ಹೊಸ ಅಭ್ಯಾಸಗಳೊಂದಿಗೆ ಜೀವನಶೈಲಿ ಬದಲಾಯಿಸಿಕೊಳ್ಳಿ: ಆರೋಗ್ಯಯುತ ದಿನಗಳನ್ನು ವೆಲ್​ಕಮ್​ ಮಾಡಿ

ನಿಮ್ಮ ಒತ್ತಡದ ಬದುಕಿನೊಂದಿಗೆ ಗುದ್ದಾಡುವ ಬದಲು ಅದಕ್ಕೆ ಪರ್ಯಾಯವಾಗಿ ಒಂದಷ್ಟು ದಾರಿಗಳನ್ನು ಕಂಡುಕೊಳ್ಳಿ. ಸರಳ ಜೀವನಶೈಲಿಯ ಮೂಲಕ ಸ್ವಾಸ್ಥ್ಯಯುತ  ಜೀವನ ನಡೆಸಿ. ಅದಕ್ಕಾಗಿ ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ.

ಹೊಸ ಅಭ್ಯಾಸಗಳೊಂದಿಗೆ ಜೀವನಶೈಲಿ ಬದಲಾಯಿಸಿಕೊಳ್ಳಿ: ಆರೋಗ್ಯಯುತ ದಿನಗಳನ್ನು ವೆಲ್​ಕಮ್​ ಮಾಡಿ
ಪ್ರಾತಿನಿಧಿಕ ಚಿತ್ರ
Edited By:

Updated on: Jan 07, 2022 | 1:21 PM

ಅಭ್ಯಾಸಗಳು ಬದಲಾದರೆ ಜೀವನ ಶೈಲಿಯೂ ಬದಲಾಗುತ್ತದೆ. ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಂಡರೆ ಆರೋಗ್ಯವೂ ಸುಧಾರಿಸುತ್ತದೆ. ಪ್ರತಿಯೊಂದು ಹೊಸ ಅಭ್ಯಾಸವೂ ಅರಂಭದಲ್ಲಿ ಕಷ್ಟವೇ ಆಗಿರುತ್ತದೆ. ಆದರೆ ಅವುಗಳನ್ನು ಪಟ್ಟು ಹಿಡಿದು ರೂಢಿಸಿಕೊಂಡರೆ ಆರೋಗ್ಯಯುತ ಜೀವನ ನಡೆಸಬಹದು. 2022 ರ ಆರಂಭದಲ್ಲಿದ್ದೇವೆ. ಈಗಲೇ ಕೆಲವು ಆರೋಗ್ಯಕ್ಕೆ ಒಳಿತಾಗುವ ಅಭ್ಯಾಸಗಳನ್ನು  ಜಾರಿಗೆ ತರುವುದು ಒಳಿತು. ನಿಮ್ಮ ಒತ್ತಡದ ಬದುಕಿನೊಂದಿಗೆ ಗುದ್ದಾಡುವ ಬದಲು ಅದಕ್ಕೆ ಪರ್ಯಾಯವಾಗಿ ಒಂದಷ್ಟು ದಾರಿಗಳನ್ನು ಕಂಡುಕೊಳ್ಳಿ. ಸರಳ ಜೀವನಶೈಲಿಯ ಮೂಲಕ ಸ್ವಾಸ್ಥ್ಯಯುತ  ಜೀವನ ನಡೆಸಿ. ಅದಕ್ಕಾಗಿ ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ.

ಡಯೆಟ್​ನಲ್ಲಿ ಹೆಚ್ಚು ತರಕಾರಿಗಳನ್ನು ಸೇರಿಸಿಕೊಳ್ಳಿ
ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರವೂ ಅಷ್ಟೇ ಮುಖ್ಯ. ನೀವು ಡಯೆಟ್​ ಮಾಡುತ್ತಿದ್ದರೆ ಅದರ ಪಟ್ಟಿಗೆ ಹೆಚ್ಚು ತರಕಾರಿಗಳನ್ನು ಸೇರಿಸಿಕೊಳ್ಳಿ.  ತರಕಾರಿಗಳನ್ನು ಹಸಿಯಾಗಿ ಸೇವಿಸುವುದರಿದ ದೇಹಕ್ಕೆ ಬೇಕಾದ ಪೋಷಕಾಂಶಗಳು ದೊರೆಯುತ್ತವೆ. ಪ್ರತಿದಿನ 2 ಕಪ್​ನಷ್ಟು ಹಸಿ ತರಕಾರಿಗಳ ಸೇವನೆ ನಿಮ್ಮ ದೇಹದ ಅತಿಯಾದ ತೂಕವನ್ನೂ ಕಡಿಮೆ ಮಾಡುತ್ತದೆ. ಹೀಗಾಗಿ ಹಸಿಯಾದ ತರಕಾರಿಗಳನ್ನು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ.

ನೀರಿನ ಸೇವನೆ
ದೇಹದಲ್ಲಿ ಅರ್ಧದಷ್ಟು ಭಾಗ ನೀರು ತುಂಬಿಕೊಂಡಿರುತ್ತದೆ. ದೇಹದ ಚಯಾಪಯಗಳು ಕೂಡ ಸರಿಯಾಗಿ ಆಗಬೇಕಾದರೆ ನೀರು ಅಗತ್ಯವಾಗಿದೆ. ಹೀಗಾಗಿ ಪ್ರತಿದಿನ 2-3 ಲೀ ನಷ್ಟು ನೀರಿನ ಸೇವನೆ ಮಾಡುವುದು ಒಳ್ಳೆಯದು. ಸರಿಯಾದ ಪ್ರಮಾಣದ ನೀರಿನ ಸೇವನೆ ನಿಮಗೆ ತಲೆನೋವಿನಂತಹ ಸಮಸ್ಯೆಗಳಿಂದಲೂ ದೂರಮಾಡುತ್ತದೆ.  ಅಲ್ಲದೆ ನಿಮ್ಮ ದೇಹದ ಸಂಪೂರ್ಣ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀರು ಸಹಾಯ ಮಾಡುತ್ತದೆ.

ಸರಿಯಾದ ನಿದ್ದೆ
ನಿದ್ದೆ ನಿಮಗೆ ಹೊಸ ಚೈತನ್ಸಯ ನೀಡುತ್ತದೆ. ಒತ್ತಡದ ಬದುಕಿನಿಂದ ಉಂಟಾದ ಆಯಾಸದಿಂದ ಮುಕ್ತಿ ನೀಡಿ ಕೆಲಸ ಮಾಡಲು ಹುರುಪು ನೀಡುತ್ತದೆ. ನಿದ್ದೆ ನಿಮ್ಮ ಮನಸ್ಥಿತಿ, ಹಾರ್ಮೋನ್​ ಬದಲಾವಣೆ ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ಪ್ರತಿದಿನ 8-9 ಗಂಟೆಗಳ ಕಾಲ ನಿದ್ದೆ ಮಾಡಿ.

ನಿಮ್ಮಿಷ್ಟದ ಕೆಲಸದಲ್ಲಿ ತೊಡಗಿಸಿಕೊಳ್ಳಿ
ದಿನದಲ್ಲಿ ಕನಿಷ್ಠ 30 ನಿಮಿಷಗಳ ಕಾಲವಾದರೂ ನಿಮ್ಮಿಷ್ಟದ ಕೆಲಸದಲ್ಲಿ ತೊಡಗಿಸಿಕೊಳ್ಳಿ. ಆಗ ನಿಮ್ಮ ಒತ್ತಡ, ಚಿಂತೆ ಎಲ್ಲವೂ ಮಾಯವಾಗಿ ಆರಾಮದಾಯಕ ಮನಸ್ಥಿತಿಗೆ  ತಲುಪತ್ತೀರಿ. ಅಲ್ಲದೆ ನಿಮ್ಮ ಇಷ್ಡದ ಹವ್ಯಾಸಗಳಲ್ಲಿ ತೊಡಗಿಸಿಕೊಂಡಾಗ ದೇಹದಲ್ಲಿ ಖುಷಿಯ ಹಾರ್ಮೋನ್​ ಹೆಚ್ಚು ಉತ್ಪತ್ತಿಯಾಗುತ್ತದೆ. ಇದು ನಿಮ್ಮ  ದೇಹದ ಆರೋಗ್ಯವನ್ನು ಸುಧಾರಿಸಿ ಫಿಟ್​ ಆಗಿರುವಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ.

ಇತರರ ಸಹಾಯ ಕೇಳಿ
ಎರಡು ಕೈ ಸೇರಿದರೆ  ಮಾತ್ರ ಚಪ್ಪಾಳೆಯಾಗಲು ಸಾಧ್ಯ ಹೀಗಿದ್ದಾಗ ಕೆಲವೊಂದು ಯೋಜನೆಗಳನ್ನು ಅಥವಾ ಸಮಸ್ಯೆಗಳನ್ನು ಒಬ್ಬರೇ ಎದುರಿಸಲು ಸಾಧ್ಯವಿಲ್ಲ. ಆಗ ಇತರರ ಸಹಾಯ ಕೇಳಿ. ಸಹಾಯ ಕೇಳಲು ಮುಜುಗರ ಬೇಡ. ಆದರೆ ಯಾರಲ್ಲಿ ಕೇಳುತ್ತಿದ್ದೀರಿ ಎನ್ನುವ ಗಮನವಿರಲಿ. ಅದೇ ರೀತಿ ಯಾವ ರೀತಿ ಸಹಾಯ ಕೇಳಬೆಕು ಎನ್ನುವುದು ತಿಳಿದಿರಲಿ. ಸಹಾಯ ಕೇಳುವುದರಿಂದ ನಿಮ್ಮ ಘನತೆಗೆ ಧಕ್ಕೆಯಾಗುತ್ತದೆ ಎನ್ನುವ ಮನೋಭಾವ ಬೇಡ.

ಮಲಗುವ ಮೊದಲು ಮೊಬೈಲ್​ ಬಳಸದಿರಿ
ಮೊಬೈಲ್​  ದಿನನಿತ್ಯದ ಜೀವನದ ಭಾಗವಾಗಿದೆ. ರಾತ್ರಿ ಮೊಬೈಲ್​​ ನೋಡುತ್ತಲೇ ಮಲಗಿ, ಬೆಳಗ್ಗೆ ಎದ್ದಾಕ್ಷಣವೂ ಮೊಬೈಲ್​ನಿಂದಲೇ ದಿನ ಆರಂಭಿಸುವವರಿರುತ್ತಾರೆ. ಈ ರೀತಿಯ ಅಭ್ಯಾಸವನ್ನು ಕೈಬಿಡಿ. ಪ್ರತಿದಿನ ಮಲಗುವ ಅರ್ಧಗಂಟೆ ಮೊದಲು  ಮೊಬೈಲ್​ ಸೇರಿ ಇನ್ನಿತರ ಗ್ಯಾಜೆಟ್​ಗಳ ಬಳಕೆಯನ್ನು ನಿಲ್ಲಿಸಿ.  ಇದು ನಿಮಗೆ ಆರಾಮದಾಯಕ ನಿದ್ದೆ ಬರುವಂತೆ ಮಾಡುತ್ತದೆ.

ನಿಮಗಾಗಿ ಸ್ವಲ್ಪ ಸಮಯ ಮೀಸಲಿಡಿ
ದಿನದಲ್ಲಿ ಸ್ವಲ್ಪ ಸಮಯವಾದರೂ ನಿಮಗಾಗಿ ಮೀಸಲಿಡಿ. ಇದು ನಿಮ್ಮನ್ನು, ನಿಮ್ಮ ತಪ್ಪು-ಸರಿಗಳನ್ನು ಅರ್ಥೈಸಿಕೊಳ್ಳಲು ಸಹಾಯ ಮಾಡುತ್ತದೆ. 10 ನಿಮಿಷವಾದರೂ ಯೋಗ, ಧ್ಯಾನದಂತಹ ಅಭ್ಯಾಸ ಮಾಡಿಕೊಳ್ಳಿ. ಒತ್ತಡ ಮುಕ್ತವಾಗಿ ಬದುಕಲು ನಿಮಗೆ ಇದು ನೆರವಾಗುತ್ತದೆ. ಪ್ರತಿದಿನ ನಿಮ್ಮಿಷ್ಟದ ಒಂದು ಕೆಲಸವನ್ನು ರೂಢಿಸಿಕೊಳ್ಳಿ. ಅದನ್ನು ಎಂದಿಗೂ ತಪ್ಪಿಸಬೇಡಿ. ಇದು ನಿಮ್ಮನ್ನು ಸಣ್ಣ ಸಣ್ಣ ವಿಷಯಗಳಿಗೆ ಬೇಸರ ಮಾಡಿಕೊಳ್ಳುವುದನ್ನು ತಪ್ಪಿಸುತ್ತದೆ.

ಇದನ್ನೂ ಓದಿ:

ಮದುವೆ ಮತ್ತು ಸಂಗಾತಿಯ ಬಗ್ಗೆ ನಿರೀಕ್ಷೆಗಳನ್ನು ಇಟ್ಟುಕೊಳ್ಳುವ ಮೊದಲು ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಿ: ಡಾ ಸೌಜನ್ಯ ವಶಿಷ್ಠ