Viral: ಸಫಾರಿ ವೇಳೆ ಪ್ರವಾಸಿಗರ ಕಣ್ಮುಂದೆಯೇ ಸಂಗಾತಿಯೊಂದಿಗೆ ಜಗಳಕ್ಕೆ ಇಳಿದ ಹುಲಿರಾಯ; ವಿಡಿಯೋ ವೈರಲ್‌

ಪ್ರಾಣಿ ಸಾಮ್ರಾಜ್ಯಗಳಿಗೆ ಸಂಬಂಧಪಟ್ಟ ಕೆಲವೊಂದು ಕುತೂಹಲಕಾರಿ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇವುಗಳಲ್ಲಿ ಕೆಲವೊಂದು ದೃಶ್ಯಗಳು ತುಂಬಾನೇ ತಮಾಷೆಯಾಗಿದ್ದರೆ, ಇನ್ನೂ ಕೆಲವು ದೃಶ್ಯಗಳು ಬೆಚ್ಚಿ ಬೀಳಿಸುವಂತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್‌ ಆಗಿದ್ದು, ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿರಾಯ ನಾನಾ ನೀನಾ ನೋಡೇ ಬಿಡೋಣ ಎಂದು ಸಂಗಾತಿಯೊಂದಿಗೆ ಕ್ಯೂಟ್‌ ಫೈಟ್‌ ನಡೆಸಿದೆ.

Viral: ಸಫಾರಿ ವೇಳೆ ಪ್ರವಾಸಿಗರ ಕಣ್ಮುಂದೆಯೇ ಸಂಗಾತಿಯೊಂದಿಗೆ ಜಗಳಕ್ಕೆ ಇಳಿದ ಹುಲಿರಾಯ; ವಿಡಿಯೋ ವೈರಲ್‌
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 20, 2025 | 12:21 PM

ಕಾಡಿನಲ್ಲಿರುವ ಬಲಿಷ್ಠ ಪ್ರಾಣಿಗಳಾದಂತಹ ಹುಲಿ, ಸಿಂಹ, ಚಿರತೆ ಇತ್ಯಾದಿ ಪ್ರಾಣಿಗಳು ಆಹಾರಕ್ಕಾಗಿ ಇತರೆ ಸಾದು ಪ್ರಾಣಿಗಳ ಮೇಲೆ ದಾಳಿಯನ್ನು ಮಾಡುತ್ತವೆ. ಇನ್ನೂ ಕೆಲವೊಂದು ಬಾರಿ ಈ ಪ್ರಾಣಿಗಳು ತಮ್ಮ ತಮ್ಮಲ್ಲೇ ಜಗಳವಾಡುತ್ತವೆ. ಪ್ರಾಣಿಗಳು ತಮ್ಮ ಸಂಗಾತಿಗಳ ನಡುವೆ ಜಗಳ ಮಾಡುವಂತಹ ಸಾಕಷ್ಟು ರೋಮಾಂಚನಕಾರಿ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಕಾಣಸಿಗುತ್ತಿರುತ್ತವೆ. ಇದೀಗ ಅಂತಹದ್ದೇ ಫನ್ನಿ ವಿಡಿಯೋವೊಂದು ವೈರಲ್‌ ಆಗಿದ್ದು, ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಬೆಂಗಾಲ್‌ ಟೈಗರ್‌ ತನ್ನ ಸಂಗಾತಿಯೊಂದಿಗೆ ನಾನಾ ನೀನಾ ನೋಡೇ ಬಿಡೋಣ ಎಂದು ಜಗಳಕ್ಕೆ ಇಳಿದಿದೆ. ಈ ತಮಾಷೆಯ ದೃಶ್ಯವನ್ನು ಕಂಡು ನೆಟ್ಟಿಗರು ನಸು ನಕ್ಕಿದ್ದಾರೆ.

ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಕೊಹೊರಾ ಶ್ರೇಣಿಯಲ್ಲಿ ಬೆಂಗಾಲ್‌ ಟೈಗರ್‌ ತನ್ನ ಸಂಗಾತಿಯೊಂದಿಗೆ ಜಗಳವಾಡಿದೆ. ಹೌದು ಪ್ರವಾಸಿಗರ ಕಣ್ಣಮುಂದೆಯೇ ಹುಲಿರಾಯ ಸಂಗಾತಿಯೊಂದಿಗೆ ಫೈಟ್‌ ಮಾಡಿದ್ದು, ಈ ತಮಾಷೆಯ ದೃಶ್ಯ ವೈರಲ್‌ ಆಗುತ್ತಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

atanubhuyan ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಬೆಂಗಾಲ್‌ ಟೈಗರ್‌ ತನ್ನ ಸಂಗಾತಿಯೊಂದಿಗೆ ಕ್ಯೂಟ್‌ ಫೈಟ್‌ ನಡೆಸುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಹೌದು ಹುಲಿಗಳು ಪರಸ್ಪರ ದಿಟ್ಟಿಸಿ ನೋಡುತ್ತಾ ಮುದ್ದಾಗಿ ಜಗಳವಾಡಿವೆ.

ಇದನ್ನೂ ಓದಿ: ಸ್ಕೂಲ್‌ನಲ್ಲಿ ಶಿಕ್ಷಕಿಯೊಂದಿಗೆ ಹೆಡ್‌ ಮಾಸ್ಟರ್‌ ಕಿಸ್ಸಿಂಗ್‌, ರೊಮ್ಯಾನ್ಸ್;‌ ವಿಡಿಯೋ ವೈರಲ್‌

ಜನವರಿ 19 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಹುಲಿಗಳ ನಡುವಿನ ಮುದ್ದಾದ ಫೈಟ್‌ಗೆ ನೆಟ್ಟಿಗರು ಮನ ಸೋತಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ