Rose Day Gift Ideas: ರೋಸ್ ಡೇ ದಿನದಂದು ಈ ಉಡುಗೊರೆಗಳನ್ನು ನೀಡಿ; ಸಂಗಾತಿಯ ಪ್ರತಿಕ್ರಿಯೆ ನಿಮ್ಮನ್ನು ಆಶ್ಚರ್ಯಗೊಳಿಸುತ್ತದೆ

Valentine’s Week 2022: ಎಲ್ಲರಿಗಿಂತ ನನ್ನ ಹುಡುಗಿ ಭಿನ್ನ ಎನ್ನುವ ಹುಡುಗರಿಂದ ಹಿಡಿದು ಈ ಬಾರಿಯಾದರೂ ನನ್ನ ಇನಿಯನಿಗೆ ನಾನು ಉಡುಗೊರೆ ಕೊಡಬೇಕು ಎನ್ನುವ ಹುಡುಗಿಯರ ತನಕ ಎಲ್ಲಾ ಯುವ ಮನಸ್ಸುಗಳ ಆಲೋಚನೆಗಳಿಗೆ ಇಲ್ಲಿದೆ ರೋಸ್​ ಡೇ ದಿನದ ಆಚರಣೆಗಾಗಿಯೇ ವಿಶೇಷ ಮಾಹಿತಿ.

Rose Day Gift Ideas: ರೋಸ್ ಡೇ ದಿನದಂದು ಈ ಉಡುಗೊರೆಗಳನ್ನು ನೀಡಿ; ಸಂಗಾತಿಯ ಪ್ರತಿಕ್ರಿಯೆ ನಿಮ್ಮನ್ನು ಆಶ್ಚರ್ಯಗೊಳಿಸುತ್ತದೆ
ರೋಸ್​ ಡೇ (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: preethi shettigar

Updated on:Feb 06, 2022 | 1:25 PM

ಪ್ರೇಮಿಗಳ ದಿನ ಹತ್ತಿರ ಬರುತ್ತಿದ್ದಂತೆ ಹುಡುಗರ ಮನದಲ್ಲಿ ನೂರಾರು ಆಸೆಗಳು ತುಂಬಿಕೊಂಡರೆ ಹುಡುಗಿಯರು ಹತ್ತು ಹಲವಾರು ನಿರೀಕ್ಷೆಗಳೊಂದಿಗೆ ಕಾದು ಕೂರುತ್ತಾರೆ. ನಾಳೆಯಿಂದ (ಫೆಬ್ರವರಿ 07) ಪ್ರೇಮಿಗಳ ವಾರ(Valentine’s Week 2022) ಆರಂಭ. ಆರಂಭಕ್ಕೆ ಮುನ್ನುಡಿ ಎಂಬಂತೆ ರೋಸ್​ ಡೇ(Rose Day 2022) ಇರಲಿದ್ದು, ಬರಿ ಗುಲಾಬಿ ಹೂವು ಕೊಟ್ಟರೆ ಸಾಕೇ? ಅಥವಾ ಇನ್ನೂ ಏನಾದರೂ ಬೇಕೇ ಎಂಬ ಗೊಂದಲ ಶುರುವಾಗುತ್ತದೆ. ಅದರಲ್ಲೂ ಮನಕದ್ದ ಹುಡುಗಿಯನ್ನು ತನ್ನತ್ತ ಸೆಳೆಯಲು ಯಾವ ಉಡುಗೊರೆ (Rose Gift) ಕೊಟ್ಟರೆ ಚೆನ್ನ ಎಂಬ ಪ್ರಶ್ನೆಗೆ ಉತ್ತರ ಸಿಗದೇ ತಿಣುಕಾಡುತ್ತಾರೆ. ಎಲ್ಲರಿಗಿಂತ ನನ್ನ ಹುಡುಗಿ ಭಿನ್ನ ಎನ್ನುವ ಹುಡುಗರಿಂದ ಹಿಡಿದು, ಈ ಬಾರಿಯಾದರೂ ನನ್ನ ಇನಿಯನಿಗೆ ನಾನು ಉಡುಗೊರೆ ಕೊಡಬೇಕು ಎನ್ನುವ ಹುಡುಗಿಯರ ತನಕ ಎಲ್ಲಾ ಯುವ ಮನಸ್ಸುಗಳ ಆಲೋಚನೆಗಳಿಗೆ ಇಲ್ಲಿದೆ ರೋಸ್​ ಡೇ ದಿನದ ಆಚರಣೆಗಾಗಿ ವಿಶೇಷ ಮಾಹಿತಿ.

ಹಣೆಗೊಂದು ಚುಂಬನ ನಿಮ್ಮ ಸಂಗಾತಿಗಾಗಿ ಏನಾದರೂ ವಿಶೇಷವಾದುದನ್ನು ಮಾಡಲು ನೀವು ಬಯಸಿದರೆ, ಅದನ್ನು ನಿಮ್ಮ ಸಿಹಿಯಾದ ಮುತ್ತುಗಳಿಂದ ಪ್ರಾರಂಭಿಸಿ. ಪ್ರೀತಿಯ ಸಂಕೇತವಾಗಿ ಕೆಂಪು ಗುಲಾಬಿ ನೀಡಿ, ಹಣೆಗೊಂದು ಮುತ್ತು ಕೊಡಿ. ಉಡುಗೊರೆಗಷ್ಟೇ ಯಾವ ಪ್ರೀತಿಯು ಸೀಮಿತವಾಗಬಾರದು. ಪ್ರೀತಿ ಸದಾ ಉಳಿಯುವ ಬೆಸುಗೆಯಾಗಬೇಕು. ಹಣೆಗೆ ನೀಡುವ ಮುತ್ತು ಭರವಸೆಯ ಸಂಕೇತವಾಗಿದೆ.

ಚಾಕಲೇಟ್​ ಜತೆಗೆ ರೋಸ್​

ಸಾಮಾನ್ಯವಾಗಿ ಹುಡುಗಿಯರು ಚಾಕಲೇಟ್​ ಇಷ್ಟಪಡುತ್ತಾರೆ. ಹೀಗಾಗಿ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಕಾಲಕ್ಕೆ ಗುಲಾಬಿ ಬೊಕ್ಕೆ ಜತೆಗೆ ಚಾಕಲೇಟ್​ ನೀಡಿ. ಇದನ್ನು ಹೊರತುಪಡಿಸಿ ಮನದಲ್ಲಿ ಅಡಗಿದ್ದ ಭಾವನೆಗಳನ್ನು ವ್ಯಕ್ತಪಡಿಸುವ ಕಾಲಕ್ಕೆ ವಿಶೇಷವಾದದ್ದನ್ನು ನೀವು ಮಾಡಬಹುದು. ಇಲ್ಲವಾದಲ್ಲಿ ಚಾಕಲೇಟ್​ ಮತ್ತು ಹೂವು ನೀಡಿ. ಗುಲಾಬಿ ಹೂವಿನ ಬೊಕ್ಕೆ ಎಂತವರನ್ನು ಸಹ ಒಂದು ಕ್ಷಣ ತಮ್ಮತ್ತ ಸೆಳೆಯುವಂತೆ ಮಾಡುತ್ತದೆ.

ಗ್ರೀಟಿಂಗ್​ ಕಾರ್ಡ್​

ನಿಮ್ಮ ಪ್ರೇಮ ನಿವೇದನೆಯ ಸಂದರ್ಭದಲ್ಲಿ ನೀವು ಮಾಡುವ ಪ್ರತಿಯೊಂದು ಕಾರ್ಯವನ್ನು ನಿಮ್ಮ ಸಂಗಾತಿ ಗಮನಿಸುತ್ತಾರೆ. ಮನದಲ್ಲಿ ಅಂದುಕೊಂಡ ಅಷ್ಟೂ ಭಾವನೆಗಳನ್ನು ಮುಕ್ತವಾಗಿ ಹೇಳಲು ಸಾಧ್ಯವಾಗದೆ ಇರಬಹುದು. ಹೀಗಾಗಿ ಗ್ರೀಟಿಂಗ್​ ಕಾರ್ಡ್ ನೀಡಿ. ಇದರಲ್ಲಿ ನೀವು ಮೊದಲು ಭೇಟಿಯಾದ ಕ್ಷಣ, ಒಟ್ಟಿಗೆ ಕಳೆದ ಅದೆಷ್ಟೋ ಅಮೂಲ್ಯ ಕ್ಷಣಗಳನ್ನು ನೆನಪಿಸಿಕೊಳ್ಳಿ. ಇದು ನಿಮ್ಮ ಮೇಲೆ ನಿಮ್ಮ ಸಂಗಾತಿಗೆ ಉತ್ತಮ ಭಾವನೆ ಬರುವಂತೆ ಮಾಡುತ್ತದೆ.

ಅಡುಗೆ ಮಾಡಿ ಬಡಿಸಿ

ರೋಸ್​ ಡೇಗೆ ನಿಮ್ಮ ಸಂಗಾತಿ ಇಷ್ಟ ಪಡುವ ಅಡುಗೆಯನ್ನು ಮಾಡಿ. ನಂತರ ಅದನ್ನು ನಿಮ್ಮ ಕೈಯಾರೆ ಬಡಿಸಿ. ಇದು ನಿಮ್ಮ ಪ್ರೀತಿಪಾತ್ರರಿಗೆ ಹೆಚ್ಚು ಖುಷಿ ತಂದುಕೊಡುತ್ತದೆ. ಒಂದು ವೇಳೆ ಅಡುಗೆ ಮಾಡಲು ಸಾಧ್ಯವಾಗದೇ ಇದ್ದರೆ ಉತ್ತಮ ರೆಸ್ಟೋರೆಂಟ್​ಗೆ ಕರೆದುಕೊಂಡು ಹೋಗಿ, ನಿಮ್ಮ ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳಿ.

ಪ್ರೀತಿಪಾತ್ರರಿಗಾಗಿ ಸಮಯ ಮೀಸಲಿಡಿ

ಒಂದು ವೇಳೆ ಯಾವುದೇ ಉಡುಗೊರೆ ಕೊಂಡುಕೊಳ್ಳಲು ನಿಮಗೆ ಸಾಧ್ಯವಾಗಲಿಲ್ಲ ಎಂದಾದರೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಸಂಗಾತಿಯ ಜತೆಗೆ ಲಾಂಗ್​ ಡ್ರೈವ್​ ಹೋಗಿ. ಇಲ್ಲ ಸಂಗಾತಿಯೊಂದಿಗೆ ಕಾಲ ಕಳೆಯಿರಿ. ಬಿಡುವಿಲ್ಲದ ಕೆಲಸ, ಒತ್ತಡದ ನಡುವೆ ಸಂಗಾತಿಯ ಅಂತರಾಳದ ಮಾತುಗಳನ್ನು ಆಲಿಸುವುದು ನಿಮಗೆ ಸಾಧ್ಯವಾಗದೆ ಇರಬಹುದು. ರೋಸ್​ ಡೇ ನೆಪದಲ್ಲಿ ಇಬ್ಬರೂ ಕುಳಿತು ಪರಸ್ಪರ ಮಾತನಾಡಿಕೊಳ್ಳಿ.

ಇದನ್ನೂ ಓದಿ: Rose Day 2022: ನಾಳೆಯ ರೋಸ್​ ಡೇಗೆ ಯಾವ ಬಣ್ಣದ ಗುಲಾಬಿ ಹೂವು ಕೊಡಬೇಕು? ಇಲ್ಲಿದೆ ನಿಮ್ಮ ಗೊಂದಲಕ್ಕೆ ಉತ್ತರ

ಪ್ರೇಮಿಗಳ ದಿನಕ್ಕೆ ಏಳು ಹೆಜ್ಜೆಗಳು! ಒಂದೊಂದು ದಿನವು ಮಹತ್ವದ ದಿನ

Published On - 1:23 pm, Sun, 6 February 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ