ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೆ ಹತ್ತಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ವೈರಲ್ ಆದ ಕೆಲ ವಿಡಿಯೋಗಳ ಬಗ್ಗೆ ನೆಟ್ಟಿಗರು ಆಶ್ಚರ್ಯ ವ್ಯಕ್ತಡಿಸುತ್ತಾರೆ. ಇನ್ನು ಕೆಲ ವಿಡಿಯೋಗಳ ಬಗ್ಗೆ ಮೆಚ್ಚುಗೆ ವ್ಯಕ್ತಡಿಸುತ್ತಾರೆ. ಈ ಎಲ್ಲದರ ನಡುವೆ ಇನ್ನೊಂದಿಷ್ಟು ವಿಡಿಯೋಗಳು ಚರ್ಚೆಗೆ ಕಾರಣವಾಗುತ್ತವೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದರಲ್ಲಿ ವ್ಯಕ್ತಿಯೊಬ್ಬರು ಕಪ್ಪು ಇಡ್ಲಿಗಳನ್ನು ಮಾಡುತ್ತಿದ್ದಾರೆ.
ಇಡ್ಲಿ ಬಣ್ಣ ಮಲ್ಲಿಗೆ ಬಣ್ಣದಂತೆ ಬಿಳಿಯಾಗಿರುತ್ತದೆ. ಆದರೆ ವೈರಲ್ ಆದ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಕಪ್ಪು ಬಣ್ಣದ ಇಡ್ಲಿಗಳನ್ನ ಮಾಡುತ್ತಿದ್ದಾರೆ. ನಾಗ್ಪುರದ ವಿವೇಕ್ ಮತ್ತು ಆಯೇಶಾ ಎಂಬುವವರು ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಬೂದು-ಕಪ್ಪು ಬಣ್ಣದ ಇಡ್ಲಿ ಹಿಟ್ಟನ್ನು ವ್ಯಕ್ತಿ ಮೊದಲು ಸ್ಟೀಮರ್ ಪ್ಲೇಟ್ಗೆ ಹಾಕುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ಸ್ವಲ್ಪ ಸಮಯ ಇಡ್ಲಿಗಳನ್ನು ಬೇಯಲು ಬಿಡುತ್ತಾರೆ. ನಂತರ ತಟ್ಟೆಗೆ ಹಾಕಿ ಬಡಿಸುತ್ತಾರೆ. ಬೇಯಿಸಿದ ಇಡ್ಲಿಗಳ ಮೇಲೆ ಸ್ವಲ್ಪ ತುಪ್ಪವನ್ನು ಹಾಕುತ್ತಾರೆ. ಇಡ್ಲಿಗಳ ಮೇಲೆ ಹೆಚ್ಚು ತುಪ್ಪವನ್ನು ಹಾಕಿ ತೆಂಗಿನಕಾಯಿ ಚಟ್ನಿಯೊಂದಿಗೆ ತಿನ್ನಲು ಬಡಿಸುತ್ತಾರೆ.
ನಾಗ್ಪುರದ ವಾಕರ್ಸ್ ಸ್ಟ್ರೀಟ್ನಲ್ಲಿ ಕಪ್ಪು ಇಡ್ಲಿ ಮಾಡುತ್ತಾರೆ ಅಂತ ಹಂಚಿಕೊಂಡ ಪೋಸ್ಟ್ನ ಶೀರ್ಷಿಕೆಯಲ್ಲಿ ತಿಳಿದಿದೆ. ಈ ವಿಡಿಯೋ ಪೋಸ್ಟ್ ಆಗುತ್ತಿದ್ದಂತೆ 1 ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋ ವೀಕ್ಷಿಸಿದ ಕೆಲವರು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ
Raj Kundra: ಅಶ್ಲೀಲ ಚಿತ್ರ ಪ್ರಕರಣ; ರಾಜ್ ಕುಂದ್ರಾಗೆ ಬಂಧನದಿಂದ ತಾತ್ಕಾಲಿಕ ರಕ್ಷಣೆ ನೀಡಿದ ಸುಪ್ರೀಂ ಕೋರ್ಟ್
ಇಂದಿನಿಂದ ರಾಷ್ಟ್ರಪತಿ ರಾಮನಾಥ ಕೋವಿಂದ್ ಬಾಂಗ್ಲಾದೇಶ ಪ್ರವಾಸ; 50ನೇ ವಿಜಯ ದಿನ ಸಂಭ್ರಮದಲ್ಲಿ ಭಾಗಿ
Published On - 1:16 pm, Wed, 15 December 21