Viral: ಪಬ್ಲಿಕ್‌ನಲ್ಲಿಯೇ ಮುದ್ದಿನ ಹೆಂಡ್ತಿಗಾಗಿ ಗಂಡನ ರೊಮ್ಯಾಂಟಿಕ್ ಡ್ಯಾನ್ಸ್; ವೈರಲ್ ಆಯ್ತು ವಿಡಿಯೋ
ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ದೃಶ್ಯಗಳು ಮನಸ್ಸಿಗೆ ಬಹಳನೇ ಖುಷಿ ಕೊಡುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದ್ದು, ವ್ಯಕ್ತಿಯೊಬ್ಬರು ತಮ್ಮ ಪತ್ನಿಗಾಗಿ ಪಬ್ಲಿಕ್‌ನಲ್ಲಿಯೇ ರೊಮ್ಯಾಂಟಿಕ್ ನೃತ್ಯ ಮಾಡಿದ್ದು, ಇವರ ಈ ಸಖತ್ ಡ್ಯಾನ್ಸ್‌ಗೆ ನೋಡುಗರು ಫುಲ್ ಫಿದಾ ಆಗಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ದಂಪತಿಗಳು ನಾಚಿಕೆಯ ಕಾರಣದಿಂದ ಕೈ ಕೈ ಹಿಡಿದು ನಡೆಯಲು ಕೂಡಾ ಹಿಂದೆ ಮುಂದೆ ನೋಡ್ತಾರೆ. ಅಂತದ್ರಲ್ಲಿ ಇಲ್ಲೊಬ್ರು ವ್ಯಕ್ತಿ ಪಬ್ಲಿಕ್‌ನಲ್ಲಿಯೇ ತಮ್ಮ ಪತ್ನಿಗಾಗಿ ರೊಮ್ಯಾಂಟಿಕ್ ಆಗಿರುವಂತಹ ಡ್ಯಾನ್ಸ್ ಒಂದನ್ನು ಮಾಡಿದ್ದಾರೆ. ಹೌದು ಆ ವ್ಯಕ್ತಿ ಹೆಂಡ್ತಿಗಾಗಿ ಯು ಆರ್ ಮೈ ಸೋನಿಯಾ ಎಂಬ ಹಿಂದಿ ಹಾಡಿಗೆ ಸಖತ್ ಆಗಿ ನೃತ್ಯ ಮಾಡಿದ್ದು, ಗಂಡನ ಈ ರೊಮ್ಯಾಂಟಿಕ್ ಡ್ಯಾನ್ಸ್ ಪರ್ಫಾರ್ಮೆನ್ಸ್‌ಗೆ ಹೆಂಡ್ತಿ ನಾಚಿ ನೀರಾಗಿದ್ದಾರೆ. ಈ ಮುದ್ದಾದ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದ್ದು, ಆ ವ್ಯಕ್ತಿಯ ನೃತ್ಯಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬರು ಪಬ್ಲಿಕ್‌ನಲ್ಲಿಯೇ ತಮ್ಮ ಹೆಂಡ್ತಿಗಾಗಿ ರೊಮ್ಯಾಂಟಿಕ್ ಡ್ಯಾನ್ಸ್ ಒಂದನ್ನು ಮಾಡಿದ್ದಾರೆ. ಹೌದು ಇವರು ಹೃತಿಕ್ ರೋಷನ್ ಕಭಿ ಖುಷಿ ಕಭಿ ಘಮ್ ಚಿತ್ರದ ಯು ಆರ್ ಮೈ ಸೋನಿಯಾ ಎಂಬ ಹಾಡಿಗೆ ಯಾವ ಹೀರೋಗೂ ಕಮ್ಮಿಯಿಲ್ಲ ಎಂಬಂತೆ ಸಖತ್ತಾಗಿ ಸ್ಟೆಪ್ಸ್ ಹಾಕಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
Jaishree___tanwar ಹೆಸರಿನ ಎಕ್ಸ್ ಖಾತೆಯಲ್ಲಿ ಈ ಕುರಿತ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದ್ದು, ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಹೆಂಡ್ತಿಗಾಗಿ ಯಾವ ಹೀರೋಗೂ ಕಮ್ಮಿಯಿಲ್ಲದಂತೆ ಸ್ಟೆಪ್ಸ್ ಹಾಕುತ್ತಿರುವ ದೃಶ್ಯವನ್ನು ಕಾಣಬಹುದು. ಇವರ ಈ ಸಖತ್ ಡ್ಯಾನ್ಸ್‌ಗೆ ಅಲ್ಲಿ ನೆರೆದಿದ್ದವರು ಚಪ್ಪಾಳೆ ಶಿಳ್ಳೆಯ ಮೂಲಕ ಪ್ರೋತ್ಸಾಹ ನೀಡಿದ್ರೆ, ಹೆಂಡ್ತಿ ಮಾತ್ರ ಗಂಡನ ರೊಮ್ಯಾಂಟಿಕ್ ಡ್ಯಾನ್ಸ್ ಕಂಡು ನಾಚಿ ನೀರಾಗಿದ್ದಾರೆ.
ಇದನ್ನೂ ಓದಿ: ಸಫಾರಿ ವೇಳೆ ಪ್ರವಾಸಿಗರ ಕಣ್ಮುಂದೆಯೇ ಸಂಗಾತಿಯೊಂದಿಗೆ ಜಗಳಕ್ಕೆ ಇಳಿದ ಹುಲಿರಾಯ; ವಿಡಿಯೋ ವೈರಲ್
5 ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 4.6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼವಾಹ್ಹ್ ವಾಹ್ಹ್ ಎಂತಹ ಅದ್ಭುತ ಡ್ಯಾನ್ಸ್ ಇದುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಯಾವ ಹೀರೋಗೂ ಇವರು ಕಮ್ಮಿಯಿಲ್ಲʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಾನು ನೋಡಿದ ಅದ್ಭುತ ದೃಶ್ಯ ಇದಾಗಿದೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಅವರ ನೃತ್ಯ ಪ್ರದರ್ಶನಕ್ಕೆ ಫುಲ್ ಬೋಲ್ಡ್ ಆಗಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ