ದೇಹವನ್ನು ಆರೋಗ್ಯಕರವಾಗಿಡಲು ದೈನಂದಿನ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಗಳ ಅಭ್ಯಾಸ ಬಹಳ ಮುಖ್ಯ. ಇದು ಮಾನಸಿಕ ಮತ್ತು ದೈಹಿಕ ಆರೋಗ್ಯ ಎರಡಕ್ಕೂ ತುಂಬಾನೇ ಒಳ್ಳೆಯದು. ಓಟ ಮತ್ತು ವೇಗದ ನಡಿಗೆಯೂ ಒಂದು ದೈಹಿಕ ಚಟುವಟಿಕೆಯಾಗಿದ್ದು, ಇದರಿಂದ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಓಟವು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಅಲ್ಲದೆ ಇದು ನಮ್ಮ ಶ್ವಾಸಕೋಶ, ಯಕೃತ್ತು ಮತ್ತು ಮೂತ್ರಪಿಂಡದ ಕಾರ್ಯನಿರ್ವಹಣೆಯನ್ನು ಸಹ ಸುಧಾರಿಸುತ್ತದೆ. ಇಷ್ಟು ಮಾತ್ರವಲ್ಲದೆ ಇದು ತ್ವಚೆಗೂ ಕೂಡಾ ತುಂಬಾ ಪ್ರಯೋಜನಕಾರಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಕಳಪೆ ಮಟ್ಟದ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯ ಕಾರಣದಿಂದ ಚರ್ಮ ಸಂಬಂಧಿ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅನಾರೋಗ್ಯಕರ ಆಹಾರ ಪದ್ಧತಿ, ಅಸಮರ್ಪಕ ರಕ್ತ ಪರಿಚಲನೆ, ಹಾರ್ಮೋನುಗಳ ಅಸಮತೋಲನ ಇವೆಲ್ಲವೂ ಚರ್ಮದ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಇದರಿಂದ ಚರ್ಮವು ಒಳಗಿನಿಂದ ಮುಚ್ಚಿಹೋಗಿ ಅದರಲ್ಲಿ ಸಂಗ್ರಹವಾಗುವ ಕೊಳೆ ಮತ್ತು ಎಣ್ಣೆಯಂಶದಿಂದ ಮೊಡವೆಗಳು ಮತ್ತು ಕಪ್ಪುಕಲೆಗಳಂತಹ ಸಮಸ್ಯೆಗಳು ಉಂಟಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಪ್ರತಿನಿತ್ಯ 30 ನಿಮಿಷಗಳ ಕಾಲ ಓಟ ಅಥವಾ ವೇಗದ ನಡಿಗೆಯನ್ನು ಅಭ್ಯಾಸ ಮಾಡುವ ಮೂಲಕ ಈ ಚರ್ಮದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ:
ಪ್ರತಿದಿನ 30 ನಿಮಿಷಗಳ ಕಾಲ ಓಟ ಅಥವಾ ನಡಿಗೆಯು ದೋಷರಹಿತ ಮತ್ತು ಹೊಳೆಯುವ ತ್ವಚೆಗೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಓಡುವುದರಿಂದ ರಕ್ತ ಪರಿಚಲನೆ ಹೆಚ್ಚಾಗುತ್ತದೆ ಮತ್ತು ಇದು ಚರ್ಮದಲ್ಲಿನ ವಿಷವನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಇದಲ್ಲದೆ ಓಡುವುದರಿಂದ ಚರ್ಮದಿಂದ ಬೆವರು ಹೊರಬರುತ್ತದೆ, ಇದರಿಂದ ತ್ವಚೆಯಿಂದ ಕಲ್ಮಶವೂ ಹೊರಬರುತ್ತದೆ. ದೇಹದಲ್ಲಿ ರಕ್ತ ಪರಿಚಲನೆ ಉತ್ತಮವಾಗಿದ್ದಾಗ ಬ್ಯಾಕ್ ಹೆಡ್ಸ್ ಮತ್ತು ವೈಟ್ ಹೆಡ್ಸ್ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ. ಹಾಗೂ ಉತ್ತಮ ರಕ್ತಪರಿಚಲನೆಯು ಚರ್ಮವನ್ನು ಒಳಗಿನಿಂದ ಸ್ವಚ್ಛವಾಗಿರಿಸುತ್ತದೆ.
ಚರ್ಮವನ್ನು ಒಳಗಿನಿಂದ ಆರೋಗ್ಯಕರವಾಗಿರಿಸಲು ಸಹಕಾರಿ:
ಓಡುವುದರಿಂದ ಚರ್ಮವು ಒಳಗಿನಿಂದ ಆರೋಗ್ಯಕರವಾಗಿರುತ್ತದೆ. ವಾಸ್ತವವಾಗಿ ನೀವು ಓಡಿದಾಗ ದೇಹವು ವೇಗವಾಗಿ ಆಮ್ಲಜನಕವನ್ನು ತೆಗೆದುಕೊಳ್ಳುತ್ತದೆ ಮತ್ತು ಇಂಗಾಲದ ಡೈ ಆಕ್ಸೈಡ್ ಹೊರಹಾಕುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಚರ್ಮವು ಒಳಗಿನಿಂದ ತೆರೆದುಕೊಳ್ಳುತ್ತದೆ ಅಲ್ಲದೆ ಎಲ್ಲಾ ಮುಚ್ಚಿದ ಚರ್ಮದ ರಂಧ್ರಗಳು ಸಹ ತೆರೆದುಕೊಳ್ಳುತ್ತವೆ. ಇದರಿಂದ ಚರ್ಮದಲ್ಲಿ ಸಂಗ್ರಹವಾಗಿರುವ ಕಲ್ಮಶವೂ ಹೊರಬರುತ್ತದೆ. ಇದು ಚರ್ಮವು ಒಳಗಿನಿಂದ ಮುಕ್ತವಾಗಿ ಉಸಿರಡಲು ಅನುವು ಮಾಡಿಕೊಡುತ್ತದೆ ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ನಿಮಗೆ ಸಹಾಯ ಮಡುತ್ತದೆ.
ಇದನ್ನೂ ಓದಿ: ಸ್ಟ್ರೆಚ್ ಮಾರ್ಕ್ಸ್ ಸಮಸ್ಯೆಗೆ ಶಾಶ್ವತ ಪರಿಹಾರ ಈ 4 ಮನೆಮದ್ದು
ಮೊಡವೆಗಳು ಮತ್ತು ಸುಕ್ಕುಗಳನ್ನು ಕಡಿಮೆಯಾಗುತ್ತವೆ:
ಮೊಡವೆಗಳು, ಕಪ್ಪು ಕಲೆಗಳು ಮತ್ತು ಸುಕ್ಕುಗಳು ಮುಖದ ಅಂದವನ್ನು ಕೆಡಿಸುತ್ತದೆ. ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಪ್ರತಿನಿತ್ಯ ವೇಗದ ನಡಿಗೆಯ ಅಭ್ಯಾಸವನ್ನು ಮಾಡಿ. ಏಕೆಂದರೆ ಓಟ ಅಥವಾ ವೇಗದ ನಡಿಗೆ ದೇಹದಲ್ಲಿ ಬೆವರುವಿಕೆಗೆ ಕಾರಣವಾಗುತ್ತದೆ. ದೇಹವು ಬೆವರಿದಾಗ ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತದೆ ಮತ್ತು ಚರ್ಮದ ರಂಧ್ರಗಳಲ್ಲಿ ಸಂಗ್ರಹವಾದ ಕೊಳಕು, ಮೇದೋಗ್ರಂಥಿಗಳ ಸ್ರಾವ ಮತ್ತು ವಿಷಗಳು ಹೊರಬರುತ್ತವೆ. ಇದರಿಂದ ಮೊಡವೆಗಳ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಜೊತೆಗೆ ಓಟವು ಮುಖದ ಸುಕ್ಕುಗಳನ್ನು ಸಹ ಕಡಿಮೆ ಮಾಡುತ್ತದೆ.
ಹೊಳೆಯುವ ಕಾಂತಿಯುತ ತ್ವಚೆಯನ್ನು ಪಡೆಯಲು ಸಹಕಾರಿ:
ನೀವು ಓಡುವಾಗ ನಿಮ್ಮ ಹೃದಯವು ವೇಗವಾಗಿ ಬಡಿಯುತ್ತದೆ, ಇದರಿಂದಾಗಿ ದೇಹದ ಪ್ರತಿಯೊಂದು ಭಾಗಕ್ಕೂ ರಕ್ತವು ಚೆನ್ನಾಗಿ ಹರಿಯುತ್ತದೆ. ರಕ್ತಪರಿಚಲನೆ ಚೆನ್ನಾಗಿ ಆದಾಗ ಮುಖವು ಹೊಳೆಯಲು ಪ್ರಾರಂಭಿಸುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: