ಪ್ರೇಮಿಗಳ ದಿನದಂದು ಬ್ಲೂ ಬಿಯರ್ ಪರಿಚಯಿಸಲಿರುವ ಫ್ರೆಂಚ್ ಬ್ರೂವರ್

ಬಿಯರ್ ಗೆ ಹೊಸ ರೂಪವನ್ನು ನೀಡತ್ತಿದೆ. ಬಿಯರ್ ಬಣ್ಣದಲ್ಲಿ ಬದಲಾವಣೆಯನ್ನು ಪ್ರೇಮಿಗಳ ದಿನದಂದು ಮಾಡಲಾಗಿದೆ. ಏಕೆಂದರೆ ಈ ಸಮಯದಲ್ಲಿ ಬಿಯರ್ ಬಣ್ಣ ಮತ್ತು ಹೊಸ ರೂಪವನ್ನು ಪಡೆದರೆ ಅಂದು ಲವರ್ಸ್ ತಮ್ಮ ಪ್ರೇಮಿಗಳ ದಿನವನ್ನು  ಈ ಬಿಯರ್ ಜೊತೆಗೆ ಆಚರಿಸಬಹುದು ಎಂಬ ಕಲ್ಪನೆ. ಹೀಗಾಗಿ ಬಿಯರ್ ನ ಬಣ್ಣ ಬದಲಾವಣೆ ಮಾಡುವ ಬಗ್ಗೆ ಹಾಪಿ ಅರ್ಬನ್ ಬ್ರೂ ಕಂಪನಿಯ ಸಂಸ್ಥಾಪಕ ಸೆಬಾಸ್ಟಿಯನ್ ವರ್ಬೆಕ್ ಹೇಳಿದ್ದಾರೆ. ಈ ಬಗ್ಗೆ ಸಾರ್ವಜನಿಕವಾಗಿಯೂ ಮಾಹಿತಿಯನ್ನು ನೀಡಿದ್ದಾರೆ. ಫ್ರೆಂಚ್ ಬ್ರೂವರ್ ತಮ್ಮ ಬಿಯರ್ ಬಣ್ಣವನ್ನು  ಅನ್ನು ನೀಲಿ ಬಣ್ಣಕ್ಕೆ ಬದಲಾಯಿಸಿದ್ದಾರೆ.

ಪ್ರೇಮಿಗಳ ದಿನದಂದು ಬ್ಲೂ ಬಿಯರ್ ಪರಿಚಯಿಸಲಿರುವ ಫ್ರೆಂಚ್ ಬ್ರೂವರ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 06, 2022 | 1:34 PM

ಬಿಯರ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ, ಬಿಯರ್ ಕುಡಿಯದವರು ಕಡಿಮೆ, ಒಂದು ಕಾಲದಲ್ಲಿ ಬಿಯರ್ ತುಂಬಾ ಜನಪ್ರಿಯತೆಯನ್ನು ಪಡೆದಿತ್ತು ಆದರೆ,  ಇಂದು ಅದು ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿದೆ. ಏಕೆಂದರೆ ಹಲವು ಬ್ರಾಂಡ್ ನಮ್ಮನ್ನು ಆಕರ್ಷಣೆ ಮಾಡುತ್ತಿದೆ.  ಯುವಕರು ಕೂಡ ಇದಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ವಿವಿಧ ಕಂಪನಿಗಳು ವಿಶೇಷವಾದ ಮತ್ತು ಒಳ್ಳೆಯ ಕಿಕ್ ಇರುವ ಬ್ರಾಂಡ್ ಗಳನ್ನು ಪರಿಚಯಿಸಿದೆ . ಹೀಗಾಗಿ ಜನರಲ್ಲಿ  ಬಿಯರ್ ಬಗ್ಗೆ ಅಷ್ಟೊಂದು ಆಸಕ್ತಿಯು ಇಲ್ಲದಾಗಿದೆ. ಈಗ ಅದರ ಹತ್ತಿರಕ್ಕೂ ಸುಳಿಯುತ್ತಿಲ್ಲ. ಬಿಯರ್ ಎಂದರೆ ಒಂದು ಕಾಲದಲ್ಲಿ ಮಜಾ ಮತ್ತು ಕಿಕ್ ನೀಡುವ ಕಾಲವಾಗಿತ್ತು. ಯಾವುದೇ ಸಮಂಭ್ರಕ್ಕೆ ಒಂದು ಬಿಯರ್ ಪಾರ್ಟಿ ಎಂಬುದು ಬೇಕೆ ಬೇಕು,  ಅದರಲ್ಲೂ ಸ್ನೇಹಿತರಿಗೆ ಒಂದು ವಿಷಯ ಸಿಕ್ಕರೇ ಸಾಕು, ಮಗ ಬಿಯರ್ ಪಾರ್ಟಿ ಮಾಡುವ ಎಂದು ಹೇಳುವ ಕಾಲವಾಗಿತ್ತು. ಹೀಗಾಗಿ ಬಿಯರ್ ಎನ್ನುವುದು ಒಂದು ಅಮೃತವಾಗಿತ್ತು. ಬಿಯರ್ ನಲ್ಲಿ  ಆರೋಗ್ಯದ ಗುಟ್ಟು ಇದೆ ಎನ್ನುತ್ತಾರೆ.  ಹೃದಯ ಸಂಬಂಧಿ ಅಥವಾ ಕಿಡ್ನಿ ಸ್ಟೋನ್ ಸಮಸ್ಯೆಗಳು ಇನ್ನೂ ಅನೇಕ ದೇಹಕ್ಕೆ  ಸಂಬಂಧಿಸಿದ ಸಮಸ್ಯೆಗಳಿಗೆ ಒಂದು ರೀತಿಯ ಪರಿಹರವಾಗಿತ್ತು ಎನ್ನುತ್ತಾರೆ.

ಬಿಯರ್ ಕಂಪನಿಗಳು ಪ್ರಸ್ತುತ ತನ್ನ ನಲೆಯನ್ನೇ ಕಳೆದುಕೊಂಡಿದೆ. ಈಗ ಇದರ ಮೇಲೆ ಬೇಡಿಕೆಯು ಕಡಿಮೆ ಆಗುತ್ತ ಬಂದಿದೆ. ಬಿಯರ್ ಬೇಡಿಕೆ ಕಡಿಮೆ ಆಗುತ್ತಲೇ  ಕುಡುಕರ ಮನಸ್ಸಿನಲ್ಲಿಯೂ ತನ್ನ ಸ್ಥಾನಮಾನವನ್ನು  ಕಳೆದುಕೊಂಡಿತ್ತು. ಬಿಯರ್ ಮಾಲಿಕರಿಗೆ ಇದು ದೊಡ್ಡ ಹೊಡೆತವನ್ನು ನೀಡದ್ದು ನಿಜ, ಹಾಗಾಗಿ ಇಂದು ಹೊಸ ರೀತಿಯ ಮತ್ತು ಹೊಸ ಬಣ್ಣವನ್ನು ನೀಡುವ ಕೆಲಸವನ್ನು ಮಾಡುತ್ತಿದೆ. ಹೌದು ಈ ಮೊದಲು ಬಿಯರ್ ಹಳದಿ ನೀರಿನ ರೀತಿಯಲ್ಲಿ ಸ್ವಲ್ಪ ನೋರೆಯನ್ನು ಹೊಂದಿರುವ ಲೈಟ್ ಹಳದಿ ಬಣ್ಣದ ಬಾಟಲಿಯಲ್ಲಿ ಹಾಕಲಾಗುತ್ತಿತ್ತು. ಆದರೆ ಈಗ ಇದರ ಬಣ್ಣ ಮತ್ತು ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿಕೊಂಡಿದೆ.

ಹೌದು  ಬಿಯರ್ ಗೆ ಹೊಸ ರೂಪವನ್ನು ನೀಡತ್ತಿದೆ. ಬಿಯರ್ ಬಣ್ಣದಲ್ಲಿ ಬದಲಾವಣೆಯನ್ನು ಪ್ರೇಮಿಗಳ ದಿನದಂದು ಮಾಡಲಾಗಿದೆ. ಏಕೆಂದರೆ ಈ ಸಮಯದಲ್ಲಿ ಬಿಯರ್ ಬಣ್ಣ ಮತ್ತು ಹೊಸ ರೂಪವನ್ನು ಪಡೆದರೆ ಅಂದು ಲವರ್ಸ್ ತಮ್ಮ ಪ್ರೇಮಿಗಳ ದಿನವನ್ನು  ಈ ಬಿಯರ್ ಜೊತೆಗೆ ಆಚರಿಸಬಹುದು ಎಂಬ ಕಲ್ಪನೆ. ಹೀಗಾಗಿ ಬಿಯರ್ ನ ಬಣ್ಣ ಬದಲಾವಣೆ ಮಾಡುವ ಬಗ್ಗೆ ಹಾಪಿ ಅರ್ಬನ್ ಬ್ರೂ ಕಂಪನಿಯ ಸಂಸ್ಥಾಪಕ ಸೆಬಾಸ್ಟಿಯನ್ ವರ್ಬೆಕ್ ಹೇಳಿದ್ದಾರೆ. ಈ ಬಗ್ಗೆ ಸಾರ್ವಜನಿಕವಾಗಿಯೂ ಮಾಹಿತಿಯನ್ನು ನೀಡಿದ್ದಾರೆ. ಫ್ರೆಂಚ್ ಬ್ರೂವರ್ ತಮ್ಮ ಬಿಯರ್ ಬಣ್ಣವನ್ನು  ಅನ್ನು ನೀಲಿ ಬಣ್ಣಕ್ಕೆ ಬದಲಾಯಿಸಿದ್ದಾರೆ. ನೈಸರ್ಗಿಕವಾಗಿ ಮತ್ತು ವರ್ಣದ್ರವ್ಯವುಳ್ಳ ಬಿಯರ್ ಯನ್ನು ಪರಿಚಯ ಮಾಡಿದ್ದಾರೆ. ಜೊತೆಗೆ ಎಲ್ಲರನ್ನು ಸೆಳೆಯುವಂತೆ ಈ ಬಿಯರ್ ಮಾಡುತ್ತಿದೆ.

ಲೈನ್ ಬ್ರಾಂಡ್ ನ ಅಡಿಯಲ್ಲಿ ಈ ಬಿಯರ್ ನ್ನು ಪರಿಚಯ ಮಾಡಲಾಗಿದೆ. ಇದರ ಜೊತೆಗೆ ನೈಸರ್ಗಿಕವಾಗಿ ಪಾಚಿ ಆಹಾರಗಳನ್ನು ಬಳಸಿ ಈ ಬಿಯರ್ ನ್ನು ಉತ್ಪಾತಿ ಮಾಡಲಾಗಿದೆ. ಈ ಬಿಯರ್ ನ್ನು ಪ್ರೇಮಿಗಳ ದಿನದಂದು ಪರಿಚಯ ಮಾಡಿದ್ದಾರೆ. ಹಾಗಾಗಿ ಬಿಯರ್ ನಲ್ಲಿ ಯಾವುದೇ ಲೋಪವಿಲ್ಲ ಎಂದು ಸಂಸ್ಥೆ ಹೇಳಿದೆ. ಇದರ ಹೈಡ್ರಾನಿಕ್ ಅಂಶಗಳನ್ನು ಉತ್ತಮಪಡಿಸಿದ್ದು.  ಈ ಬಗ್ಗೆ ಬಿಯರ್ ಕಂಪನಿಯು ಮಾರುಕಟ್ಟೆಗೆ ಹೊಸದಾಗಿ ಬಿಯರ್ ನ್ನು ಪರಿಚಯ ಮಾಡಿದೆ.

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ