AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Republic Day 2025: ಗಣರಾಜ್ಯೋತ್ಸವ ನೋಡೋದಕ್ಕೆ ದಿಲ್ಲಿಗೆ ಹೋಗುವವರು ಅಲ್ಲಿನ ಈ ಚಾಟ್ಸ್ ತಿನ್ನದೇ ಬರಬೇಡಿ

Republic Day 2025: ಗಣರಾಜ್ಯೋತ್ಸವ ಸಂದರ್ಭ ದೆಹಲಿಯ ಇಂಡಿಯಾ ಗೇಟ್ ಬಳಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ದೇಶಭಕ್ತಿ ಹೆಚ್ಚಿಸುವ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದನ್ನು ನೋಡಲು ಸಾವಿರಾರು ಜನ ಬೇರೆ ಬೇರೆ ಊರುಗಳಿಂದ ದಿಲ್ಲಿಗೆ ಹೋಗುತ್ತಾರೆ. ಇದು ಒಂದು ರೀತಿಯ ಚಿಕ್ಕ ಪ್ರವಾಸ ಇದ್ದಂತೆ. ನೀವು ಕೂಡ ದಿಲ್ಲಿಗೆ ಹೋಗುವವರಾಗಿದ್ದರೆ ಅಲ್ಲಿಂದ ಬರುವಾಗ ದಿಲ್ಲಿಯ ಪ್ರಸಿದ್ಧ ಬೀದಿ ಆಹಾರಗಳನ್ನು ತಿಂದು ಬನ್ನಿ. ಪ್ರಯಾಣ ಎಲ್ಲಿಗೆ ಇರಲಿ ಆ ಜನರ ಭಾಷೆಯಾ ಬಗ್ಗೆ ತಿಳಿದು, ಅಲ್ಲಿನ ಆಹಾರಗಳನ್ನು ಸವಿಯಲೇ ಬೇಕು. ಹಾಗಾಗಿ ಗಣರಾಜ್ಯೋತ್ಸವ ನೋಡಲು ದಿಲ್ಲಿಗೆ ಪ್ರಯಾಣ ಬೆಳೆಸುವವರು ನಾವು ಹೇಳುವ ಈ ಆಹಾರಗಳ ರುಚಿ ನೋಡಿ ಬನ್ನಿ.

Republic Day 2025: ಗಣರಾಜ್ಯೋತ್ಸವ ನೋಡೋದಕ್ಕೆ ದಿಲ್ಲಿಗೆ ಹೋಗುವವರು ಅಲ್ಲಿನ ಈ ಚಾಟ್ಸ್ ತಿನ್ನದೇ ಬರಬೇಡಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Jan 24, 2025 | 11:15 AM

Share

ನಿಮಗೆ ತಿಳಿದಿರಬಹುದು ಜನವರಿ 26, ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾದ ದಿನ. ಈ ದಿನ ಸವಿನೆನಪಿಗಾಗಿ ಪ್ರತಿ ವರ್ಷ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತೇವೆ. ಗಣರಾಜ್ಯೋತ್ಸವ ಸಂದರ್ಭ ದೆಹಲಿಯ ಇಂಡಿಯಾ ಗೇಟ್ ಬಳಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ದೇಶಭಕ್ತಿ ಹೆಚ್ಚಿಸುವ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದನ್ನು ನೋಡಲು ಸಾವಿರಾರು ಜನ ಬೇರೆ ಬೇರೆ ಊರುಗಳಿಂದ ದಿಲ್ಲಿಗೆ ಹೋಗುತ್ತಾರೆ. ಇದು ಒಂದು ರೀತಿಯ ಚಿಕ್ಕ ಪ್ರವಾಸ ಇದ್ದಂತೆ. ನೀವು ಕೂಡ ದಿಲ್ಲಿಗೆ ಹೋಗುವವರಾಗಿದ್ದರೆ ಅಲ್ಲಿಂದ ಬರುವಾಗ ದಿಲ್ಲಿಯ ಪ್ರಸಿದ್ಧ ಬೀದಿ ಆಹಾರಗಳನ್ನು ತಿಂದು ಬನ್ನಿ. ಪ್ರಯಾಣ ಎಲ್ಲಿಗೆ ಇರಲಿ ಆ ಜನರ ಭಾಷೆಯಾ ಬಗ್ಗೆ ತಿಳಿದು, ಅಲ್ಲಿನ ಆಹಾರಗಳನ್ನು ಸವಿಯಲೇ ಬೇಕು. ಹಾಗಾಗಿ ಗಣರಾಜ್ಯೋತ್ಸವ ನೋಡಲು ದಿಲ್ಲಿಗೆ ಪ್ರಯಾಣ ಬೆಳೆಸುವವರು ನಾವು ಹೇಳುವ ಈ ಆಹಾರಗಳ ರುಚಿ ನೋಡಿ ಬನ್ನಿ.

ಸಾಮಾನ್ಯವಾಗಿ ಊರು ದೊಡ್ಡದಿರಲಿ, ಚಿಕ್ಕದಿರಲಿ ಅಲ್ಲಿನ ಸ್ಥಳೀಯ ಖಾದ್ಯಗಳು ವಿಭಿನ್ನ ರುಚಿಯನ್ನು ನೀಡುತ್ತವೆ. ಊರು ಬದಲಾದಂತೆ ಅಲ್ಲಿನ ಆಹಾರ ಪದ್ಧತಿಗಳು ಕೂಡ ಬದಲಾಗುತ್ತದೆ. ಇನ್ನು ದೆಹಲಿಯಲ್ಲಿ ಪ್ರಸಿದ್ಧವಾಗಿರುವ ಸ್ಥಳೀಯ ಆಹಾರಗಳಿವೆ. ಇವು ನಿಮಗೆ ಅಲ್ಲಿನ ಸೊಗಡನ್ನು ತಿಳಿಸುತ್ತದೆ. ನಿಮಗೆ ತಿಳಿದಿರಬಹುದು ದಿಲ್ಲಿಯಲ್ಲಿ ಚಾಟ್ ಗಳನ್ನು ತುಂಬಾ ಚೆನ್ನಾಗಿ ಮಾಡುತ್ತಾರೆ. ಅಲ್ಲಿಂದ ಬಂದಂತಹ ಎಷ್ಟೋ ಜನ ಬೆಂಗಳೂರು ಸೇರಿದಂತೆ ನಾನಾ ಕಡೆಗಳಲ್ಲಿ ಚಾಟ್ ಗಳನ್ನು ಮಾಡುವುದನ್ನು ನೀವು ನೋಡಿರಬಹುದು. ಹಾಗಾಗಿ ದಿಲ್ಲಿಗೆ ಹೋದಾಗ ವಿವಿಧ ರೀತಿಯ ಚಾಟ್ ಗಳ ರುಚಿ ನೋಡಿ ಬನ್ನಿ. ಅದರಲ್ಲಿಯೂ ಗರಿಗರಿಯಾದ ಆಲೂ ಟಿಕ್ಕಿ, ಪಾನಿ ಪುರಿ ಮತ್ತು ಪಾಪಡಿ ಚಾಟ್, ಚಾಂದನಿ ಚೌಕ್ ನ ನಟರಾಜ್ ಚಾಟ್ ಭಂಡಾರ್ ಅಥವಾ ಬಂಗಾಳಿ ಮಾರುಕಟ್ಟೆಯ ನಾಥುಸ್ ಸ್ವೀಟ್ಸ್ ಗೆ ಹೋಗಿ ಬರುವುದನ್ನು ಮರೆಯಬೇಡಿ.

ಇದನ್ನೂ ಓದಿ:  ಒಂದು ತಿಂಗಳು ಚಹಾ ಕುಡಿಯುವುದನ್ನು ನಿಲ್ಲಿಸಿದರೆ, ಏನಾಗುತ್ತೆ?

ಚೋಲೆ ಬಟೂರ

ಉತ್ತರ ಭಾರತದ ಉಪಾಹಾರವೆಂದೇ ಪ್ರಸಿದ್ಧಿಯಾಗಿರುವ ಚೋಲೆ ಬಟೂರವನ್ನು ನೀವು ದಿಲ್ಲಿಗೆ ಹೋದಾಗ ಕಡ್ಡಾಯವಾಗಿ ಸವಿಯಬೇಕು. ಪಹರ್ಗಂಜ್ನಲ್ಲಿರುವ ಸೀತಾ ರಾಮ್ ದಿವಾನ್ ಚಂದ್ ಅವರು ರುಚಿ ರುಚಿಯಾದ ಚೋಲೆ ಬಟೂರ ನೀಡುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಹಾಗಾಗಿ ದಿಲ್ಲಿಗೆ ಹೋಗುವವರು ಅಲ್ಲಿಗೊಮ್ಮೆ ಹೋಗಿ ಆ ಖಾದ್ಯವನ್ನು ಸವಿಯಬೇಕು.

ಕಥಿ ರೋಲ್ಸ್

ಇವುಗಳನ್ನು ನೀವು ದಿಲ್ಲಿಯಲ್ಲಿ ಟ್ರೈ ಮಾಡಲೇಬೇಕು. ಏಕೆಂದರೆ ಇವು ಅಲ್ಲಿನ ವಿಶೇಷ ತಿಂಡಿಗಳಾಗಿವೆ. ಅದರಲ್ಲಿಯೂ ಕೊನಾಟ್ ಪ್ಲೇಸ್ ನಲ್ಲಿರುವ ಖಾನ್ ಚಾಚಾ ಬಾಯಿಗೆ ನೀರೂರಿಸುವ ಕಥಿ ರೋಲ್ ಗಳಿಗೆ ಹೆಸರುವಾಸಿಯಾದ ಸ್ಥಳವಾಗಿದೆ. ಜೊತೆಗೆ ಚಾಂದನಿ ಚೌಕ್ ನಲ್ಲಿಯೂ ಕಥಿ ರೋಲ್ಸ್ ತುಂಬಾ ಚೆನ್ನಾಗಿ ಸಿಗುತ್ತದೆ.

ದಹಿ ಭಲ್ಲಾ

ತಂಪಾದ ಮತ್ತು ದೇಹಕ್ಕೆ ಉಲ್ಲಾಸ ನೀಡುವ ಖಾದ್ಯವಾದ ದಹಿ ಭಲ್ಲಾ, ಮೊಸರಿನಲ್ಲಿ ಬೇಳೆಕಾಳು ಕುಂಬಳಕಾಯಿಯನ್ನು ನೆನೆಸಿ ಮಾಡುವಂತಹ ಭಕ್ಷ್ಯವಾಗಿದೆ. ಚಾಂದನಿ ಚೌಕ್ ನ ನಟರಾಜ್ ದಹಿ ಭಲ್ಲೆ ವಾಲಾದಲ್ಲಿ ಇದನ್ನು ಪ್ರಯತ್ನಿಸಿ. ಪ್ರತಿ ಬೈಟಿಗೂ ಒಳ್ಳೆಯ ರುಚಿ ನೀಡುವುದರಲ್ಲಿ ಸಂಶಯವಿಲ್ಲ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ