ವಿಮಾನದಲ್ಲಿ ಪ್ರಯಾಣಿಕರನ್ನು ಸ್ವಾಗತಿಸುತ್ತ, ಅತಿಥಿ ಸತ್ಕಾರ ಮಾಡುವ ಗಗನಸಖಿಯರನ್ನು ಕಂಡಾಗ ಆ ಹುದ್ದೆಯನ್ನ ತಾನು ಅಲಂಕರಿಸಬೇಕೆನ್ನುವ ಕನಸು ಕಾಣುವುದು ಸಹಜ. ಈ ಗಗನಸಖಿ ಎಂಬುದು ಅನೇಕ ಮಹಿಳೆಯರ ನೆಚ್ಚಿನ ಹುದ್ದೆಗಳಲ್ಲಿ ಒಂದು. ನೋಡಲು ಸುಂದರವಾಗಿರುವ ಯುವತಿಯರು, ಉತ್ತಮ ಸಂಬಳ, ಗೌರವ ಹಾಗೂ ವಿದೇಶ ಪ್ರಯಾಣ ಹೋಗಲು ಅವಕಾಶ ಸಿಗುವ ಕಾರಣ ಗಗನಸಖಿಯರಾಗಲು ಬಯಸುವುದಿದೆ. ಆದರೆ ಸುಂದರವಾಗಿದ್ದರೆ ಮಾತ್ರ ಸಾಲದು, ಅಗತ್ಯ ಕೌಶಲ್ಯದೊಂದಿಗೆ ಕೋರ್ಸ್ ಮಾಡಿದರೆ ಕೈ ತುಂಬಾ ಸಂಬಳ ಸಿಗುವ ಉದ್ಯೋಗ ನಿಮ್ಮದಾಗುತ್ತದೆ.
ವೃತ್ತಿಪರ ಗಗನಸಖಿಯಾಗಲು ಪಿಎಚ್‌ಡಿ ಅಥವಾ ಸ್ನಾತಕೋತ್ತರ ಪದವಿ ಪಡೆಯಬೇಕಾಗಿಲ್ಲ. ಪ್ರತಿಷ್ಠಿತ ಸಂಸ್ಥೆಯಿಂದ ವಾಯುಯಾನದಲ್ಲಿ ಪದವಿ ಪಡೆಯುವುದು ಕಡ್ಡಾಯ. ಅದಲ್ಲದೇ, ಸರ್ಟಿಫಿಕೇಟ್ ಕೋರ್ಸ್ ಗಳು, ಡಿಪ್ಲೊಮಾ ಮತ್ತು ಪದವಿ ಕೋರ್ಸ್ ಗಳನ್ನು ಏರ್ ಹೊಸ್ಟೆಸ್ ತರಬೇತಿ, ಕ್ಯಾಬಿನ್ ಕ್ರ್ಯೂ, ಏವಿಯೇಷನ್ ಮ್ಯಾನೇಜ್ ಮೆಂಟ್, ಏರ್ಲೈನ್ಸ್ ಹಾಸ್ಪಿಟಾಲಿಟಿ, ಹಾಸ್ಪಿಟಾಲಿಟಿ ಮತ್ತು ಟ್ರಾವೆಲ್ ಮ್ಯಾನೇಜ್ಮೆಂಟ್, ಏರ್ಲೈನ್ ಪ್ಯಾಸೆಂಜರ್ ಸರ್ವಿಸ್ ಕೋರ್ಸ್ ಮಾಡಬಹುದಾಗಿದೆ. ಅತ್ಯುತ್ತಮ ಸಂವಹನ ಕೌಶಲ್ಯ, ಹಿಂದಿ, ಇಂಗ್ಲಿಷ್ ಭಾಷೆಯನ್ನು ಸಲೀಸಾಗಿ ಮಾತನಾಡುವಂತಿರಬೇಕು. ವಿದೇಶಿ ವಿಮಾನಯಾನ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ವಿದೇಶಿ ಭಾಷೆ ಮಾತನಾಡ ಬಲ್ಲವರಾಗಿರಬೇಕು.
* ನಗು ಮುಖ, ಆಕರ್ಷಕ ವ್ಯಕ್ತಿತ್ವದೊಂದಿಗೆ ಎತ್ತರಕ್ಕೆ ತಕ್ಕದಾದ ತೂಕ ಹೊಂದಿರಬೇಕು.
* ಗಗನಸಖಿಯಾಗಲು ಅಭ್ಯರ್ಥಿಯ ಕನಿಷ್ಠ ವಯಸ್ಸು 17 ವರ್ಷ ಮತ್ತು ಗರಿಷ್ಠ ವಯಸ್ಸು 26 ವರ್ಷ ದಾಟಿರಬಾರದು.
* ಗಗನಸಖಿಯಾಗಬೇಕೆಂದು ಕೊಂಡವರು ದೇಹದ ಮೇಲೆ ಯಾವುದೇ ಟ್ಯಾಟೂ ಹಾಕಿಕೊಂಡಿರಬಹುದು.
* ಗಗನಸಖಿಯ ಎತ್ತರ ಕನಿಷ್ಠ ಐದು ಅಡಿ ಎರಡು ಇಂಚು ಎತ್ತರ ಇರಬೇಕು. ದೈಹಿಕ ಮತ್ತು ಮಾನಸಿಕ ಆರೋಗ್ಯವು ಉತ್ತಮವಾಗಿರಬೇಕು.
* ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆ ಇರಬಾರದು. ಉತ್ತಮ ಆರೋಗ್ಯ ಹೊಂದಿದ್ದರೆ ಫಿಟ್‌ನೆಸ್ ಪರೀಕ್ಷೆಯಲ್ಲಿ ಪಾಸ್ ಆಗಬಹುದು.
* ಈ ಕೆಲಸಕ್ಕೆ ಅರ್ಜಿ ಸಲ್ಲಿಸುವ ಹೆಣ್ಣುಮಕ್ಕಳು ವಿವಾಹಿತರಾಗಿರಬಾರದು. ಮದುವೆಯಾದ ಹುಡುಗಿಯರು ಏರ್ ಹೋಸ್ಟೆಸ್ ಕೆಲಸಕ್ಕೆ ಅರ್ಜಿ ಸಲ್ಲಿಸುವಂತಿಲ್ಲ.
ಇದನ್ನೂ ಓದಿ: ಏರ್ ಹೋಸ್ಟೆಸ್ ಕೆಲಸ ತೊರೆದು ಹಂದಿ ಸಾಕಾಣಿಕೆ ಶುರು ಮಾಡಿದ ಯುವತಿ; ಕಾರಣ ಏನ್ ಗೊತ್ತಾ?
* ಏರ್ ಹೋಸ್ಟೆಸ್ ಆಗಲು ವಿವಿಧ ಸುತ್ತಿನ ಸಂದರ್ಶನಗಳು ಹಾಗೂ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ.
* ಮೊದಲ ಹಂತವು ಲಿಖಿತ ಪರೀಕ್ಷೆಯಾಗಿದೆ. ಈ ಪರೀಕ್ಷೆಯೂ ತರ್ಕ ಮತ್ತು ತಾರ್ಕಿಕ ಸಾಮರ್ಥ್ಯದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
* ಈ ಸುತ್ತಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಗುಂಪು ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾರೆ.
* ಗುಂಪು ಚರ್ಚೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗೆ ವೈಯಕ್ತಿಕ ಸಂದರ್ಶನ ನಡೆಸಲಾಗುತ್ತದೆ.
* ಆ ಬಳಿಕ ಫಿಟ್‌ನೆಸ್ ಪರೀಕ್ಷೆ ಸೇರಿದಂತೆ, ಕಣ್ಣಿನ ಸೈಟ್ ಅನ್ನು ಸಹ ಪರಿಶೀಲಿಸಲಾಗುತ್ತದೆ. ಕನಿಷ್ಟ ಕಣ್ಣಿನ ದೃಷ್ಟಿ 6/9 ಆಗಿರಬೇಕು. ಈ ಎಲ್ಲಾ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗೆ ಏರ್ ಹೋಸ್ಟೆಸ್ ತರಬೇತಿ ನೀಡಲಾಗುತ್ತದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ