದರೆ ಈ ಬಟ್ಟೆಯಲ್ಲಿ ಕೊಳೆ ತೆಗೆಯುವುದು ಸುಲಭ. ವೈದ್ಯರಿಗೆ ಕೈಯಲ್ಲಿ ನೋಟ್ ಪ್ಯಾಡ್, ಪೆನ್, ಸ್ಟೆತಸ್ಕೋಪ್ ಎಲ್ಲವನ್ನು ಹಿಡಿದುಕೊಂಡು ಹೋಗುವುದು ಕಷ್ಟ, ಹಾಗಾಗಿ ಇದನೆಲ್ಲ ಏಪ್ರನ್ ಅಲ್ಲಿ ಇಟ್ಟು ಹಾಸ್ಪಿಟಲ್ ಅಲ್ಲಿ ರೌಂಡ್ಸ್ ಹೋಗುತ್ತಾರೆ.

ಸರಳವಾಗಿರುವ ಉಡುಪು ಧರಿಸುವುದು ವೈದ್ಯರ ದೈನಂದಿನ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಸಿಟಿ ಜೀವನದಲ್ಲಿ ಇದು ಹೆಚ್ಚು ಪರಿಣಾಮ ಬೀರುವುದಿಲ್ಲ. ಆದರೆ ಹಳ್ಳಿ ಕಡೆಗಳಲ್ಲಿ ಇಂದಿಗೂ ವೈದ್ಯರನ್ನು ನಿರ್ದಿಷ್ಟ ರೀತಿಯಲ್ಲಿ (ಏಪ್ರೊನ್, ತಿಳಿ ಬಣ್ಣದ ಬಟ್ಟೆ, ಹೆಚ್ಚು ಮೇಕ್ಅಪ್ ಧರಿಸದೇ ಸರಳತೆಯಿಂದ ಇರುವುದು) ಕಾಣಿಸಿಕೊಂಡರೆ ಮಾತ್ರ ಜನ ವೈದ್ಯರನ್ನು ನಂಬುತ್ತಾರೆ. ಸಾಮಾನ್ಯವಾಗಿ ರೋಗಿಗಳು ಈ ವೈದ್ಯೆ/ವೈದ್ಯನಿಗೆ ನನ್ನ ರೋಗವನ್ನು ಗುಣ ಮಾಡುವ ಮ್ಯಚುರಿಟಿ ಇದೆಯೋ ಇಲ್ಲವೋ ಎಂದು ನಮ್ಮ ಉಡುಗೆ, ತೊಡುಗೆ, ನಾವು ಹೇಗೆ ಕಾಣುತ್ತೇವೆ ಎಂಬುದನ್ನು ನೋಡಿ ನಿರ್ಧರಿಸುತ್ತಾರೆ. ಇತ್ತೀಚಿಗೆ ಈ ರೀತಿಯ ಭಾವನೆ ಬದಲಾಗಿದೆ, ಆದರು ಕೆಲವರು ವೈದ್ಯರು ನಿರ್ದಿಷ್ಟ ರೀತಿಯಲ್ಲಿ ಕಾಣಬೇಕು ಎಂದು ಬಯಸುತ್ತಾರೆ, ಎಂದು ಡಾ. ಪ್ರೀತಿ ತಿಳಿಸಿದರು

ಬಿಳಿ ಬಣ್ಣದ ಕೋಟ್ ಹಿಂದಿನ ಇತಿಹಾಸ:

19ನೇ ಶತಮಾನದ ಮೊದಲು, ಪ್ರಯೋಗಾಲಯಗಳಲ್ಲಿ ಕೆಲಸ ಮಾಡುವ ವಿಜ್ಞಾನಿಗಳು ಮಾತ್ರ ಲ್ಯಾಬ್ ಕೋಟ್​ಗಳನ್ನು ಧರಿಸುತ್ತಿದ್ದರು, ಅವುಗಳು ತಿಳಿ ಗುಲಾಬಿ ಅಥವಾ ಹಳದಿ ಬಣ್ಣದಲ್ಲಿದ್ದವು. ಆ ಸಮಯದಲ್ಲಿ ಪ್ರಯೋಗಾಲಯದ ವಿಜ್ಞಾನಿಗಳು ವೈದ್ಯರು ಕೊಟುವ ಚಿಕಿತ್ಸೆಯು ನಿಷ್ಪ್ರಯೋಜಕವಾಗಿದೆ ಎಂದು ತೋರಿಸಿ ವೈದ್ಯರ ಖ್ಯಾತಿಗೆ ಹಾನಿಯನ್ನುಂಟುಡಿದ್ದರು. ಇದರಿಂದ ಹಲವು ವೈದ್ಯರಿಗೆ ಶಿಕ್ಷೆಯೂ ಆಗಿತ್ತು. ಆ ಕಾಲದಲ್ಲಿ ವಿಜ್ಞಾನಿಗಳನ್ನು ಆಡಳಿತಗಾರರು ಮತ್ತು ಸಾರ್ವಜನಿಕರು ನಂಬುತ್ತಿದ್ದರು ಆದರೆ ವೈದ್ಯರನ್ನು ಅಷ್ಟರ ಮಟ್ಟಿಗೆ ನಂಬುತ್ತಿರಲಿಲ್ಲ. ಆದ್ದರಿಂದ, ವೈದ್ಯರು ವಿಜ್ಞಾನದ ಮೋರೆ ಹೋದರು.

ಇದನ್ನೂ ಓದಿ: ನಟಿ ಡೆಬಿನಾ ಬ್ಯಾನರ್ಜಿ ಬಳಲುತ್ತಿರುವ ಇನ್ಫ್ಲುಯೆನ್ಸ ಬಿ ವೈರಸ್ ಎಂದರೇನು? ರೋಗಲಕ್ಷಣಗಳು ಮತ್ತು ಚಿಕಿತ್ಸೆಯ ಕುರಿತು ಮಾಹಿತಿ ಇಲ್ಲಿದೆ

ನಂತರದ ದಿನಗಳಲ್ಲಿ ಪ್ರಯೋಗಾಲಯಗಳಲ್ಲಿ ಮಾಡಿದ ಆವಿಷ್ಕಾರಗಳು ರೋಗಗಳನ್ನು ಗುಣಪಡಿಸುವಲ್ಲಿ ಯಶಸ್ವಿಯಾಗುತ್ತವೆ ಎಂಬುದು ಜನರಿಗೆ ತಿಳಿಯಿತು. ಈ ಸಮಯದಲ್ಲಿ ವೈದ್ಯರು ಸಮಯ ಜನರಿಗೆ ಚಿಕಿತ್ಸೆ ನೀಡಲು ಹೋದರೆ ಜನ ಅವರನ್ನು ನಂಬುತ್ತಿರಲಿಲ್ಲ. ಹಾಗಾಗಿ ವೈದ್ಯರು ತಮ್ಮನ್ನ ತಾವು ವಿಜ್ಞಾನಿಗಳಾಗಿ ಪ್ರತಿನಿಧಿಸಿಕೊಂಡು ಜನರಿಗೆ ಚಿಕಿತ್ಸೆ ನೀಡಲು ಪ್ರಾರಂಭಿಸಿದರು.1889 AD ನಲ್ಲಿ ತಮ್ಮನ್ನ ತಾವು ವೈದ್ಯರು ಎಂದು ಗುರುತಿಸಿಕೊಳ್ಳುವ ಸಂಕೇತವಾಗಿ ಕೋಟ್ ಅನ್ನು ಧರಿಸಲು ಪ್ರಾರಂಭಿಸಿದರು. ಲ್ಯಾಬ್ ಕೋಟ್ ಅನ್ನು ವೈದ್ಯಕೀಯ ವೃತ್ತಿಯು ಅಳವಡಿಸಿಕೊಂಡಾಗ,ಬಿಳಿ ಬಣ್ಣದ ಕೋಟ್ ಧರಿಸಲು ನಿರ್ಧರಿಸಿದರು. ಇದಲ್ಲದೆ, ಮಾಂಟ್ರಿಯಲ್ ಜನರಲ್ ಆಸ್ಪತ್ರೆಯ ವೈದ್ಯ ಮತ್ತು ಕೆನಡಾದ ವೈದ್ಯಕೀಯ ಸಂಘದ ಅಧ್ಯಕ್ಷರಾಗಿದ್ದ ಡಾ. ಜಾರ್ಜ್ ಆರ್ಮ್‌ಸ್ಟ್ರಾಂಗ್ (1855-1933) ಅವರು ಕೆನಡಾದಲ್ಲಿ ಆಧುನಿಕ ಬಿಳಿ ಕೋಟ್ ಅನ್ನು ವೈದ್ಯಕೀ ಕ್ಷೇತ್ರಕ್ಕೆ ಪರಿಚಯಿಸಿದರು.

ವೈದ್ಯಕೀಯ ವೃತ್ತಿಯ ಹೊಸ ಮಾನದಂಡವಾಗಿ ಬಿಳಿ ಬಣ್ಣವನ್ನು ಉತ್ತಮ ಕಾರಣಕ್ಕಾಗಿ ಆಯ್ಕೆ ಮಾಡಲಾಗಿದೆ. ಈ ಬಣ್ಣವು ಶುದ್ಧತೆಯನ್ನು ಪ್ರತಿನಿಧಿಸುತ್ತದೆ, ಯಾವುದೇ ಹಾನಿ ಮಾಡದಂತೆ ವೈದ್ಯರು ಮಾಡಿದ ಬದ್ಧತೆಯನ್ನು ತೋರಿಸುತ್ತದೆ. ಇದಲ್ಲದೆ, ಬಿಳಿ ಒಳ್ಳೆಯತನವನ್ನು ಪ್ರತಿನಿಧಿಸುತ್ತದೆ. ಉದಾಹರಣೆಗೆ, ಮೋಸೆಸ್, ಜೀಸಸ್ ಮತ್ತು ಸಂತರು ಸಾಮಾನ್ಯವಾಗಿ ಬಿಳಿ ಬಟ್ಟೆಗಳನ್ನು ಧರಿಸುತ್ತಾರೆ ಎಂದು ವಿವರಿಸಲಾಗಿದೆ. ಬಿಳಿ ಬಣ್ಣವು ಶುಚಿತ್ವವನ್ನು ವ್ಯಕ್ತಪಡಿಸುತ್ತದೆ ಮತ್ತು ಉದ್ದೇಶದ ಗಂಭೀರತೆ, ಸೋಂಕಿನ ಶುದ್ಧೀಕರಣ ಇತ್ಯಾದಿಗಳನ್ನು ಸಂಕೇತಿಸುತ್ತದೆ.

ಇದನ್ನೂ ಓದಿ: ವ್ಯಾಯಾಮವಿಲ್ಲದೆ ತೂಕವನ್ನು ಕಳೆದುಕೊಳ್ಳುವುದರಿಂದ ನೀವು ದಪ್ಪವಾಗುತ್ತೀರಾ?

ಅಂದು ವೈದ್ಯರು ಬಿಳಿ ಬಣ್ಣದ ಕೋಟ್ ಅನ್ನು ಉತ್ತಮ ಕಾರಣಕ್ಕಾಗಿ ಆಯ್ಕೆ ಮಾಡಿದರು. ಈ ಬಣ್ಣವು ಶುದ್ಧತೆಯನ್ನು ಪ್ರತಿನಿಧಿಸುತ್ತದೆ, ರೋಗಿಗಳಿಗೆ ಯಾವುದೇ ಹಾನಿ ಮಾಡದೆ ಸರಿಯಾದ ಚಿಕಿತ್ಸೆ ನೀಡುವ ವೈದ್ಯರ ಬದ್ಧತೆಯ ಸಂಕೇತವಾಗಿದೆ. ಇದಲ್ಲದೆ, ಬಿಳಿ ಒಳ್ಳೆಯತನವನ್ನು ಪ್ರತಿನಿಧಿಸುತ್ತದೆ. ಉದಾಹರಣೆಗೆ, ಮೋಸೆಸ್, ಜೀಸಸ್ ಮತ್ತು ಸಂತರು ಸಾಮಾನ್ಯವಾಗಿ ಬಿಳಿ ಬಟ್ಟೆಗಳನ್ನು ಧರಿಸುತ್ತಾರೆ. ಬಿಳಿ ಬಣ್ಣವು ಶುಚಿತ್ವವನ್ನು ಸೂಚಿಸುವುದರ ಜೊತೆಗೆ ವೈದ್ಯರ ನಿಸ್ವಾರ್ಥ ಉದ್ದೇಶ, ಗಾಂಭೀರ್ಯತೆ, ಸೋಂಕಿನ ಶುದ್ಧೀಕರಣ ಇತ್ಯಾದಿಗಳನ್ನು ಸಂಕೇತಿಸುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 2:51 pm, Thu, 2 March 23

ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?