ಏರ್‌ ಹೋಸ್ಟೆಸ್‌ ಕೆಲಸ ತೊರೆದು ಹಂದಿ ಸಾಕಾಣಿಕೆ ಶುರು ಮಾಡಿದ ಯುವತಿ; ಕಾರಣ ಏನ್‌ ಗೊತ್ತಾ?

ಬಹುತೇಕ ಹೆಚ್ಚಿನವರು ಕೈತುಂಬಾ ಸಂಬಳ ಸಿಗುವ ಉದ್ಯೋಗ ಸಿಕ್ಕರೆ ಸಾಕು ಎಂದು ಅಂದುಕೊಳ್ಳುತ್ತಾರೆ. ಅಂತಹವರ ನಡುವೆ ಇಲ್ಲೊಬ್ಬಳು ಉತ್ತಮ ಸಂಬಳ ಸಿಗುತ್ತಿದ್ದ ಕೆಲಸವನ್ನು ತೊರೆದು ಹಂದಿ ಸಾಕಾಣಿಕೆ ಶುರು ಮಾಡಿದ್ದಾಳೆ. ತನ್ನ ಹೆತ್ತವರು ಮತ್ತು ಕುಟುಂಬದವರೊಂದಿಗೆ ಉತ್ತಮ ಸಮಯವನ್ನು ಕಳೆಯಬೇಕು ಎನ್ನುವ ಉದ್ದೇಶದಿಂದ ಏರ್‌ ಹೋಸ್ಟೆಸ್‌ ಕೆಲಸವನ್ನು ತೊರೆದು ಇದೀಗ ಯುವತಿ ಹಂದಿ ಫಾರ್ಮ್‌ ನಡೆಸಿಕೊಂಡು ಹೋಗುತ್ತಿದ್ದಾಳೆ. ಈ ಕುರಿತ ಸುದ್ದಿಯೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಏರ್‌ ಹೋಸ್ಟೆಸ್‌ ಕೆಲಸ ತೊರೆದು ಹಂದಿ ಸಾಕಾಣಿಕೆ ಶುರು ಮಾಡಿದ ಯುವತಿ; ಕಾರಣ ಏನ್‌ ಗೊತ್ತಾ?
ಏರ್‌ ಹೋಸ್ಟೆಸ್‌ ಕೆಲಸ ತೊರೆದು ಹಂದಿ ಸಾಕಾಣಿಕೆ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 23, 2025 | 11:15 AM

ಹೆಚ್ಚಿನವರು ನಮಗೆ ಕೈತುಂಬಾ ಸಂಬಳ ಸಿಗುವ ಉತ್ತಮ ಸಿಕ್ಕಿದ್ರೆ ಸಾಕಪ್ಪಾ ಎಂದು ಬಯಸುತ್ತಾರೆ. ಇನ್ನೂ ಕೆಲವರು ಉತ್ತಮ ಸಂಬಳ ಸಿಗುವ ಸಿಗುವ ಕೆಲಸವನ್ನೇ ತೊರೆದು ಕೃಷಿ ಇನ್ನಿತರೆ ಸ್ವಂತ ಉದ್ಯಮವನ್ನು ಆರಂಭಿಸಿ ಯಶಸ್ವಿಯಾದವರಿದ್ದಾರೆ. ಅದೇ ರೀತಿ ಇಲ್ಲೊಬ್ಬಳು ಯುವತಿ ಉತ್ತಮ ಸಂಬಳ ಸಿಗುತ್ತಿದ್ದ ಕೆಲಸವನ್ನು ತೊರೆದು ಹಂದಿ ಸಾಕಾಣಿಕೆ ಶುರು ಮಾಡಿದ್ದಾಳೆ. ತನ್ನ ಹೆತ್ತವರು ಮತ್ತು ಕುಟುಂಬದವರೊಂದಿಗೆ ಉತ್ತಮ ಸಮಯವನ್ನು ಕಳೆಯಬೇಕು ಎನ್ನುವ ಉದ್ದೇಶದಿಂದ ಏರ್‌ ಹೋಸ್ಟೆಸ್‌ ಕೆಲಸವನ್ನು ತೊರೆದು ಇದೀಗ ಯುವತಿ ಹಂದಿ ಫಾರ್ಮ್‌ ನಡೆಸಿಕೊಂಡು ಹೋಗುತ್ತಿದ್ದಾಳೆ. ಈ ಕುರಿತ ಸುದ್ದಿಯೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಚೀನಾದ ಶಾಂಘೈನ ಯಾಂಗ್‌ ಯಾಂಕ್ಸಿ ಎಂಬ 27 ವರ್ಷ ವಯಸ್ಸಿನ ಯುವತಿ ಫ್ಲೈಟ್‌ ಅಟೆಂಡೆಂಟ್‌ ಕೆಲಸವನ್ನು ಬಿಟ್ಟು ಹಂದಿ ಸಾಕಣೆ ಮಾಡುತ್ತಿದ್ದಾಳೆ. ಮೂಲತಃ ಈಶಾನ್ಯ ಚೀನಾದ ಹೈಲಾಂಗ್‌ಜಿಯಾಂಗ್‌ ಪ್ರಾಂತ್ಯದಿಂ ಬಂದ ಈಕೆ ಉನ್ನತ ವಿಮಾನಯಾನ ಕಂಪೆನಿಯಲ್ಲಿ 5 ವರ್ಷಗಳ ಕಾಲ ಗಗನಸಖಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು. ಆದರೆ ನಂತರ ಆಕೆ ಈ ಕೆಲಸವನ್ನು ತೊರೆದು ಹಂದಿ ಸಾಕಣೆ ಕೆಲಸವನ್ನು ಶುರು ಮಾಡಿದ್ದಾಳೆ. ಹೌದು ಈಕೆ ತನ್ನ ಸಂಬಂಧಿಕರ ಜಮೀನಿನಲ್ಲಿ ಹಂದಿ ಫಾರ್ಮ್‌ ಒಂದನ್ನು ನಡೆಸುತ್ತಿದ್ದಾಳೆ.

Chinese Woman Quits Air Hostess (1)

Chinese Woman Quits Air Hostess (1)

ಏರ್‌ ಹೋಸ್ಟೆಸ್‌ ಕೆಲಸ ತೊರೆಯುವ ಹಿಂದಿನ ಕಾರಣವೇಣು?

ತನ್ನ ಹೆತ್ತವರು ಮತ್ತು ಕುಟುಂಬದವರೊಂದಿಗೆ ಉತ್ತಮ ಸಮಯವನ್ನು ಕಳೆಯಬೇಕು ಎನ್ನುವ ಉದ್ದೇಶದಿಂದ ಏರ್‌ ಹೋಸ್ಟೆಸ್‌ ಕೆಲಸವನ್ನು ತೊರೆದು ಇದೀಗ ಯುವತಿ ಹಂದಿ ಫಾರ್ಮ್‌ ನಡೆಸಿಕೊಂಡು ಹೋಗುತ್ತಿದ್ದಾಳೆ. ಜೊತೆಗೆ ಆಕೆಯ ಪೋಷಕರು ಯಾವಾಗಲು ಒಳ್ಳೆಯ ಸುದ್ದಿಗಳನ್ನು ಹೇಳುತ್ತಿದ್ದರು, ಆದರೆ ಕೆಟ್ಟ ಅಥವಾ ಬೇಜಾರಿನ ವಿಷಯಗಳನ್ನು ಮರೆ ಮಾಚುತ್ತಿದ್ದರು. ಇದೆಲ್ಲಾ ನನಗೆ ಗೊತ್ತೇ ಆಗುತ್ತಿರಲಿಲ್ಲ. ಈ ಕಾರಣದಿಂದಾಗಿ ಹೆತ್ತವರಿಗಾಗಿ ನಾನು ಅವರ ಬಳಿಯಿದ್ದೇ ಕೆಲಸ ಮಾಡಲು ನಿರ್ಧರಿಸಿದೆ ಎಂದು ಯುವತಿ ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ: ಅಂದು ನಾಟಕದಲ್ಲಿ ಗಂಡ ಹೆಂಡ್ತಿ ಪಾತ್ರ, 20 ವರ್ಷದ ಬಳಿಕ ರಿಯಲ್ ಆಗಿ ಮದುವೆಯಾದ ಜೋಡಿಯ ಕಥೆಯಿದು

ಏಪ್ರಿಲ್‌ 2023 ರಲ್ಲಿ ಯಾಂಗ್‌ ಸಂಬಂಧಿಕರ ಜಮೀನಿನಲ್ಲಿ ಹಂದಿ ಫಾರ್ಮ್‌ ಶುರು ಮಾಡಿದಳು. ಈಗ ಆಕೆ ಹಂದಿಗಳ ಆಹಾರ ತಯಾರಿಸುವುದರಿಂದ ಹಿಡಿದು ಅವುಗಳನ್ನು ಸಾಕುವುದರವರೆಗೆ ಪ್ರತಿಯೊಂದು ಕೆಲಸವನ್ನು ಮಾಡುತ್ತಿದ್ದಾಳೆ. ಜೊತೆಗೆ ಆಕೆ ತನ್ನ ಹಳ್ಳಿ ಬದುಕಿಗೆ ಸಂಬಂಧಿಸಿದ ವ್ಲಾಗ್‌ಗಳನ್ನು ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾಳೆ.

ಹಂದಿ ಸಾಕಾಣಿಕೆ, ಇತರೆ ಜಾನುವಾರುಗಳನ್ನು ಮಾರಾಟ ಮಾಡುವುದರಿಂದ ಹಿಡಿದು ಸೋಷಿಯಲ್‌ ಮೀಡಿಯಾದದಿಂದ ಕಳೆದ ಎರಡು ತಿಂಗಳಲ್ಲಿ 2000,000 ಯುವಾನ್‌ ($27,000 ಡಾಲರ್)‌ ಸಂಪಾದನೆ ಮಾಡಿದ್ದೇನೆ ಎಂದು ಯಾಂಗ್‌ ಹೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲದೆ ಭವಿಷ್ಯದಲ್ಲಿ ಹಂದಿ ಫಾರ್ಮ್‌ ವಿಸ್ತರಿಸುವುದು ಮಾತ್ರವಲ್ಲದೆ ಹೋಟೆಲ್‌ ಉದ್ಯಮವನ್ನು ಆರಂಭಿಸಲು ಇಚ್ಛಿಸುತ್ತೇನೆ ಎಂದು ಹೇಳಿದ್ದಾಳೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:13 am, Thu, 23 January 25