ಕೊರೊನಾ (Corona) ಸಾಂಕ್ರಾಮಿಕ ಆರಂಭವಾದ ಮೇಲೆ ಲಾಕ್ ಡೌನ್, ಕರ್ಫ್ಯೂ ಎಂದು ಮಕ್ಕಳನ್ನು ಮನೆಯಲ್ಲಿಯೇ ಇರಿಸಿಕೊಳ್ಳುವಂತಾಗಿದೆ. ಆನ್ಲೈನ್ ಕ್ಲಾಸ್ (Online Class) ಆರಂಭವಾದ ಮೇಲೆ ಮೊಬೈಲ್ ಸ್ಕ್ರೀನ್ಗಳನ್ನು (Mobile Screen) ಮಕ್ಕಳು ನೋಡುವುದು ಅತಿಯಾಗಿದೆ. ಇದರಿಂದ ಮ್ಕಳ ಕಣ್ಣಿನ ದೃಷ್ಟಿಗೂ ಹಾನಿಕಾರಕ. ಅಲ್ಲದೆ ದೈಹಿಕ, ಮಾನಸಿಕ ಆರೋಗ್ಯವೂ ಹದಗೆಡುತ್ತದೆ. ಆನ್ಲೈನ್ ಕ್ಲಾಸ್ ಅನಿವಾರ್ಯವಾಗಿದೆ. ಹೀಗಾಗಿ ಆ ಸಂದರ್ಭದಲ್ಲಿ ಮೊಬೈಲ್, ಟ್ಯಾಬ್ಗಳನ್ನು ಬಳಸಲೇಬೇಕು. ಅದನ್ನು ಹೊರತುಪಡಿಸಿ ಉಳಿದ ಸಂದರ್ಭಗಳಲ್ಲಿ ಆದಷ್ಟು ಮಕ್ಕಳನ್ನು ಮೊಬೈಲ್, ಟ್ಯಾಬ್ನಂತಹ ಗ್ಯಾಜೆಟ್ಗಳಿಂದ ದೂರವಿಡಿ. ಅಲ್ಲದೆ ಇಡೀ ದಿನ ಮೊಬೈಲ್ ಅನ್ನು ನೋಡುತ್ತಿರುವುದರಿಂದ ಇತರರೊಂದಿಗೆ ಬೆರೆಯುವ ಮನಸ್ಥಿತಿಯೂ ಮಕ್ಕಳಲ್ಲಿ ಕಡಿಮೆಯಾಗುತ್ತದೆ. ಸಮಾಜದೊಂದಿಗೆ ಬೆರೆಯುವ ಮನಸ್ಥಿತಿ ಕಡಿಮೆಯಾಗಿ ಒಂಟಿಯಾಗಿರುತ್ತಾರೆ. ಕ್ರಮೇಣ ಇದು ಮಾನಸಿಕ ಸಮಸ್ಯೆಯಾಗಿ ಪರಿಣಮಿಸಬಹುದು. ಹೀಗಾಗಿ ನಿಮ್ಮ ಮಕ್ಕಳನ್ನು ಆದಷ್ಟು ಮೊಬೈಲ್ ಟ್ಯಾಬ್ಗಳ ಅತಿಯಾದ ಬಳಕೆಯನ್ನು ತಪ್ಪಿಸಲು ಈ ಕ್ರಮಗಳನ್ನು ಅಳವಡಿಸಿಕೊಳ್ಳಿ.
ನೋ ಸ್ಕ್ರೀನ್ ಝೋನ್ ನಿಯಮ ಹಾಕಿ:
ಒಮ್ಮೆ ಮಕ್ಕಳು ಮೊಬೈಲ್ ಬಳಸಲು ಹಿಡಿದರೆ ಮನೆಯ ಎಲ್ಲಾ ಭಾಗಗಳಲ್ಲಿ ಕುಳಿತು ಮೊಬೈಲ್ ನೋಡುತ್ತಾರೆ. ಇದರಿಂದ ಫೋನ್ನ ಬಳಕೆ ಅತಿಯಾಗುತ್ತದೆ. ಇದಕ್ಕೆ ಕಡಿವಾಣ ಹಾಕಲು ನೋ ಸ್ಕ್ರೀನ್ ಝೋನ್ ರೂಲ್ಸ್ ಹಾಕಿ. ಅಂದರೆ ಮನೆಯ ಯಾವ ಯಾವ ಸ್ಥಳಗಳಲ್ಲಿ ಮೊಬೈಲ್ಅನ್ನು ಬಳಸಬಾರದು ಎಂದು ನಿಯಮ ಮಾಡಿ. ಉದಾಹರಣೆಗೆ ಮಲಗುವ ವೇಳೆ, ಊಟ ಮಾಡುವ ಜಾಗದಲ್ಲಿ ಇತ್ಯಾದಿ. ಇದರಿಂದ ಮಕ್ಕಳು ಅತಿ ಹೆಚ್ಚು ಕಾಲ ಮೊಬೈಲ್ ಬಳಸುವುದು ತಪ್ಪುತ್ತದೆ.
ಮಕ್ಕಳೊಂದಿಗೆ ಸಮಯ ಕಳೆಯಿರಿ:
ಬೆಳೆಯುವ ಮಕ್ಕಳಿಗೆ ಎಲ್ಲವನ್ನೂ ತಿಳಿದುಕೊಳ್ಳಬೇಕೆಂಬ ಹಂಬಲವಿರುತ್ತದೆ. ಹೀಗಾಗಿ ಪೋಷಕರಾದ ನೀವು ಅವರೊಂದಿಗೆ ಹೆಚ್ಚು ಸಮಯಕಳೆಯಿರಿ. ಅವರೊಂದಿಗೆ ಆಟವಾಡಿ. ಅವರನ್ನು ಜನರೊಂದಿಗೆ ಬೆರೆಯಲು ಬಿಡಿ. ಇದರಿಂದ ಸಮಾಜದ ಭಯ ಅವರನ್ನು ಕಾಡುವುದಿಲ್ಲ. ಅಲ್ಲದೆ ನೀವು ಅವರೊಂದಿಗೆನೀವು ಹೆಚ್ಚು ಕಾಲ ಕಳೆದಾಗ ಅವರಿಗೆ ನಿಮ್ಮ ಮೇಲಿನ ನಂಬಿಕೆ ಬೆಳೆಯುತ್ತದೆ. ಮೊಬೈಲ್ ಬಳಕೆ ಕಡಿಮೆಯಾಗುತ್ತದೆ.
ಅಡುಗೆ ಮಾಡುವಾಗ ನಿಮ್ಮೊಂದಿಗೆ ಸೇರಿಸಿಕೊಳ್ಳಿ:
ಅಡುಗೆ ಮಾಡುವುದರಿಂದ ಹೊಸ ವಿಷಯಗಳ ಕಲಿಯಾಗುತ್ತದೆ. ಗಂಡು ಮಕ್ಕಳಾಗಲೀ ಹೆಣ್ಣು ಮಕ್ಕಳಾಗಲೀ ಅಡುಗೆ ಮಾಡುವುದನ್ನು ಕಲಿತುಕೊಳ್ಳುವುದು ಈಗಿನ ದಿನಗಳಲ್ಲಿ ಅಗತ್ಯವಾಗಿದೆ. ಒಟ್ಟಿಗೆ ಅಡುಗೆ ಮಾಡುವುದರಿಂದ ಪ್ರೀತಿ ತುಂಬಿದ ಆಹಾರವೂ ತಯಾರಾಗುತ್ತದೆ ಜತೆಗೆ ಬಾಂಧವ್ಯೂ ಬೆಸೆಯುತ್ತದೆ.
ಹೊರಗಿನ ಪ್ರಪಂಚದ ಅರಿವು ಮೂಡಿಸಿ:
ಪ್ರಪಂಚ ವಿಶಾಲವಾಗಿದೆ. ನಿಮ್ಮ ಮಕ್ಕಳಿಗೆ ಒಂದಷ್ಟು ವಿಚಾರಗಳನ್ನು ತಿಳಿಸಿಕೊಡಿ. ನಿಮಗಿರುವ ಹವ್ಯಾಸಗಳನ್ನು ಅವರಿಗೂ ಕಲಿಸಿಕೊಡಿ. ಗಾರ್ಡನಿಂಗ್, ಹೂಗಿಡಗಳನ್ನು ನೆಡೆವುದು ಹೀಗೆ ಮನಸ್ಸಿಗೆ ಖುಷಿ ನೀಡುವ ಅಭ್ಯಾಸಗಳನ್ನು ರೂಢಿ ಮಾಡಿಸಿ. ಆಗಾಗ ಹೊರಗಿನ ಪ್ರಪಂಚಕ್ಕೆ ಕರೆದೊಯ್ಯಿರಿ ವರ್ಷಕ್ಕೊಂದಾದರೂ ಹೊಸ ಸ್ಥಳಗಳನ್ನು ತೋರಿಸಿ, ಜೀವನ ಪ್ರೀತಿ ಕಲಿಸಿ. ಮೊಬೈಲ್ಗಳ ಬಳಕೆ ಕಡಿಮೆ ಮಾಡಿ ನಿಮ್ಮೊಂದಿಗೆ ಇರುವಂತೆ ನೋಡಿಕೊಳ್ಳಿ.
ಜೀವನದ ಗುರಿಯ ಬಗ್ಗೆ ಸ್ಪಷ್ಟತೆ ನೀಡಿ:
ಪ್ರತೀ ಮಕ್ಕಳಿಗೆ ತಾನೂ ಜೀವನದಲ್ಲಿ ಏನಾದರೊಂದು ಸಾಧಿಸಬೇಕು ಎನ್ನುವ ಗುರಿ ಇರಬೇಕು. ಇದನ್ನು ತಂದೆ ತಾಯಿಗಳೇ ಅವರ ಮನಸ್ಸಿನಲ್ಲಿ ಬಿತ್ತಬೇಕು. ಸರಿಯಾದ ಜೀವನದ ಆಯ್ಕೆ ಮಾಡಿಕೊಳ್ಳುವತ್ತ ಅವರಿಗೆ ಸಲಹೆ ನೀಡಬೇಕು. ಅವರೊಂದಿಗೆ ಕುಳಿತು ಮಾತನಾಡಿ ಆಗ ಮೊಬೈಲ್ನೆಡೆಗೆ ಅವರ ಗಮನ ಕಡಿಮೆಯಾಗುತ್ತದೆ.
ಇದನ್ನೂ ಓದಿ:
ಪಾಪ್ಕಾರ್ನ್ ತಿನ್ನುವುದರಿಂದಲೂ ದೇಹದ ತೂಕ ಇಳಿಸಿಕೊಳ್ಳಬಹುದು; ಇಲ್ಲಿದೆ ಸಂಪೂರ್ಣ ಮಾಹಿತಿ