AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳ ಅತಿಯಾದ ಮೊಬೈಲ್​ ಬಳಕೆಯ ಅಭ್ಯಾಸ ತಪ್ಪಿಸಲು ಹೀಗೆ ಮಾಡಿ

ಒಮ್ಮೆ ಮಕ್ಕಳು ಮೊಬೈಲ್​ ಬಳಸಲು ಹಿಡಿದರೆ ಮನೆಯ ಎಲ್ಲಾ ಭಾಗಗಳಲ್ಲಿ ಕುಳಿತು ಮೊಬೈಲ್​ ನೋಡುತ್ತಾರೆ. ಇದರಿಂದ ಫೋನ್​ನ ಬಳಕೆ ಅತಿಯಾಗುತ್ತದೆ. ಇದಕ್ಕೆ ಕಡಿವಾಣ ಹಾಕಲು ನೋ ಸ್ಕ್ರೀನ್ ಝೋನ್​ ರೂಲ್ಸ್​ ಹಾಕಿ.

ಮಕ್ಕಳ ಅತಿಯಾದ ಮೊಬೈಲ್​ ಬಳಕೆಯ ಅಭ್ಯಾಸ ತಪ್ಪಿಸಲು ಹೀಗೆ ಮಾಡಿ
ಸಾಂಕೇತಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Feb 06, 2022 | 1:03 PM

ಕೊರೊನಾ (Corona) ಸಾಂಕ್ರಾಮಿಕ ಆರಂಭವಾದ ಮೇಲೆ ಲಾಕ್​ ಡೌನ್​, ಕರ್ಫ್ಯೂ ಎಂದು ಮಕ್ಕಳನ್ನು ಮನೆಯಲ್ಲಿಯೇ ಇರಿಸಿಕೊಳ್ಳುವಂತಾಗಿದೆ. ಆನ್ಲೈನ್​ ಕ್ಲಾಸ್ (Online Class)​ ಆರಂಭವಾದ ಮೇಲೆ ಮೊಬೈಲ್​ ಸ್ಕ್ರೀನ್​ಗಳನ್ನು (Mobile Screen) ಮಕ್ಕಳು ನೋಡುವುದು ಅತಿಯಾಗಿದೆ. ಇದರಿಂದ ಮ್ಕಳ ಕಣ್ಣಿನ ದೃಷ್ಟಿಗೂ ಹಾನಿಕಾರಕ. ಅಲ್ಲದೆ ದೈಹಿಕ, ಮಾನಸಿಕ ಆರೋಗ್ಯವೂ ಹದಗೆಡುತ್ತದೆ. ಆನ್ಲೈನ್​ ಕ್ಲಾಸ್​ ಅನಿವಾರ್ಯವಾಗಿದೆ. ಹೀಗಾಗಿ ಆ ಸಂದರ್ಭದಲ್ಲಿ ಮೊಬೈಲ್​, ಟ್ಯಾಬ್​ಗಳನ್ನು ಬಳಸಲೇಬೇಕು. ಅದನ್ನು ಹೊರತುಪಡಿಸಿ ಉಳಿದ ಸಂದರ್ಭಗಳಲ್ಲಿ ಆದಷ್ಟು ಮಕ್ಕಳನ್ನು ಮೊಬೈಲ್​, ಟ್ಯಾಬ್​ನಂತಹ ಗ್ಯಾಜೆಟ್​ಗಳಿಂದ ದೂರವಿಡಿ. ಅಲ್ಲದೆ ಇಡೀ ದಿನ ಮೊಬೈಲ್​ ಅನ್ನು ನೋಡುತ್ತಿರುವುದರಿಂದ ಇತರರೊಂದಿಗೆ ಬೆರೆಯುವ ಮನಸ್ಥಿತಿಯೂ ಮಕ್ಕಳಲ್ಲಿ ಕಡಿಮೆಯಾಗುತ್ತದೆ. ಸಮಾಜದೊಂದಿಗೆ ಬೆರೆಯುವ ಮನಸ್ಥಿತಿ ಕಡಿಮೆಯಾಗಿ ಒಂಟಿಯಾಗಿರುತ್ತಾರೆ. ಕ್ರಮೇಣ ಇದು ಮಾನಸಿಕ ಸಮಸ್ಯೆಯಾಗಿ ಪರಿಣಮಿಸಬಹುದು. ಹೀಗಾಗಿ ನಿಮ್ಮ ಮಕ್ಕಳನ್ನು ಆದಷ್ಟು ಮೊಬೈಲ್​ ಟ್ಯಾಬ್​ಗಳ ಅತಿಯಾದ ಬಳಕೆಯನ್ನು ತಪ್ಪಿಸಲು ಈ ಕ್ರಮಗಳನ್ನು ಅಳವಡಿಸಿಕೊಳ್ಳಿ.

ನೋ ಸ್ಕ್ರೀನ್​ ಝೋನ್​ ನಿಯಮ ಹಾಕಿ: ಒಮ್ಮೆ ಮಕ್ಕಳು ಮೊಬೈಲ್​ ಬಳಸಲು ಹಿಡಿದರೆ ಮನೆಯ ಎಲ್ಲಾ ಭಾಗಗಳಲ್ಲಿ ಕುಳಿತು ಮೊಬೈಲ್​ ನೋಡುತ್ತಾರೆ. ಇದರಿಂದ ಫೋನ್​ನ ಬಳಕೆ ಅತಿಯಾಗುತ್ತದೆ. ಇದಕ್ಕೆ ಕಡಿವಾಣ ಹಾಕಲು ನೋ ಸ್ಕ್ರೀನ್ ಝೋನ್​ ರೂಲ್ಸ್​ ಹಾಕಿ. ಅಂದರೆ ಮನೆಯ ಯಾವ ಯಾವ ಸ್ಥಳಗಳಲ್ಲಿ ಮೊಬೈಲ್​ಅನ್ನು ಬಳಸಬಾರದು ಎಂದು ನಿಯಮ ಮಾಡಿ. ಉದಾಹರಣೆಗೆ ಮಲಗುವ ವೇಳೆ, ಊಟ ಮಾಡುವ ಜಾಗದಲ್ಲಿ ಇತ್ಯಾದಿ. ಇದರಿಂದ ಮಕ್ಕಳು ಅತಿ ಹೆಚ್ಚು ಕಾಲ ಮೊಬೈಲ್​ ಬಳಸುವುದು ತಪ್ಪುತ್ತದೆ.

ಮಕ್ಕಳೊಂದಿಗೆ ಸಮಯ ಕಳೆಯಿರಿ: ಬೆಳೆಯುವ ಮಕ್ಕಳಿಗೆ ಎಲ್ಲವನ್ನೂ ತಿಳಿದುಕೊಳ್ಳಬೇಕೆಂಬ ಹಂಬಲವಿರುತ್ತದೆ. ಹೀಗಾಗಿ ಪೋಷಕರಾದ ನೀವು ಅವರೊಂದಿಗೆ ಹೆಚ್ಚು ಸಮಯಕಳೆಯಿರಿ. ಅವರೊಂದಿಗೆ ಆಟವಾಡಿ. ಅವರನ್ನು ಜನರೊಂದಿಗೆ ಬೆರೆಯಲು ಬಿಡಿ. ಇದರಿಂದ ಸಮಾಜದ ಭಯ ಅವರನ್ನು ಕಾಡುವುದಿಲ್ಲ. ಅಲ್ಲದೆ ನೀವು ಅವರೊಂದಿಗೆನೀವು ಹೆಚ್ಚು ಕಾಲ ಕಳೆದಾಗ ಅವರಿಗೆ ನಿಮ್ಮ ಮೇಲಿನ ನಂಬಿಕೆ ಬೆಳೆಯುತ್ತದೆ. ಮೊಬೈಲ್​ ಬಳಕೆ ಕಡಿಮೆಯಾಗುತ್ತದೆ.

ಅಡುಗೆ ಮಾಡುವಾಗ ನಿಮ್ಮೊಂದಿಗೆ ಸೇರಿಸಿಕೊಳ್ಳಿ: ಅಡುಗೆ ಮಾಡುವುದರಿಂದ ಹೊಸ ವಿಷಯಗಳ ಕಲಿಯಾಗುತ್ತದೆ. ಗಂಡು ಮಕ್ಕಳಾಗಲೀ ಹೆಣ್ಣು ಮಕ್ಕಳಾಗಲೀ ಅಡುಗೆ ಮಾಡುವುದನ್ನು ಕಲಿತುಕೊಳ್ಳುವುದು ಈಗಿನ ದಿನಗಳಲ್ಲಿ ಅಗತ್ಯವಾಗಿದೆ. ಒಟ್ಟಿಗೆ ಅಡುಗೆ ಮಾಡುವುದರಿಂದ ಪ್ರೀತಿ ತುಂಬಿದ ಆಹಾರವೂ ತಯಾರಾಗುತ್ತದೆ ಜತೆಗೆ ಬಾಂಧವ್ಯೂ ಬೆಸೆಯುತ್ತದೆ.

ಹೊರಗಿನ ಪ್ರಪಂಚದ ಅರಿವು ಮೂಡಿಸಿ: ಪ್ರಪಂಚ ವಿಶಾಲವಾಗಿದೆ. ನಿಮ್ಮ ಮಕ್ಕಳಿಗೆ ಒಂದಷ್ಟು ವಿಚಾರಗಳನ್ನು ತಿಳಿಸಿಕೊಡಿ. ನಿಮಗಿರುವ ಹವ್ಯಾಸಗಳನ್ನು ಅವರಿಗೂ ಕಲಿಸಿಕೊಡಿ. ಗಾರ್ಡನಿಂಗ್​, ಹೂಗಿಡಗಳನ್ನು ನೆಡೆವುದು ಹೀಗೆ ಮನಸ್ಸಿಗೆ ಖುಷಿ ನೀಡುವ ಅಭ್ಯಾಸಗಳನ್ನು  ರೂಢಿ ಮಾಡಿಸಿ. ಆಗಾಗ ಹೊರಗಿನ ಪ್ರಪಂಚಕ್ಕೆ ಕರೆದೊಯ್ಯಿರಿ ವರ್ಷಕ್ಕೊಂದಾದರೂ ಹೊಸ ಸ್ಥಳಗಳನ್ನು ತೋರಿಸಿ, ಜೀವನ ಪ್ರೀತಿ ಕಲಿಸಿ. ಮೊಬೈಲ್​ಗಳ ಬಳಕೆ ಕಡಿಮೆ ಮಾಡಿ ನಿಮ್ಮೊಂದಿಗೆ ಇರುವಂತೆ ನೋಡಿಕೊಳ್ಳಿ.

ಜೀವನದ ಗುರಿಯ ಬಗ್ಗೆ ಸ್ಪಷ್ಟತೆ  ನೀಡಿ: ಪ್ರತೀ ಮಕ್ಕಳಿಗೆ ತಾನೂ ಜೀವನದಲ್ಲಿ ಏನಾದರೊಂದು ಸಾಧಿಸಬೇಕು ಎನ್ನುವ ಗುರಿ ಇರಬೇಕು. ಇದನ್ನು ತಂದೆ ತಾಯಿಗಳೇ ಅವರ ಮನಸ್ಸಿನಲ್ಲಿ ಬಿತ್ತಬೇಕು. ಸರಿಯಾದ ಜೀವನದ ಆಯ್ಕೆ ಮಾಡಿಕೊಳ್ಳುವತ್ತ ಅವರಿಗೆ ಸಲಹೆ ನೀಡಬೇಕು.  ಅವರೊಂದಿಗೆ ಕುಳಿತು ಮಾತನಾಡಿ ಆಗ ಮೊಬೈಲ್​ನೆಡೆಗೆ ಅವರ ಗಮನ ಕಡಿಮೆಯಾಗುತ್ತದೆ.

ಇದನ್ನೂ ಓದಿ:

ಪಾಪ್​ಕಾರ್ನ್​ ತಿನ್ನುವುದರಿಂದಲೂ ದೇಹದ ತೂಕ ಇಳಿಸಿಕೊಳ್ಳಬಹುದು; ಇಲ್ಲಿದೆ ಸಂಪೂರ್ಣ ಮಾಹಿತಿ

Daily Devotional: ಯಾರಿಗೆಲ್ಲಾ ಮನೆ ಖರೀದಿ ಯೋಗವಿದೆ ತಿಳಿಯಿರಿ
Daily Devotional: ಯಾರಿಗೆಲ್ಲಾ ಮನೆ ಖರೀದಿ ಯೋಗವಿದೆ ತಿಳಿಯಿರಿ
Daily horoscope: ಇಂದಿನ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯಿರಿ
Daily horoscope: ಇಂದಿನ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯಿರಿ
ಐಎನ್‌ಎಸ್ ವಿಕ್ರಾಂತ್ ಪರಾಕ್ರಮ : ಪಾಕಿಸ್ತಾನದ ಕರಾಚಿ ಬಂದರು ಧ್ವಂಸ
ಐಎನ್‌ಎಸ್ ವಿಕ್ರಾಂತ್ ಪರಾಕ್ರಮ : ಪಾಕಿಸ್ತಾನದ ಕರಾಚಿ ಬಂದರು ಧ್ವಂಸ
34 ಎಸೆತಗಳಲ್ಲಿ 70 ರನ್; ಡೆಲ್ಲಿ ವಿರುದ್ಧ ಪ್ರಿಯಾಂಶ್ ಅಬ್ಬರ
34 ಎಸೆತಗಳಲ್ಲಿ 70 ರನ್; ಡೆಲ್ಲಿ ವಿರುದ್ಧ ಪ್ರಿಯಾಂಶ್ ಅಬ್ಬರ
ಜಮ್ಮುವಿನಲ್ಲಿ ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಭಾರತ
ಜಮ್ಮುವಿನಲ್ಲಿ ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಭಾರತ
ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಕಥೆ ಊಹೆ ಮಾಡಲೂ ಸಾಧ್ಯವಿಲ್ಲ: ಚಂದು ಗೌಡ
ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಕಥೆ ಊಹೆ ಮಾಡಲೂ ಸಾಧ್ಯವಿಲ್ಲ: ಚಂದು ಗೌಡ
ಭಾರತದ ನಡೆಗಳಿಂದ ತತ್ತರಿಸುತ್ತಿದೆ ಪಾಕಿಸ್ತಾನ, ಅದಕ್ಕೆ ಮುಂದೇನು ಕಾದಿದೆಯೋ
ಭಾರತದ ನಡೆಗಳಿಂದ ತತ್ತರಿಸುತ್ತಿದೆ ಪಾಕಿಸ್ತಾನ, ಅದಕ್ಕೆ ಮುಂದೇನು ಕಾದಿದೆಯೋ
ಉಡುಪಿ ಶ್ರೀಕೃಷ್ಣನಿಗೆ ಪರ್ಯಾಯ ಶ್ರೀ, ಪುತ್ತಿಗೆ ಶ್ರೀಗಳಿಂದ ವಿಶೇಷ ಅಲಂಕಾರ
ಉಡುಪಿ ಶ್ರೀಕೃಷ್ಣನಿಗೆ ಪರ್ಯಾಯ ಶ್ರೀ, ಪುತ್ತಿಗೆ ಶ್ರೀಗಳಿಂದ ವಿಶೇಷ ಅಲಂಕಾರ
ಸ್ಥಳಾಂತರಗೊಂಡವರಿಗೆ ಊಟದ ವ್ಯವಸ್ಥೆ ಮಾಡುತ್ತಿರುವ ಸರ್ಕಾರ
ಸ್ಥಳಾಂತರಗೊಂಡವರಿಗೆ ಊಟದ ವ್ಯವಸ್ಥೆ ಮಾಡುತ್ತಿರುವ ಸರ್ಕಾರ
ರಕ್ಷಣೆ ಮಾಡಿ: ಭಾರತದ ಏಟಿಗೆ ಗೋಳೋ ಅಂತ ಅತ್ತ ಪಾಕ್ ಎಂಪಿ, ವಿಡಿಯೋ ನೋಡಿ
ರಕ್ಷಣೆ ಮಾಡಿ: ಭಾರತದ ಏಟಿಗೆ ಗೋಳೋ ಅಂತ ಅತ್ತ ಪಾಕ್ ಎಂಪಿ, ವಿಡಿಯೋ ನೋಡಿ