ಅಂದು ನಾಟಕದಲ್ಲಿ ಗಂಡ ಹೆಂಡ್ತಿ ಪಾತ್ರ, 20 ವರ್ಷದ ಬಳಿಕ ರಿಯಲ್ ಆಗಿ ಮದುವೆಯಾದ ಜೋಡಿಯ ಕಥೆಯಿದು

ಕೆಲವು ಪ್ರೇಮ ಕಥೆಗಳೇ ಹಾಗೆ, ಎಲ್ಲರ ಹೃದಯಕ್ಕೂ ಹತ್ತಿರವಾಗುತ್ತದೆ. ಹೌದು, ಶಿಶುವಿಹಾರದಲ್ಲಿ ನಡೆದ ನಾಟಕದಲ್ಲಿ ಗಂಡ ಮತ್ತು ಹೆಂಡತಿಯ ಪಾತ್ರ ನಿರ್ವಹಿಸಿದ್ದ ಪುಟಾಣಿಗಳು, 20 ವರ್ಷಗಳ ನಂತರ ನಿಜ ಜೀವನದಲ್ಲಿ ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಿಂಡರ್ ಗಾರ್ಟನ್ ಶಾಲೆಯಲ್ಲಿ ಆಯೋಜಿಸಿದ್ದ ನಾಟಕದಲ್ಲಿ ಈ ಮದುವೆ ನಡೆದಿತ್ತು. ಈ ವೀಡಿಯೊ ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಇವರಿಬ್ಬರ ಈ ಮುದ್ದಾದ ಪ್ರೇಮಕಥೆಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ಅಂದು ನಾಟಕದಲ್ಲಿ ಗಂಡ ಹೆಂಡ್ತಿ ಪಾತ್ರ, 20 ವರ್ಷದ ಬಳಿಕ ರಿಯಲ್ ಆಗಿ ಮದುವೆಯಾದ ಜೋಡಿಯ ಕಥೆಯಿದು
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 22, 2025 | 1:54 PM

ಕೆಲವು ಪ್ರೇಮಕಥೆಗಳೆಂದರೆ ಹಾಗೇ, ಎಂಥವರ ಮೈಮನವನ್ನೂ ಬೆಚ್ಚನೆಯ ಭಾವದಲ್ಲಿ ಒದ್ದೆಯಾಗಿಸುತ್ತದೆ. ಚೀನಾದಲ್ಲಿ ನಡೆದ ವಿಶೇಷ ಪ್ರೇಮ ವಿವಾಹವೊಂದು ಇದಕ್ಕೆ ಸಾಕ್ಷಿಯೆನ್ನುವಂತಿದೆ. ಹೌದು, ಶಿಶುವಿಹಾರದ ನಡೆದ ನಾಟಕದಲ್ಲಿ ಗಂಡ ಹೆಂಡ್ತಿಯಾಗಿದ್ದ ಪಾತ್ರ ನಿರ್ವಹಿಸಿದ ಪುಟಾಣಿ ಮಕ್ಕಳು, 20 ವರ್ಷದ ನಂತರ ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುವಾಂಗ್‌ಡಾಂಗ್ ಪ್ರಾಂತ್ಯದ ಚಾಝೌ ನಗರದಲ್ಲಿ ಜನವರಿ 7 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಈ ಮುದ್ದಾದ ಜೋಡಿಯ ಪ್ರೇಮಕಥೆ ಎಲ್ಲರ ಗಮನ ಸೆಳೆದಿದೆ.

20 ವರ್ಷಗಳ ಹಿಂದೆ ಶಿಶುವಿಹಾರದ ನಾಟಕದಲ್ಲಿ “ಗಂಡ ಮತ್ತು ಹೆಂಡತಿ”ಯಾಗಿ ಒಟ್ಟಿಗೆ ಪಾತ್ರ ನಿರ್ವಹಿಸಿದ್ದ ಜೋಡಿಯೂ ಇತ್ತೀಚೆಗಷ್ಟೇ ರಿಯಲ್ ಜೋಡಿಯಾಗಿ ಹೊಸ ಜೀವನವನ್ನು ಆರಂಭಿಸಿದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಈ ಯುವಕನ ಹೆಸರು ಝೆಂಗ್, ಆದರೆ ಯುವತಿಯ ಹೆಸರನ್ನು ಬಹಿರಂಗ ಪಡಿಸಿಲ್ಲ. ಆದರೆ ಇವರಿಬ್ಬರೂ ಇಪ್ಪತ್ತು ವರ್ಷಗಳ ಹಿಂದೆ ಕಿಂಡರ್ ಗಾರ್ಟನ್ ಶಾಲೆಯಲ್ಲಿ ಆಯೋಜಿಸಿದ್ದ ನಾಟಕದಲ್ಲಿ ಗಂಡ ಹೆಂಡತಿಯ ಪಾತ್ರವನ್ನು ನಿರ್ವಹಿಸಿದ್ದರು. ಅಂದು ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಪುಟಾಣಿ ಹುಡುಗಿಯೂ ಬಿಳಿ ಗೌನ್ ತೊಟ್ಟಿದ್ದರೆ, ಶಾರ್ಟ್ ಕೋಟ್ ತೊಟ್ಟ ಹುಡುಗ ತನ್ನ ಪಾತ್ರವನ್ನು ಅದ್ಬುತವಾಗಿ ನಿರ್ವಹಿಸಿ ಎಲ್ಲರಿಂದಲೂ ಚಪ್ಪಾಳೆಗಿಟ್ಟಿಸಿಕೊಂಡಿದ್ದರು.

ಆ ಬಳಿಕ ಮಕ್ಕಳಿಬ್ಬರೂ ಶಾಲೆಯನ್ನು ಬದಲಾಯಿಸಬೇಕಾಯಿತು, ತಮ್ಮ ವಿದ್ಯಾಭ್ಯಾಸಕ್ಕಾಗಿ ಬೇರೆಡೆಗೆ ತೆರಳಬೇಕಾಯಿತು. ಆದರೆ 2022 ರಲ್ಲಿ ಝೆಂಗ್‌ನ ತನ್ನ ಬಾಲ್ಯದ ಸ್ನೇಹಿತರನ್ನು ಭೇಟಿಯಾದ ಸಂದರ್ಭದಲ್ಲಿ ತನ್ನ ಅಂದಿನ ನೆನಪುಗಳನ್ನು ಮೆಲುಕು ಹಾಕಿಕೊಂಡರು. ಅದೇ ವೇಳೆ ಝೆಂಗ್ ತಾನು ಬಾಲ್ಯದಲ್ಲಿ ಮಾಡಿದ್ದ ಈ ನಾಟಕದ ವಿಡಿಯೋವನ್ನು ವೀಕ್ಷಿಸಿದ್ದು, ಝೆಂಗ್ ತಾಯಿ ಕೂಡ ಆ ವಿಡಿಯೋ ನೋಡಿ ಶಾಕ್ ಆಗಿದ್ದಾರೆ. ಆ ತಕ್ಷಣವೇ ನಾಟಕದಲ್ಲಿ ಝೆಂಗ್‌ನ ಜೊತೆಗಾರ್ತಿಯಾಗಿ ನಟಿಸಿದ ಹುಡುಗಿ ಈಗ ಏನು ಮಾಡುತ್ತಿದ್ದಾಳೆ ಎಂದು ಕಂಡು ಹಿಡಿಯಲು ಮಗನಿಗೆ ಸಲಹೆ ನೀಡಿದ್ದಾರೆ.

ಅಷ್ಟೇ ಅಲ್ಲದೇ ತನ್ನ ಮಗ ಇನ್ನು ಅವಿವಾಹಿತರಾಗಿರುವುಕ್ಕೆ ಬೇಸರ ವ್ಯಕ್ತಪಡಿಸಿ, ಆಕೆಯೊಂದಿಗೆ ಡೇಟಿಂಗ್ ಮಾಡಬಹುದೇ ಎಂದು ಸಲಹೆ ನೀಡಿದ್ದಾರೆ. ತಾಯಿಯ ಮಾತಿಗೆ ಒಪ್ಪಿಗೆ ಸೂಚಿಸಿದ ಝೆಂಗ್ ತನ್ನ ಶಿಶುವಿಹಾರದ ಶಿಕ್ಷಕರ ಸಹಾಯ ಪಡೆದುಕೊಂಡು ಆಕೆಯನ್ನು ಸಂಪರ್ಕಿಸಿದ್ದಾನೆ. ಇಬ್ಬರೂ ಪರಸ್ಪರ ಭೇಟಿಯಾಗಿದ್ದು, ಇಬ್ಬರ ನಡುವಿನ ಸ್ನೇಹವು ಪ್ರೀತಿಗೆ ತಿರುಗಿದೆ. ಕೊನೆಗೆ ಇಬ್ಬರೂ ಮದುವೆಯಾಗಲು ನಿರ್ಧಾರ ಮಾಡಿದ್ದಾರೆ. ಈ ಸ್ವೀಟ್ ಲವ್ ಸ್ಟೋರಿಯ ವೀಡಿಯೋವನ್ನು ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಂತೆ ವೈರಲ್ ಆಗಿದೆ.

ಇದನ್ನೂ ಓದಿ: ಟ್ರೈನ್‌ನಲ್ಲಿ ಕೋಲ್ಡ್‌ ಪ್ಲೇ ಸಾಂಗ್ಸ್‌ ಹಾಡಿದ ಪ್ರಯಾಣಿಕರು; ವಿಡಿಯೋ ವೈರಲ್‌

ಈಗಾಗಲೇ ಈ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಕಂಡಿದ್ದು, ನೆಟ್ಟಿಗರು ಕಾಮೆಂಟ್ ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರೊಬ್ಬರು, ‘ಬಾಲ್ಯದ ಸಂಬಂಧಗಳು ಎಂದಿಗೂ ಕೊನೆಗೊಳ್ಳುವುದಿಲ್ಲ’ ಎಂದಿದ್ದಾರೆ. ಮತ್ತೊಬ್ಬರು, ‘ಹೊಸ ಜೀವನಕ್ಕೆ ಕಾಲಿಟ್ಟ ರಿಯಲ್ ಜೋಡಿಗೆ ಶುಭ ಹಾರೈಸಿದ್ದಾರೆ’. ಇನ್ನೊಬ್ಬರು, ‘ದೇವರು ಹಣೆಯಲ್ಲಿ ಇಂತಹವರ ಹೆಸರು ಬರೆದಿದ್ದರೆ ಅದನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ’ ಎಂದು ಕಾಮೆಂಟ್ ಮಾಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓಡದಲು ಇಲ್ಲಿ ಕ್ಲಿಕ್ ಮಾಡಿ

Published On - 1:53 pm, Wed, 22 January 25