ಬೇಸಿಗೆಗಾಲವೆಂದರೆ ಬಹಳಷ್ಟು ಕಿರಿಕಿರಿ. ಹೀಗಾಗಿ ಬೇಸಿಗೆಯನ್ನು ಅಷ್ಟಾಗಿ ಯಾರು ಕೂಡ ಇಷ್ಟ ಪಡುವುದಿಲ್ಲ. ಪ್ರಾರಂಭದಲ್ಲಿ ನಮ್ಮ ದೇಹವು ಚಳಿಗಾಲದಿಂದ ಬೇಸಿಗೆ ಕಾಲದ ಹವಾಮಾನಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಹೀಗಾಗಿ ಹೆಚ್ಚಿನವರಿಗೆ ಆರೋಗ್ಯವು ಕೈ ಕೊಡುತ್ತದೆ. ಈ ಸಮಯದಲ್ಲಿ ವಿಪರೀತ ಬಿಸಿಲಿನಿಂದ ಚರ್ಮದ ಸಮಸ್ಯೆಗಳು ಕಾಡುವುದು ಸರ್ವೇ ಸಾಮಾನ್ಯ. ದೇಹದಲ್ಲಿ ಚಿಕ್ಕ-ಚಿಕ್ಕ ಗುಳ್ಳೆಗಳು ಎದ್ದು, ಕೀವು ತುಂಬಿಕೊಳ್ಳುತ್ತದೆ, ಇಲ್ಲದಿದ್ದರೆ ವಿಪರೀತ ತುರಿಕೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಈ ಸಮಸ್ಯೆಯಿಂದ ಮುಕ್ತರಾಗಲು ಮನೆ ಮದ್ದನ್ನು ಪ್ರಯತ್ನಿಸಬಹುದು
* ತೊಳೆದ ಅಕ್ಕಿಯ ನೀರಿನಿಂದ ಮೈಯನ್ನು ತೊಳೆದುಕೊಳ್ಳುವುದರಿಂದ ಬೆವರು ಗುಳ್ಳೆಗಳು ಕಡಿಮೆಯಾಗುತ್ತದೆ.
* ಬದನೆಕಾಯಿ ನೆನೆಹಾಕಿದ ನೀರಿನಲ್ಲಿ ಕೈಕಾಲು ಮುಖ ತೊಳೆಯುತ್ತಿದ್ದರೆ ಗುಳ್ಳೆಯಂತಹ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.
* ಬೇವಿನ ಎಲೆಗಳ ಪೇಸ್ಟ್ ತಯಾರಿಸಿ ಗುಳ್ಳೆಯ ಮೇಲೆ ಲೇಪಿಸುತ್ತಿದ್ದರೆ ಬಹುಬೇಗನೆ ಶಮನವಾಗುತ್ತದೆ.
* ಬೆಳ್ಳುಳ್ಳಿಯನ್ನು ಪೇಸ್ಟ್ ಮಾಡಿ ಬೆವರು ಸಾಲೆಯ ಮೇಲೆ ದಿನಕ್ಕೆ ಒಂದೆರಡು ಬಾರಿ ಹಚ್ಚಿದರೆ ಗುಳ್ಳೆಗಳು ಇಲ್ಲದಂತಾಗುತ್ತದೆ.
* ಬಿಸಿ ನೀರಿಗೆ ಕಲ್ಲು ಉಪ್ಪು ಬೆರೆಸಿ ಸ್ನಾನ ಮಾಡಿದರೆ ಚರ್ಮದ ಸೋಂಕು ಸೇರಿದಂತೆ ಬೆವರುಗುಳ್ಳೆಗಳಿಗೆ ಪರಿಣಾಮಕಾರಿಯಾದ ಮನೆ ಮದ್ದಾಗಿದೆ.
* ಪ್ರತಿ ದಿನವೂ ತಣ್ಣೀರು ಸ್ನಾನ ಮಾಡಿದರೆ ಈ ಸಮಸ್ಯೆಯು ದೂರವಾಗುತ್ತದೆ.
* ನೆಲ್ಲಿಕಾಯಿಯನ್ನು ಜಜ್ಜಿ ತೆಗೆದ ರಸವನ್ನು ಮೈಗೆ ಹಚ್ಚುತ್ತಿದ್ದರೆ ಬೆವರುಗುಳ್ಳೆಗಳೂ ಇಲ್ಲದಂತಾಗುತ್ತದೆ.
* ತೆಂಗಿನ ಎಣ್ಣೆಯನ್ನು ಸೌತೆಕಾಯಿ ರಸದೊಂದಿಗೆ ಬೆರೆಸಿ ಈ ಬೆವರು ಗುಳ್ಳೆಗಳ ಮೇಲೆ ಹಚ್ಚಿದರೆ ಗುಣಮುಖವಾಗುತ್ತದೆ.
* ರೋಸ್ ವಾಟರ್‌ಗೆ ಶ್ರೀಗಂಧದ ಪುಡಿ, ಲಾವಂಚದ ಪುಡಿ ಈ ಎಲ್ಲವನ್ನು ಸಮಪ್ರಮಾಣದಲ್ಲಿ ಸೇರಿಸಿಮಿಶ್ರಣ ಮಾಡಿ, ಬೆವರು ಗುಳ್ಳೆಗಳ ಮೇಲೆ ಲೇಪಿಸುವುದರಿಂದ ಪರಿಣಾಮಕಾರಿಕಾರಿ ಔಷಧಿಯಾಗಿದೆ.
* ತುಳಸಿ ರಸ ಮತ್ತು ಶುಂಠಿಯನ್ನು ಸೇರಿಸಿ ಪೇಸ್ಟ್ ಮಾಡಿಟ್ಟುಕೊಳ್ಳಿ. ಇದನ್ನು ಪ್ರತಿ ದಿನ ಹಚ್ಚುತ್ತ ಬರುವುದರಿಂದ ಚರ್ಮದ ಸಮಸ್ಯೆಗಳು ದೂರವಾಗುತ್ತದೆ.
* ಅರಶಿನ ಮತ್ತು ಶುಂಠಿಯನ್ನು ಚೆನ್ನಾಗಿ ರುಬ್ಬಿಕೊಂಡು, ಈ ಮಿಶ್ರಣವನ್ನು ನೇರವಾಗಿ ಗುಳ್ಳೆಯ ಮೇಲೆ ಹಚ್ಚುವುದು ಪರಿಣಾಮಕಾರಿ.
* ಬೇಯಿಸಿದ ಮೊಟ್ಟೆಯ ಬಿಳಿ ಭಾಗವನ್ನು ನೆನಸಿ, ಅದನ್ನು ಗುಳ್ಳೆಯ ಮೇಲೆ ಇಡುವುದರಿಂದ ಈ ಸಮಸ್ಯೆಯಿಂದ ಮುಕ್ತರಾಗುವುದು ಸುಲಭ.
ಇದನ್ನೂ ಓದಿ: ಬೇಸಿಗೆಯಲ್ಲಿ ಆರೋಗ್ಯಕ್ಕೆ ಹಿತಕರ ಈ ದಾಳಿಂಬೆ ಜ್ಯೂಸ್, ಈ ಐಟಂ ಇದ್ದರೆ ಸಾಕು ಮಾಡೋದು ಕಷ್ಟವೇನಲ್ಲ
* ಕುದಿಯುವ ಬಿಸಿನೀರಿಗೆ ಜೋಳದ ಹಿಟ್ಟು ಹಾಕಿ ಮಿಶ್ರಣ ಮಾಡಿ, ಇದನ್ನು ಬೆವರು ಗುಳ್ಳೆಯ ಮೇಲೆ ಹಚ್ಚುತ್ತ ಬರುವುದರಿಂದ ಸಮಸ್ಯೆಯು ನಿವಾರಣೆಯಾಗುತ್ತದೆ.
* ತಣ್ಣೀರಿಗೆ ಜೀರಿಗೆಪುಡಿ ಹಾಕಿ ಸ್ನಾನ ಮಾಡುವುದರಿಂದ ಬೆವರು ಗುಳ್ಳೆಗಳು ಕಡಿಮೆಯಾಗುತ್ತದೆ.
ಈ ಮನೆಮದ್ದು ಉಪಯೋಗಿಸುವ ಮುನ್ನ ತಜ್ಞರ ಬಳಿ ಚರ್ಚಿಸುವುದು ಉತ್ತಮ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:40 pm, Fri, 23 February 24