Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಸ್ಕೂಲ್‌ನಲ್ಲಿ ಶಿಕ್ಷಕಿಯೊಂದಿಗೆ ಹೆಡ್‌ ಮಾಸ್ಟರ್‌ ಕಿಸ್ಸಿಂಗ್‌, ರೊಮ್ಯಾನ್ಸ್;‌ ವಿಡಿಯೋ ವೈರಲ್‌

ಶಾಲೆಯನ್ನು ವಿದ್ಯಾ ದೇಗುಲ ಅಂತ ಕರಿತಾರೆ. ಅಂತಹ ಶಾಲೆಯಲ್ಲಿಯೇ ಹೆಡ್‌ ಮಾಸ್ಟರ್‌ ಹಾಗೂ ಲೇಡಿ ಟೀಚರ್‌ ಒಬ್ರು ನಾಚಿಕೆಗೇಡಿನ ಕೃತ್ಯ ಎಸಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಹೌದು ನಾವು ಶಾಲೆಯಲ್ಲಿ ಇದ್ದೇವೆ ಎಂಬುದನ್ನು ಮರೆತು, ಪರಿಜ್ಞಾನವೇ ಇಲ್ಲದೆ ಶಿಕ್ಷಕಿಯೊಂದಿಗೆ ಹೆಡ್‌ ಮಾಸ್ಟರ್‌ ರೊಮ್ಯಾನ್ಸ್‌ ಮಾಡಿದ್ದು, ಇವರಿಬ್ಬರ ಈ ಹೇಯ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

Viral: ಸ್ಕೂಲ್‌ನಲ್ಲಿ ಶಿಕ್ಷಕಿಯೊಂದಿಗೆ ಹೆಡ್‌ ಮಾಸ್ಟರ್‌ ಕಿಸ್ಸಿಂಗ್‌, ರೊಮ್ಯಾನ್ಸ್;‌ ವಿಡಿಯೋ ವೈರಲ್‌
Head Master Romance With Lady Teacher At School
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on:Jan 19, 2025 | 12:44 PM

ಶಾಲೆಯೆಂಬ ವಿದ್ಯಾ ದೇಗುಲದಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ತಿದ್ದಿ ತೀಡಿ, ಜ್ಞಾನದ ಧಾರೆಯೆರೆದು ಸರಿ ದಾರಿಯಲ್ಲಿ ನಡೆಯುವಂತೆ ಮಾಡುತ್ತಾರೆ. ಆದ್ರೆ ಇಲ್ಲೊಂದು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ದಾರಿದೀಪವಾಗಬೇಕಿದ್ದ ಶಿಕ್ಷಕರೇ ನಾಚಿಕೆಗೇಡಿನ ಕೃತ್ಯ ಎಸಗಿದ್ದಾರೆ. ಹೌದು ಹೆಡ್‌ ಮಾಸ್ಟರ್‌ ಒಬ್ರು ಶಾಲೆಯಲ್ಲಿಯೇ ಲೇಡಿ ಟೀಚರ್‌ ಜೊತೆ ಕಿಸ್ಸಿಂಗ್‌, ರೊಮ್ಯಾನ್ಸ್‌ ಅಂತ ಚಕ್ಕಂದ ಆಡಿದ್ದು, ಇವರಿಬ್ಬರ ಸರಸ ಸಲ್ಲಾಪದ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಕರ್ತವ್ಯವನ್ನು ಮರೆತು ವಿದ್ಯಾ ದೇಗುಲದಲ್ಲಿಯೇ ಇಂತಹ ಹೇಯ ಕೃತ್ಯ ಎಸಗಿದ ಶಿಕ್ಷಕರಿಬ್ಬರ ನಡೆಗೆ ಇದೀಗ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಘಟನೆ ರಾಜಸ್ಥಾನದ ಚಿತ್ತೋರ್‌ಗಢ ಜಿಲ್ಲೆಯಲ್ಲಿ ನಡೆದಿದ್ದು, ಇಲ್ಲಿನ ಗಂಗ್ರಾರ್ ಬ್ಲಾಕ್‌ನ ಸಲೇರಾ ಎಂಬಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಡ್‌ ಮಾಸ್ಟರ್‌ ಮತ್ತು ಲೇಡಿ ಟೀಚರ್‌ ಕರ್ತವ್ಯ ಪ್ರಜ್ಞೆಯನ್ನು ಮರೆತು ರೊಮ್ಯಾನ್ಸ್‌ ಮಾಡಿದ್ದಾರೆ. ಪ್ರಿನ್ಸಿಪಾಲ್‌ ಕೊಠಡಿಯಲ್ಲಿ ಈ ಇಬ್ಬರು ಮುದ್ದಾಡುತ್ತಾ ಸರಸ ಸಲ್ಲಾಪದಲ್ಲಿ ತೊಡಗಿದ್ದು, ಈ ದೃಶ್ಯ ಅಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯವನ್ನು ಯಾರೋ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದು, ವಿದ್ಯಾ ದೇಗುಲದಲ್ಲಿ ನಾಚಿಕೆಗೇಡಿನ ವರ್ತನೆಯನ್ನು ತೋರಿದ ಈ ಇಬ್ಬರೂ ಶಿಕ್ಷಕರನ್ನು ಅಮಾನತು ಮಾಡುವಂತೆ ಆಗ್ರಹಿಸಲಾಗಿದೆ.

News4rajasthan ಹೆಸರಿನ ಎಕ್ಸ್‌ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್‌ ಮಾಡಲಾಗಿದ್ದು, ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ತಮ್ಮ ಕೊಠಡಿಗೆ ಬಂದಂತಹ ಶಿಕ್ಷಕಿಯನ್ನು ತಬ್ಬಿಕೊಂಡು ಆಕೆಯೊಂದಿಗೆ ಹೆಡ್‌ ಮಾಸ್ಟರ್‌ ರೊಮ್ಯಾನ್ಸ್‌ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಪ್ರಜ್ಞೆ ತಪ್ಪಿದ ಮರಿಯನ್ನು ಬಾಯಲ್ಲೇ ಕಚ್ಚಿಕೊಂಡು ಪಶು ಚಿಕಿತ್ಸಾಲಯಕ್ಕೆ ಹೊತ್ತೊಯ್ದ ತಾಯಿ ಶ್ವಾನ, ವಿಡಿಯೋ ವೈರಲ್

ಜನವರಿ 19 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.2 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇಂತಹವರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು. ಇನ್ನೊಂದು ವಿಚಾರ ಏನಪ್ಪಾ ಅಂದ್ರೆ ಇಂತಹ ದೃಶ್ಯಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹರಿ ಬಿಡುವುದು ತಪ್ಪುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಇಬ್ಬರನ್ನೂ ಮೊದಲು ವಜಾ ಗೊಳಿಸಬೇಕುʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಶಿಕ್ಷಕರಿಬ್ಬರ ಈ ನಾಚಿಕೆಗೇಡಿನ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:43 pm, Sun, 19 January 25