Walking Benefits: ವೇಗದ ನಡಿಗೆ ಅಭ್ಯಾಸ ಇದೆಯೇ? ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ತಿಳಿಯಿರಿ

Health Care: ವೇಗದ ನಡಿಗೆ ನಿಮ್ಮ ಆರೋಗ್ಯ ಸುಧಾರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಬೆಳಿಗ್ಗೆ ಶುದ್ಧ ಗಾಳಿಯನ್ನು ಪಡೆಯುತ್ತಾ ವೇಗದ ನಡಿಗೆ ಮಾಡುವುದರಿಂದ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನಗಳಿವೆ.

Walking Benefits: ವೇಗದ ನಡಿಗೆ ಅಭ್ಯಾಸ ಇದೆಯೇ? ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us
| Updated By: shruti hegde

Updated on: Oct 13, 2021 | 8:56 AM

ಪ್ರತಿನಿತ್ಯ ವಾಕಿಂಗ್ ಮಾಡುವುದರಿಂದ ಫಿಟ್ ಆಗಿರಬಹುದು ಎಂಬುದು ಅಧ್ಯಯನಗಳ ಮೂಲಕ ತಿಳಿದು ಬಂದಿದೆ. ವಾಕಿಂಗ್ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸುವಲ್ಲಿ ನೆರವಾಗುತ್ತದೆ. ಹಾಗಿರುವಾಗ ಪ್ರತಿನಿತ್ಯ ಬೆಳಿಗ್ಗೆ ವಾಕಿಂಗ್ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ಅದರಲ್ಲಿಯೂ ಫಾಸ್ಟ್ ವಾಕಿಂಗ್ ಅಂದರೆ ವೇಗದ ನಡಿಗೆ ನಿಮ್ಮ ಆರೋಗ್ಯ ಸುಧಾರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಬೆಳಿಗ್ಗೆ ಶುದ್ಧ ಗಾಳಿಯನ್ನು ಪಡೆಯುತ್ತಾ ವೇಗದ ನಡಿಗೆ ಮಾಡುವುದರಿಂದ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನಗಳಿವೆ.

ವೇಗದ ವಾಕಿಂಗ್ ಮಾಡುವಾಗ ಈ ಕೆಳವು ವಿಷಯಗಳನ್ನು ಗಮನಿಸಿಕೊಳ್ಳಿ *ದೇಹವು ಆರೋಗ್ಯಕರವಾಗಿದೇಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ *ನಿಮ್ಮ ಕುತ್ತಿಗೆ ಭಾಗ ಸಡಿಲವಾಗಿರಲಿ, ನೇರ ದೃಷ್ಟಿ ಮತ್ತು ಕೈ ಕಾಲುಗಳು ಸಡಿಲವಾಗಿರಲಿ *ನೇರವಾಗಿ ನೋಡುತ್ತಾ ವಾಕಿಂಗ್ ಮಾಡಿ *ನಿಮ್ಮ ಬೆನ್ನು ನೆರವಾಗಿರಲಿ ಆದರೆ ಯಾವುದೇ ಕಾರಣಕ್ಕೂ ಬಿಗಿಯಾಗಿ ಹಿಡಿಯಬೇಡಿ

ವೇಗದ ನಡಿಗೆಯಿಂದ ಪ್ರಯೋಜನಗಳು ಹೃದಯದ ಆರೋಗ್ಯ ಚುರುಕಾದ ವಾಕಿಂಗ್ ಅಥವಾ ವೇಗದ ನಡಿಗೆ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಜತೆಗೆ ದೇಹದ ಒತ್ತಡವನ್ನು ಸುಧಾರಿಸಲು ಸಹಾಯಕವಾಗಿದೆ. ತೂಕ ಹೆಚ್ಚಳವನ್ನು ನಿಯಂತ್ರಿಸಬಹುದು. ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ರಕ್ತನಾಳ ಸಂಬಂಧಿ ಖಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ದೇಹದ ತೂಕ ನಿಯಂತ್ರಣ ದೇಹದಲ್ಲಿನ ಹೆಚ್ಚುವರಿ ಕೊಬ್ಬು ನಿರ್ವಹಣೆಗೆ ವೇಗದ ನಡಿಗೆ ಸಹಾಯಕ. ಇದರಿಂದ ದೇಹದ ತೂಕವನ್ನು ಬುಹುಬೇಗ ಇಳಿಸಿಕೊಳ್ಳಬಹುದಾಗಿದೆ.

ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ ದೇಹದ ಒತ್ತಡವನ್ನು ನಿಯಂತ್ರಿಸಲು ಜತೆಗೆ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಒಳ್ಳೆಯ ನಿದ್ರೆಗೆ ಉತ್ತಮ ನಡಿಗೆ ಸಹಾಯಕ ಇದರಿಂದ ನಿಮ್ಮ ಸಂಪೂರ್ಣ ಆರೋಗ್ಯ ಸುಧಾರಿಸುತ್ತದೆ. ಹಾಗಾಗಿ ಪ್ರತಿನಿತ್ಯ ವಾಕಿಂಗ್ ಮಾಡುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ.

ಸ್ನಾಯು ಮತ್ತು ಮೂಳೆಗಳ ಆರೋಗ್ಯವನ್ನು ಸುಧಾರಿಸುತ್ತದೆ ದೇಹದಲ್ಲಿ ಸಮತೋಲನ ಮತ್ತು ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ. ಜತೆಗೆ ಆರೋಗ್ಯಕರ ಮೂಳೆಗಳು ಮತ್ತು ಸ್ನಾಯುಗಳನ್ನು ಬಲವನ್ನು ಹೆಚ್ಚಿಸುತ್ತದೆ. ಇದರೊಂದಿಗೆ ಸದೃಢ ದೇಹವನ್ನು ಹೊಂದಲು ಸಹಾಯಕ. ಇದು ದೀರ್ಘಾಯುಷ್ಯಕ್ಕೆ ಸಹಾಯಕವಾಗಿದೆ.

ಇದನ್ನೂ ಓದಿ:

Health Tips: ಪ್ರತಿನಿತ್ಯ ನೀವು ಮಾಡುವ ಈ ಕೆಲವು ತಪ್ಪುಗಳು ನಿಮ್ಮ ಆರೋಗ್ಯವನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ!

Health Tips: ನಿಮ್ಮ ಈ ಕೆಲವು ಅಭ್ಯಾಸಗಳು ಮೂತ್ರಪಿಂಡಕ್ಕೆ ಹಾನಿಕಾರಕ!