Viral: ಉಚಿತ ಭಾಗ್ಯವಲ್ಲ, ಉದ್ಯೋಗ ಮುಖ್ಯ… ವೈರಲ್‌ ಆಗ್ತಿದೆ ಆಟೋ ಹಿಂದೆ ಬರೆದ ಅರ್ಥಪೂರ್ಣ ಸಾಲು

ಕೆಲವೊಬ್ರು ಆಟೋ ಡ್ರೈವರ್ಸ್‌ ತಮ್ಮ ಆಟೋದಲ್ಲಿ ವಿಶಿಷ್ಟವಾದ ಕೋಟ್ಸ್‌ ಅಥವಾ ಸಾಲುಗಳನ್ನು ಬರೆದಿರುತ್ತಾರೆ. ಆಟೋಗಳ ಹಿಂದೆ ಬರೆದಿರುವ ಸಾಲುಗಳಂತೂ ಒಂದಕ್ಕಿಂತ ಒಂದು ಅದ್ಭುತವಾಗಿರುತ್ತವೆ. ಕೆಲವೊಂದು ತುಂಬಾ ಫನ್ನಿಯಾಗಿದ್ರೆ, ಇನ್ನೂ ಕೆಲವು ಮನ ಮುಟ್ಟುವಂತಿರುತ್ತದೆ. ಇದೀಗ ಅಂತಹದ್ದೇ ಫೋಟೋವೊಂದು ವೈರಲ್‌ ಆಗಿದ್ದು, ತೆಲಂಗಾಣ ಮೂಲದ ಆಟೋ ಡ್ರೈವರ್‌ ಒಬ್ರು ಉಚಿತವಲ್ಲ, ಉದ್ಯೋಗ ಮುಖ್ಯ ಎಂಬ ಸಾಲನ್ನು ಆಟೋದ ಹಿಂದೆ ಬರೆಯುವ ಮೂಲಕ ಸರ್ಕಾರದ ಬಿಟ್ಟಿ ಭಾಗ್ಯದ ವಿರುದ್ಧ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

Viral: ಉಚಿತ ಭಾಗ್ಯವಲ್ಲ, ಉದ್ಯೋಗ ಮುಖ್ಯ… ವೈರಲ್‌ ಆಗ್ತಿದೆ ಆಟೋ ಹಿಂದೆ ಬರೆದ ಅರ್ಥಪೂರ್ಣ ಸಾಲು
ವೈರಲ್ ಪೋಸ್ಟ್​
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Jan 22, 2025 | 7:35 AM

ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ರಾಜಕೀಯ ಪಕ್ಷಗಳು ಹಲವಾರು ತಂತ್ರಗಳನ್ನು ರೂಪಿಸುತ್ತವೆ. ಅಂತಹ ಸ್ಟ್ರಾಟರ್ಜಿಗಳಲ್ಲಿ ಉಚಿತ ಭಾಗ್ಯಗಳು ಕೂಡಾ ಒಂದು. ಇದೇ ತಂತ್ರವನ್ನು ಉಪಯೋಗಿಸಿ ಚುನಾವಣೆಯಲ್ಲಿ ಗೆದ್ದು, ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದಂತೆ, ನಂತರದಲ್ಲಿ ತೆಲಂಗಾಣದಲ್ಲಿ ಅಲ್ಲಿನ ಕಾಂಗ್ರೆಸ್‌ ಸರ್ಕಾರ 6 ಗ್ಯಾರಂಟಿಗಳನ್ನು ಘೋಷಿಸಿತ್ತು. ಆದರೆ ಹೆಚ್ಚಿನವರು ಬಿಟ್ಟಿ ಭಾಗ್ಯಗಳು ಬೇಡ, ಇದರಿಂದ ಸಂಕಷ್ಟ ಎದುರಾಗುವುದು ಪಕ್ಕಾ, ಅದರ ಬದಲಾಗಿ ಜನರಿಗೆ ಉಪಯೋಗವಾಗುವಂತಹ ಯೋಜನೆಗಳನ್ನು ರೂಪಿಸಿ ಎಂದು ಹೇಳಿದ್ದುಂಟು. ಅದರಂತೆ ಇಲ್ಲೊಬ್ರು ಆಟೋ ಡ್ರೈವರ್‌ ಕೂಡಾ “ಉಚಿತವಲ್ಲ, ಉದ್ಯೋಗ ಮುಖ್ಯ” ಎಂದು ಆಟೋದ ಹಿಂದೆ ಕೋಟ್ಸ್‌ ಬರೆಸಿ, ಬಿಟ್ಟಿ ಭಾಗ್ಯಗಳ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಆಟೋ ಹಿಂದೆ ಬರೆದ ಈ ಸಾಲಿನ ಫೋಟೋ ಇದೀಗ ವೈರಲ್‌ ಆಗುತ್ತಿದೆ.

ತೆಲಂಗಾಣದ ಸಿರ್ಸಿಲ್ಲಾ ಜಿಲ್ಲೆಯ ಆಟೋ ಚಾಲಕರಾದ ರಾಂಬಾಬು ಎಂಬವರು ತಮ್ಮ ಆಟೋದ ಹಿಂದೆ “ಉಚಿತವಲ್ಲ, ಉದ್ಯೋಗ ಮುಖ್ಯ” ಎಂಬ ಕೋಟ್ಸ್‌ ಬರೆಸಿ ಸರ್ಕಾರದ ಬಿಟ್ಟಿ ಭಾಗ್ಯದ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಹಿಂದೆ ನೇಕಾರರಾಗಿ ಕೆಲಸ ಮಾಡುತ್ತಿದ್ದ ರಾಂಬಾಬು ಆರೋಗ್ಯ ಸಮಸ್ಯೆಯಿಂದ ಕೆಲಸವನ್ನು ತೊರೆದು ಜೀವನೋಪಾಯಕ್ಕಾಗಿ ಆಟೋ ಓಡಿಸಲು ಶುರು ಮಾಡಿದರು. ಇದೀಗ ಇವರು ತಮ್ಮ ಆಟೋದ ಹಿಂದೆ ಬರೆದ ಸಾಲುಗಳ ಮೂಲಕವೇ ಸಖತ್‌ ಸುದ್ದಿಯಲ್ಲಿದ್ದಾರೆ.

ತಾವು ಆಟೋದ ಹಿಂದೆ ಬರೆದ ಸಾಲುಗಳ ಬಗ್ಗೆ ಮಾತನಾಡಿದ ರಾಂಬಾಬು, “ಬಿಟ್ಟಿ ಭಾಗ್ಯಗಳಿಂದ ಒಳ್ಳೆಯದಕ್ಕಿಂತ ಹಾನಿಯೇ ಹೆಚ್ಚು. ಸರ್ಕಾರಗಳು ಉಚಿತ ಸವಲತ್ತುಗಳನ್ನು ನೀಡುವ ಬದಲು ಯುವಕರನ್ನು ಸಬಲೀಕರಣಗೊಳಿಸುವ ಉದ್ಯೋಗ ಸೃಷ್ಟಿ ಯೋಜನೆಗಳನ್ನು ಜಾರಿಗೊಳಿಸುವತ್ತ ಗಮನ ಹರಿಸಬೇಕು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಬ್ಲಿಕ್‌ನಲ್ಲಿಯೇ ಮುದ್ದಿನ ಹೆಂಡ್ತಿಗಾಗಿ ಗಂಡನ ರೊಮ್ಯಾಂಟಿಕ್‌ ಡ್ಯಾನ್ಸ್;‌ ವೈರಲ್‌ ಆಯ್ತು ವಿಡಿಯೋ

ಕಳೆದ ಹತ್ತು ವರ್ಷಗಳಿಂದ ತಮ್ಮ ಆಟೋದ ಹಿಂದೆ ಒಂದಲ್ಲಾ ಒಂದು ಉತ್ತಮ ಸಾಲು ಅಥವಾ ಕೊಟೇಶನ್ ಬರೆಯುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಸಾರುವ ಕೆಲಸವನ್ನು ಮಾಡುತ್ತಿದ್ದಾರೆ. ಇದೀಗ ಇವರು ಬಿಟ್ಟಿ ಭಾಗ್ಯಗಳ ಕುರಿತು ತಮ್ಮ ಆಟೋದ ಹಿಂದೆ ಬರೆದ ಸಾಲುಗಳು ಭಾರೀ ವೈರಲ್‌ ಆಗಿದ್ದು, ಈ ಮೂಲಕ ರಾಂಬಾಬು ನೆಟ್ಟಿಗರಿಂದ ಪ್ರಶಂಸೆಯನ್ನು ಪಡೆದಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಫಸ್ಟ್ ರ್ಯಾಂಕ್ ರಾಜು, ಜೇಮ್ಸ್ ಬಾಂಡ್ ರಾಜು ಆಗಿದ್ದು ಏಕೆ?
ಫಸ್ಟ್ ರ್ಯಾಂಕ್ ರಾಜು, ಜೇಮ್ಸ್ ಬಾಂಡ್ ರಾಜು ಆಗಿದ್ದು ಏಕೆ?
ಸಮಾಜದ ಎಲ್ಲ ವರ್ಗಗಳನ್ನು ಒಳಗೊಂಡ ಬಜೆಟ್ ಇದಾಗಿದೆ: ಪ್ರಲ್ಹಾದ್ ಜೋಶಿ
ಸಮಾಜದ ಎಲ್ಲ ವರ್ಗಗಳನ್ನು ಒಳಗೊಂಡ ಬಜೆಟ್ ಇದಾಗಿದೆ: ಪ್ರಲ್ಹಾದ್ ಜೋಶಿ
ಹೈಕಮಾಂಡ್ ಹೇಳಿದರೆ ಮಾತ್ರ ಸಿಎಂ ಬದಲಾವಣೆ ಸಾಧ್ಯ: ಸಿದ್ದರಾಮಯ್ಯ
ಹೈಕಮಾಂಡ್ ಹೇಳಿದರೆ ಮಾತ್ರ ಸಿಎಂ ಬದಲಾವಣೆ ಸಾಧ್ಯ: ಸಿದ್ದರಾಮಯ್ಯ
ಸಿದ್ದರಾಮಯ್ಯ ಸರ್ಕಾರದ ಹಾಗೆ ಕೇಂದ್ರವು ತೆರಿಗೆಗಳನ್ನು ಹೆಚ್ಚಿಸಿಲ್ಲ: ಅಶೋಕ
ಸಿದ್ದರಾಮಯ್ಯ ಸರ್ಕಾರದ ಹಾಗೆ ಕೇಂದ್ರವು ತೆರಿಗೆಗಳನ್ನು ಹೆಚ್ಚಿಸಿಲ್ಲ: ಅಶೋಕ
ನಟಿಗೂ ಕಿರುಕುಳ ಕೊಟ್ಟಿದ್ದ, ಸಂಬರ್ಗಿಯನ್ನು ಸುಮ್ಮನೆ ಬಿಡಲ್ಲ: ಪ್ರಕಾಶ್ ರೈ
ನಟಿಗೂ ಕಿರುಕುಳ ಕೊಟ್ಟಿದ್ದ, ಸಂಬರ್ಗಿಯನ್ನು ಸುಮ್ಮನೆ ಬಿಡಲ್ಲ: ಪ್ರಕಾಶ್ ರೈ
ಯುವಕರಿಗಾಗಿಯೇ ನಮ್ಮ ಸರ್ಕಾರ ಹಲವಾರು ಕ್ಷೇತ್ರಗಳನ್ನು ಆರಂಭಿಸಿದೆ: ಪ್ರಧಾನಿ
ಯುವಕರಿಗಾಗಿಯೇ ನಮ್ಮ ಸರ್ಕಾರ ಹಲವಾರು ಕ್ಷೇತ್ರಗಳನ್ನು ಆರಂಭಿಸಿದೆ: ಪ್ರಧಾನಿ
ನ್ಯಾಯಯುತವಾಗಿರುವ ಹಣಕಾಸು ಸಂಸ್ಥೆಗಳ ರಕ್ಷಣೆಯೂ ಮುಖ್ಯ: ದೇವೇಗೌಡ
ನ್ಯಾಯಯುತವಾಗಿರುವ ಹಣಕಾಸು ಸಂಸ್ಥೆಗಳ ರಕ್ಷಣೆಯೂ ಮುಖ್ಯ: ದೇವೇಗೌಡ
ಮದ್ಯಪಾನ ಮಾಡಿ ವಿದ್ಯಾರ್ಥಿಗಳನ್ನು ಥಳಿಸಿದ ಶಿಕ್ಷಕ
ಮದ್ಯಪಾನ ಮಾಡಿ ವಿದ್ಯಾರ್ಥಿಗಳನ್ನು ಥಳಿಸಿದ ಶಿಕ್ಷಕ
ಕಾಲೇಜು ದಿನಗಳಿಂದಲೂ ಸಿಎಂ ಸಿದ್ದರಾಮಯ್ಯಗೆ ಮೈಲಾರಿ ಹೋಟೆಲ್ ತಿಂಡಿ ಇಷ್ಟ
ಕಾಲೇಜು ದಿನಗಳಿಂದಲೂ ಸಿಎಂ ಸಿದ್ದರಾಮಯ್ಯಗೆ ಮೈಲಾರಿ ಹೋಟೆಲ್ ತಿಂಡಿ ಇಷ್ಟ
ಬಸನಗೌಡ ಯತ್ನಾಳ್ ಪಕ್ಷದ ವಿರುದ್ಧ ಯಾವತ್ತೂ ಮಾತಾಡಿಲ್ಲ: ಶ್ರೀರಾಮುಲು
ಬಸನಗೌಡ ಯತ್ನಾಳ್ ಪಕ್ಷದ ವಿರುದ್ಧ ಯಾವತ್ತೂ ಮಾತಾಡಿಲ್ಲ: ಶ್ರೀರಾಮುಲು